ಮನೆ ಯೋಗಾಸನ ಉರ್ಧ್ವಪದ್ಮಾಸನ

ಉರ್ಧ್ವಪದ್ಮಾಸನ

0

 ‘ಉರ್ಧ್ವ’ವೆಂದರೆ ಮೇಲೆ, ‘ಪದ್ಮಾಸನ ’ಈ ಹಿಂದೆ ವಿವರಿಸಿ ತೋರಿಸಿದಂತೆ ಕಮಲವನ್ನು ಹೊಲುವ ಆಸನ. ಈ ಭಂಗಿಯಲ್ಲಿ ತಲೆಯ ಮೇಲ್ಗಡೆ  ‘ಪದ್ಮಾಸನ’ವನ್ನು ಬಂಧಿಸಿ ಸಮತೋಲನದಲ್ಲಿ ನಿಲ್ಲಿಸಬೇಕಾಗಿದೆ.

Join Our Whatsapp Group

ಅಭ್ಯಾಸಕ್ರಮ

1. ಮೊದಲು ‘ಏಕಪಾದ ಶೀರ್ಷಾಸನ ’ಮತ್ತು ‘ಪಾರ್ಶ್ವೈ ಕ ಪಾದಶೀರ್ಷಾಸನ’  ಈ ಆಸನಗಳ ಅಭ್ಯಾಸಗಳನ್ನು ಮಾಡಿ  ಮುಗಿಸಿದ ಮೇಲೆ ಈ ಆಸನದ ಅಭ್ಯಾಸದಲ್ಲಿ ತೊಡಕಬೇಕು. ಇದರಲ್ಲಿ ಮೊದಲು ಬಲಪಾದವನ್ನು ಎಡತೊಡೆಯಮೇಲೆಯೂ, ಆಮೇಲೆ   ಎಡಪಾದವನ್ನು ಬಲತೊಡೆಯ ಮೇಲೆಯೂ ಸೇರಿಸಿ, ‘ಪದ್ಮಾಸನ’ವನ್ನು ಬಂಧಿಸಬೇಕು.

2. ಆಮೇಲೆ, ಮಂಡಿಗಳನ್ನು ಪರಸ್ಪರ ಒತ್ತಿಟ್ಟು, ತೊಡೆಗಳನ್ನು ನೇರವಾಗಿ ಹಿಗ್ಗಿಸಿರಬೇಕು.

3. ಈ ಭಂಗಿಯಲ್ಲಿ ಆಳವಾದ ಮತ್ತು ಸಮನಾದ ಉಸಿರಾಟದಿಂದ ಸುಮಾರು 30 ಸೆಂಡುಗಳಕಾಲ ನೆಲೆಸಿ, ಬಳಿಕ ಉಸಿರನ್ನು ಹೊರಕ್ಕೆ ಬಿಟ್ಟು, ತೊಡೆಗಳನ್ನು ಆದಷ್ಟು ಹಿಂಬದಿಗೆ ಜಗ್ಗಿಸಿ ಎಳೆದಿಡಬೇಕು.

4. ಈಗ ಕಾಲುಗಳನ್ನು ಬಿಚ್ಚಿ,ಶೀರ್ಷಾಸನದ ಭಂಗಿಗೆ ಹಿಂದಿರುಗಬೇಕು. ಆ ಬಳಿಕ, ಬೇರೆ ಬಗೆಯಲ್ಲಿ ಕಾಲುಗಳನ್ನು ಜೋಡಿಸಿ, ಅಂದರೆ ಮೊದಲು ಎಡಪಾದವನ್ನು ಬಲ ತೊಡೆಯ ಮೇಲೆಯೂ, ಅನಂತರ ಬಲಪಾದವನ್ನು ಎಡತೊಡೆಯ ಮೇಲೆಯೂ  ಇಟ್ಟು ‘ಪದ್ಮಾಸನ’ದ ಭಂಗಿಗೆ ತರಬೇಕು. ಈ ಭಂಗಿಯಲ್ಲಿಯೂ ಅರ್ಧ ನಿಮಿಷದ ಕಾಲ ನಿಂತು,ಆಮೇಲೆ ತೊಳೆಗಳನ್ನು ಹಿಂದಕ್ಕೆ ಎಳೆದಿರಬೇಕು.

5. ತೊಡೆಗಳನ್ನು ಮೇಲಕ್ಕೆ ಹಿಗ್ಗಿಸುವಾಗ ತಲೆಯ ಮತ್ತು ಕತ್ತಿನ ಸ್ಥಾನಗಳನ್ನು ಎಂದಿಗೂ ಸರಿಸಬಾರದು.

ಪರಿಣಾಮಗಳು

ಈ ಭಂಗಿಯು ಬೆನ್ನೆಲುಬಿನ ಬಳಿಯ ಎದೆಯ ಭಾಗಕ್ಕೂ ಪಕ್ಕೆಲುಬು ಮತ್ತು ವಸ್ತಿಕುಹರದ ಪ್ರದೇಶಗಳಿಗೂ ಹೆಚ್ಚಾಗಿ ಸೆಳೆತವನ್ನುಂಟುಮಾಡುವುದು. ಇದರ ಫಲವಾಗಿ ಎದೆಯ ಎದೆಯು ಚೆನ್ನಾಗಿ ವಿಶಾಲಗೊಳ್ಳುವುದು ಮಾತ್ರವಲ್ಲದೆ,ರಕ್ತವು ವಸ್ತಿಕುಹರದ ಭಾಗದಲ್ಲಿ ಸರಿಯಾಗಿ ಪರಿಚಲಿಸುವಂತೆ ಮಾಡುತ್ತದೆ. ಮತ್ತಷ್ಟು ಹಿಗ್ಗಿಸುವ ಸಲುವಾಗಿ, ತಲೆಯ ನಿಲುವು ಭಂಗಿಯನ್ನು ಅಭ್ಯಾಸಿಸುವಾಗ,ಮುಂಡವನ್ನು ಪಕ್ಕಗಳಿಗೆ ತಿರುಚುವುದರ ಮೂಲಕ, ಈ ಭಂಗಿಯ  ಅಭ್ಯಸವನ್ನು ಕೈಗೊಳ್ಳಬೇಕು ಈ ಹೊಸ ಭಂಗಿಯ ಹೆಸರು.