ಮನೆ ಆರೋಗ್ಯ ಮೂತ್ರದಲ್ಲಿ ಉರಿ : ಭಾಗ 2

ಮೂತ್ರದಲ್ಲಿ ಉರಿ : ಭಾಗ 2

0

ಮುಟ್ಟುನಿಂತ  ಮಹಿಳೆಯರು

ಮಧ್ಯವಯಸ್ಸು ಮುಗಿದು, ಋತುಚಕ್ರ ನಿಂತುಹೋದ ಸ್ತ್ರೀಯರಿಗೆ  ಹಾರ್ಮೋನಿನ ಉತ್ಪಾದನೆಯಲ್ಲಿನ ಬದಲಾವಣೆಗಳಿಂದ ಜನೇಂದ್ರಿಯ ಒಣಗುತ್ತದೆ. ಆದರಿಂದ ಆ ಭಾಗದಲ್ಲಿ ಕೆರೆತ,ಊತಗಳುಂಟಾಗಿ ಮೂತ್ರ ವಿಸರ್ಜನೆಗೆ ತೊಂದರೆ ಉಂಟಾಮಾಡುತ್ತದೆ.

Join Our Whatsapp Group

ಇಂತಹ ಸಮಸ್ಯೆಯಿರುವವರು ಡಾಕ್ಟರನ್ನು ಸಂಪರ್ಕಿಸಿದಲ್ಲಿ,ಆ ಭಾಗಕ್ಕೆ ಹಚ್ಚಿಕೊಳ್ಳಲು ತಕ್ಕ ಕ್ರೀಮುಗಳನ್ನು ಬರೆದುಕೊಳ್ಳುತ್ತಾರೆ. ಅಷ್ಟೇ ಅಲ್ಲದೆ ಜನನೇಂದ್ರಿಯದ ಒಳಪದರ ಸಾಮಾನ್ಯ ಸ್ಥಿತಿಗೆ ಬರಲು ಅಗತ್ಯವಾದ ಹಾರ್ಮೋನ್  ಚಿಕಿತ್ಸೆಯನ್ನೂ ಮಾಡುತ್ತಾರೆ.

ಬಲವಂತ ಸಂಭೋಗ

  ಜನೇಂದ್ರಿಯದ ಒಳಭಾಗ ತೇವಗೊಳ್ಳಲು ಅಗತ್ಯವಾದ ಪ್ರೇರಣೆ ಉದ್ರೇಕಗಳಿಲ್ಲದೆ ನಡೆಯುವ ಬಲವಂತ ರಿತಿಯಲ್ಲಿ ಆಕೆಯ ಒಳಭಾಗದ ಪದರ ಗೀರಿಕೊಳ್ಳುವುದು, ಗಾಯಗಳಾಗುವುದೂ ಆಗುತ್ತದೆ.

ಅದರಿಂದ ತಕ್ಕ ಪ್ರೇರಣೆಯಿಲ್ಲದೆ, ಜನೇಂದ್ರಿಯದ ಒಳಭಾಗವು ತೇವಗೊಳ್ಳದೆ ರತಿ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಕ್ಷೇಮಕರವಲ್ಲ.

ಮೂತ್ರ ವಿಸರ್ಜನಾ ನಾಳದ ಸೋಂಕಿನ ಲಕ್ಷಣಗಳು

 ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿ

ಪದೇ ಪದೇ ಮೂತ್ರ ಮಾಡಬೇಕೆನ್ನಿಸುವುದು

ಮೂತ್ರಕೋಶದಲ್ಲಿ ಒತ್ತಡದ ಅನುಭವ

ಮೂತ್ರದಲ್ಲಿ ರಕ್ತದ ಕಲೆಗಳು

ಕಿಬ್ಬೊಟ್ಟೆಯ ನೋವು, ಇರಿತ

 ಸಾಬೂನಿನ ಬಳಕೆ

ಕೆಲವು ಸ್ತ್ರೀಯರು ತಮ್ಮ ಜನೆಂದ್ರಿಯದ ಬಗೆಗೆ ಅತಿ ಸ್ವಚ್ಛತೆಯನ್ನು ಅನುಸರಿಸುತ್ತಾರೆ. ಅತಿಶುಭ್ರತೆಗಾಗಿ ಮಾಡುವ ಪ್ರಯತ್ನಗಳಲ್ಲಿ ಅವರು ಆ ಭಾಗವನ್ನು ಒಂದೇ ಸಮನೆ ಸಾಬೂನಿನಿಂದ ಉಜ್ಜುತ್ತಾರೆ.

