ಮನೆ ರಾಜ್ಯ ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ: ಜನಜೀವನ ಅಸ್ತವ್ಯಸ್ತ

ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ: ಜನಜೀವನ ಅಸ್ತವ್ಯಸ್ತ

0

ಮಂಗಳೂರು(ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರಿಯ ಸೇರಿದಂತೆ ವಿವಿಧೆಡೆ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ ಸಂಭವಿಸಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

Join Our Whatsapp Group

ಅದ್ರಲ್ಲೂ ನೆರಿಯ ಗ್ರಾಮದಲ್ಲಿ ರಾತ್ರಿ ಬೀಸಿದ ಭಾರೀ ಗಾಳಿಗೆ ಅತಿ ಹೆಚ್ಚಿನ ಹಾನಿಗಳು ಸಂಭವಿಸಿದೆ. ಅಣಿಯೂರಿನಿಂದ ನೆರಿಯ ಗ್ರಾಮಪಂಚಾಯತಿನವರೆಗೆ ರಸ್ತೆನದಿಯಲ್ಲಿದ್ದ ಮರಗಳು ಧರೆಗೆ ಉರುಳಿದೆ. ಪೆರಿಯಡ್ಕ ರಸ್ತೆಯಲ್ಲಿಯೂ ಐದಕ್ಕೂ ಅಧಿಕ ಮರಗಳು ಉರುಳಿ ಬಿದ್ದಿದೆ, ಅಣಿಯೂರು ಬೀಟಿಗೆ ರಸ್ತೆ, ಅಪ್ಪಿಲ ಕುಕ್ಕೆಜಾಲು ರಸ್ತೆ, ಸೇರಿದಂತೆ ವಿವಿದೆಡೆ ರಸ್ತೆಗಳಿಗೆ ಮರಗಳು ಮುರಿದು ಬಿದ್ದಿದ್ದು ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿದೆ.

ಪ್ರಾಥಮಿಕ ಮಾಹಿತಿಯಂತೆ ಸುಮಾರು 50ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆರಿಯ ಒಂದೇ ಗ್ರಾಮದಲ್ಲಿ ಉರುಳಿ ಬಿದ್ದಿದೆ. ನೆರಿಯ ಸೇರಿದಂತೆ ಸಮೀಪದ ಗ್ರಾಮಗಳಲ್ಲಿಯೂ ವಿದ್ಯುತ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ‌.

ನೆರಿಯ ಗ್ರಾಮದ ಬಹುತೇಕ ಪ್ರದೇಶಗಳಲ್ಲಿ ವ್ಯಾಪಿಸಿದ್ದ ವ್ಯಾಪಕ ಗಾಳಿಗೆ ಅಡಿಕೆ ಹಾಗೂ ರಬ್ಬರ್ ಕೃಷಿಗೂ ವ್ಯಾಪಕವಾಗಿ ಹಾನಿ ಸಂಭವಿಸಿದೆ. ನೂರಾರು ಸಂಖ್ಯೆಯಲ್ಲಿ ಅಡಿಕೆ ಹಾಗೂ ರಬ್ಬರ್ ಮರಗಳು ಮುರಿದು ಬಿದ್ದಿರಯವುದಾಗಿ ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ನೆರಿಯದಲ್ಲಿ ಮರ ಬಿದ್ದು ಮೂರು ಮನೆಗಳಿಗೂ ಹಾನಿ ಸಂಭವಿಸಿದೆ.

ವ್ಯಾಪಕವಾಗಿ ಹಾನಿ ಸಂಭವಿಸಿರುವ ನೆರಿಯ ಗ್ರಾಮದಲ್ಲಿ ಗ್ರಾಮಪಂಚಾಯತು, ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ನೇತೃತ್ವದಲ್ಲಿ ಮರಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ.