ಮನೆ ಕಾನೂನು ಬಾಲ್ಯ ವಿವಾಹ ನಿಷೇಧ ಸರ್ವರಿಗೂ ಅನ್ವಯ: ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು

ಬಾಲ್ಯ ವಿವಾಹ ನಿಷೇಧ ಸರ್ವರಿಗೂ ಅನ್ವಯ: ಕೇರಳ ಹೈಕೋರ್ಟ್‌ ಮಹತ್ವದ ತೀರ್ಪು

0

ಕೊಚ್ಚಿ: “ಬಾಲ್ಯ ವಿವಾಹ ನಿಷೇಧ ಕಾಯ್ದೆ, 2006 ಭಾರತದ ಎಲ್ಲ ನಾಗರಿಕರಿಗೂ ಅನ್ವಯ ವಾಗುವಂಥದ್ದು. ಅದಕ್ಕೆ ಯಾವುದೇ ಧರ್ಮವೂ ಹೊರತಾಗಿಲ್ಲ’ ಎಂಬ ಮಹತ್ವದ ತೀರ್ಪನ್ನು ಕೇರಳ ಹೈಕೋರ್ಟ್‌ ನೀಡಿದೆ.

Join Our Whatsapp Group

ಇಲ್ಲಿ ನಾಗರಿ ಕತ್ವ ಮುಖ್ಯ, ಧರ್ಮಕ್ಕೆ ಬಳಿಕದ ಸ್ಥಾನ ಎಂದು ನ್ಯಾ| ಪಿ.ವಿ. ಕುಂಞಿಕೃಷ್ಣನ್‌ ಅವರಿದ್ದ ಪೀಠ ಹೇಳಿದೆ.

2012ರಲ್ಲಿ ಪಾಲಕ್ಕಾಡ್‌ನ‌ಲ್ಲಿ ನಡೆ ದಿದ್ದ ಬಾಲ್ಯವಿವಾಹ ಪ್ರಕರಣದ ಆರೋಪಿಗಳಾದ ಬಾಲಕಿಯ ತಂದೆ ಮತ್ತು ಉದ್ದೇಶಿತ “ಪತಿ’ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡುವ ವೇಳೆ ಕೇರಳ ಹೈಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಾದ ಮಂಡಿಸುವ ವೇಳೆ ಮುಸ್ಲಿಂ ವೈಯಕ್ತಿಕ ಕಾನೂನನ್ನು ಪ್ರಸ್ತಾವಿಸಿದ್ದ ಅರ್ಜಿದಾರರ ಪರ ವಕೀಲರು, ಬಾಲಕಿ ಪ್ರೌಢಾವಸ್ಥೆಗೆ ಬಂದಿದ್ದ ಕಾರಣ ಆಕೆಗೆ ಮದುವೆ ಮಾಡಿಸುವುದು ತಪ್ಪಲ್ಲ. ಬಾಲ್ಯ ವಿವಾಹ ಕಾಯ್ದೆಯು ಮುಸ್ಲಿಂ ವೈಯಕ್ತಿಕ ಕಾನೂನಿನಿಗಿಂತ ದೊಡ್ಡದಲ್ಲ.