ಸಾಬೂನೆಂದರೆ  ರಾಸಾಯನಿಕಗಳಿಂದ ತಯಾರಾದದ್ದು. ಕೆಲವೊಂದು ಸೊಪ್ಪಿನ  ರಾಸಾಯನಿಕ ವಸ್ತುಗಳು ಹೊಂದದೆ, ಆಸ್ತ್ರೀಗೆ ಮೂತ್ರ ವಿಸರ್ಜನೆಯ ಸಮಯದಲ್ಲಿ ಮೂತ ದ್ವಾರದ ಬಳಿ ಉರಿ ಉಂಟಾಗುವ ಸಂಭವವಿದೆ.

ಜನೇಂದ್ರಿಯದ ಬಳಿ ಸೊಪ್ಪನ್ನು ಹೊರಭಾಗಕ್ಕೆ ಹಚ್ಚಿ, ಆದಷ್ಟು ಬೇಗ ನೀರಿನಿಂದ ತೊಳೆಯುವುದು ಒಳ್ಳೆಯದು. ಸಾಬೂನನ್ನು ಬೆರಳುಗಳಿಂದ ಜನನೇಂದ್ರಿಯದ ಒಳಗೆ ಹಾಕುವುದು ಒಳ್ಳೆಯದಲ್ಲ ಒಂದು ಸಾಬೂನನ್ನು ಸರಿ ಹೊಂದದಿದ್ದರೆ ಅದನ್ನು ಬದಲಾಯಿಸಿ ಮತ್ತಷ್ಟು ಸೌಮ್ಯವಾದ ಬ್ರಾಂಡ್ ಸೋಪನ್ನು ಬಳಸಬೇಕು.

 ಲೈಂಗಿಕ ವ್ಯಾದಿಗಳ ಕಾರಣದಿಂದ ಮೂತ್ರ ವಿಸರ್ಜನೆ  ಮಾಡುವಾಗ ಉರಿಯಿದ್ದು, ಜಿನೇಂದ್ರಿಯದಿಂದ  ಹಸಿರಿನಿಂದ ಕೂಡಿದ ಹಳದಿ ಬಣ್ಣದ ಸ್ರಾವವಾಗುತ್ತಿದ್ದರೆ,ಅದಕ್ಕೆ ರತಿರೋಗ ಕಾರಣ ಆಗಿರಬಹುದು.

ಈ ರೀತಿಯಾಗಿ ಸೋಂಕುವ ಸೋಂಕು ಸಾಮಾನ್ಯವಾಗಿ ಟ್ರೈಕೋ ಮೊನಿಯಾಸಿಸ್ ಆಗಿರುತ್ತದೆ.

ಇದರ ಚಿಕಿತ್ಸೆಗಾಗಿ ಡಾಕ್ಟರ್ ಇಲ್ಲವೇ ಮಾತ್ರೆಗಳೊಂದಿಗೆ ಆೃಂಟಿಬಯಾಟಿಗಳನ್ನು ಬರೆದು ಕೊಡಬಹುದು ಡಾಕ್ಟರ್ ಬ್ರಾಂಚ್ ಕೊಟ್ಟಂತೆ ಔಷಧಗಳ ಗಂಡ ಹೆಂಡತಿ ಕಾಲದಲ್ಲಿ ತೆಗೆದುಕೊಳ್ಳಬೇಕಾಗುತ್ತದೆ

 ಚಿಕಿತ್ಸೆ ಪಡೆಯುತ್ತಿರುವವರೆಗೂ ಪಕೆ ಪತ್ನಿಯರು ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ಎಚ್ಚರಿಕೆ ವಹಿಸಬೇಕು.