ಮನೆ ಸ್ಥಳೀಯ 3ನೇ ಆಷಾಢ ಶುಕ್ರವಾರ: ಚಾಮುಂಡಿ ತಾಯಿಗೆ ನಾಗಲಕ್ಷ್ಮೀ ಅಲಂಕಾರ

3ನೇ ಆಷಾಢ ಶುಕ್ರವಾರ: ಚಾಮುಂಡಿ ತಾಯಿಗೆ ನಾಗಲಕ್ಷ್ಮೀ ಅಲಂಕಾರ

0

ಮೈಸೂರು: ಇಂದು ಮೂರನೇ ಆಷಾಢ ಶುಕ್ರವಾರದ ಹಿನ್ನೆಲೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ದೇವಾಲಯವನ್ನು ವಿವಿಧ ಪುಪ್ಪಗಳಿಂದ ವಿಶೇಷ ಅಲಂಕರಿಸಲಾಗಿತ್ತು.

Join Our Whatsapp Group

ಇಂದು ಬೆಳಗ್ಗೆ 3.30 ರಿಂದಲೇ ಚಾಮುಂಡಿ ತಾಯಿಯ ಮೂಲ ಮೂರ್ತಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ ಮಾಡಲಾಯಿತು. ನಂತರ ಅಲಂಕಾರ ಮಾಡಿ ಭಕ್ತರಿಗೆ ಬೆಳಗ್ಗೆ 5.30 ರಿಂದ ರಾತ್ರಿ 10 ಗಂಟೆ ವರೆಗೆ ನಿರಂತರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 9 ಗಂಟೆಗೆ ಮಹಾಮಂಗಳಾರತಿ ನಡೆದಿದ್ದು, ವಿಶೇಷ ದರ್ಶನ ವ್ಯವಸ್ಥೆ ಜತೆಗೆ ಸಾಮಾನ್ಯ ದರ್ಶನಗಳು ಕಲ್ಪಿಸಲಾಗಿದೆ.

ಮಹಾರಾಜರ ಹೆಸರಿನಲ್ಲಿ ವಿಶಿಷ್ಟ ಉತ್ಸವ: ಇಂದು ಮಹಾರಾಜರ ಹೆಸರಿನಲ್ಲಿ ಮುಡಿ ಉತ್ಸವಗಳು ನಡೆಯುವುದು ವಿಶೇಷವಾಗಿದೆ. ಇನ್ನು ಚಾಮುಂಡಿ ಬೆಟ್ಟದಲ್ಲಿ ನಾಡ ಅಧಿದೇವತೆಗೆ ಆಷಾಢ ಮಾಸದ ಪೂಜೆ ಸಲ್ಲಿಸಲು ಬೆಳಗ್ಗೆ ಜಿಟಿಜಿಟಿ ಮಳೆಯಲ್ಲೇ ಭಕ್ತರು ಆಗಮಿಸಿ, ಸರದಿ ಸಾಲಿನಲ್ಲಿ ನಿಂತು ಆಶೀರ್ವಾದ ಪಡೆದರು.