ಮನೆ ಆರೋಗ್ಯ ಮೂತ್ರಪಿಂಡ ಉರಿ: ಭಾಗ 3

ಮೂತ್ರಪಿಂಡ ಉರಿ: ಭಾಗ 3

0

ಮೂತ್ರ ವಿಸರ್ಜನಾ ನಾಳದ ಸೋಂಕು ನಿವಾರಣೆಗೆ ಸೂಚನೆಗಳು

Join Our Whatsapp Group

★ ಮೂತ್ರವನ್ನು ಹಿಡಿದಿರಬಾರದು, ಮೂತ್ರ ವಿಸರ್ಜಬೇಕೆಂದೆನಿಸಿದ ಕೂಡದೆ ಹೋಗಿ ವಿಸರ್ಜಿಸಬೇಕು. ಮೂತ್ರಕೋಶ  ಪೂರ್ತಿಯಾಗಿ ಖಾಲಿಯಾಗುವವರೆಗೂ ಮಾಡಬೇಕು.ಮಧ್ಯದಲ್ಲಿ ನಿಲ್ಲಿಸಕೂಡದು.ಇವುಗಳನ್ನು ಅನುಸರಿಸದೇ ಹೋದರೆ ಬ್ಯಾಕ್ಟೀರಿಯಾ ಸೇರಿಕೊಳ್ಳುತ್ತದೆ.

★ಧಾರಳವಾಗಿ ನೀರು ಕುಡಿಯಬೇಕು. ಹಾಗೆ ಮಾಡಿದರೆ ಮೂತ್ರದ ಮೂಲಕ ಬ್ಯಾಕ್ಟೀರಿಯಾ ಕೊಚ್ಚಿ ಹೋಗುತ್ತದೆ.

★ ಮೂತ್ರ ತೆಳು ಹಳದಿ ಬಣ್ಣವಾಗಿದ್ದರೆ, ನೀವು ಸಾಕಷ್ಟು ನೀರು ಕುಡಿಯುತ್ತಿರುವಿರಿ ಎಂದು ಭಾವಿಸಬೇಕು. ಗಾಢ ಹಳದಿ ಬಣ್ಣವಾದರೆ ಮತ್ತಷ್ಟು ನೀರು ಕುಡಿಯಿರಿ.

★ಜನನೇಂದ್ರಿಯವನ್ನು ಶುಚಿಗೊಳಿಸಲು ಮಾಹಿಶ್ವರೈಸಿಂಗ್  ಸೋಪನ್ನು ಮಾತ್ರ ಬಳಸಿ.

★ಕಾಟನ್ ಪ್ಯಾಂಟಿಗಳನ್ನು ಬಳಸಿ.

★ ಮಲವಿಸರ್ಜನೆಯ ನಂತರ, ಸಾಧಾರಣವಾಗಿ ಸ್ತ್ರೀಯರು ಕೈಗಳನ್ನು ಹಿಂದಿನಿಂದ ಮುಂದಕ್ಕೆ ಚಲಿಸುತ್ತಾ ನೀರಿನಿಂದ ಶುಚಿ  ಮಾಡಿಕೊಳ್ಳುತ್ತಾರೆ. ಇದು ಸರಿಯಾದ ರೀತಿಯಲ್ಲ.

★ಕೈಯನ್ನು ಹಿಂದಿನಿಂದ ಮುಂದಕ್ಕೆ ಚಲಿಸುವುದರಿಂದ ಮಲದ್ವಿರದಿಂದ ಬರುವ ಮಲ ಪದಾರ್ಥ ಜನೆಂದ್ರಿಯಕ್ಕೆ ಅಂಟಿಕೊಂಡು ಅದರೊಡನಿರುವ ಸೂಕ್ಷ್ಮ ಜೀವಿಗಳ ಮೂಲಕ, ಆ ಭಾಗ ಸೋಂಕಿಗಡಾಗಲು ಹಾಳಾಗಲು ದಾರಿಯಾಗುತ್ತದೆ.ಮಲದ್ವಾರ ಜನೇಂದ್ರಿಯ ದ್ವಾರಕ್ಕೆ ಬಹಳ ಹತ್ತಿರ ವಿರುವುದರಿಂದ ಹೀಗಾಗುವ ಅವಕಾಶವಿದೆ.

★ಮಲದ್ವಾರವನ್ನು ಶುಭ್ರಗೊಳಿಸುವ ಸರಿಯಾದ ರೀತಿಯೇನೆಂದರೆ, ಕೈಯನ್ನು ಮುಂದಿನಿಂದ ಹಿಂದಕ್ಕೆಳೆರೆದು.ಈ ಕ್ರಮ ಸ್ವಲ್ಪ ಅಸೌಕರ್ಯವಾಗಿದ್ದರೂ ಕೂಡಾ. ಕೆಲವು ದಿನಗಳಲ್ಲಿ ಇದೇ ರೂಡಿಯಾಗುತ್ತದೆ.

★ರತಿಕ್ರಿಯ ಪೂರ್ಣವಾದ ನಂತರ ಮೂತ್ರ ವಿಸರ್ಜನೆ ಮಾಡಿ ಬರಬೇಕು. ಹಾಗೆ ಮಾಡುವುದರಿಂದ ಪುರುಷಾಂಗದ ಮೂಲಕ ಯಾವುದಾದರೂ ಫ್ಯಾಕ್ಟೀರಿಯಾ ಒಳಗೆ ಸೇರಿದರೆ. ಮೂತ್ರದ ಮೂಲಕ ಹೂವು ಕೊಚ್ಚಿ ಹೋಗುತ್ತವೆ, ಆದರೆ ರತಿಕ್ರಿಯೆ ಆದ ತಕ್ಷಣವೇ  ಮೂತ್ರ ವಿಸರ್ಜನೆ ಮಾಡಬಾರದು. ಸ್ವಲ್ಪ ಹೊತ್ತು ಬಿಡಬೇಕು. ಈ ವಿರಾಮ ವಿಲ್ಲದಿದ್ದರೆ, ಲೈಂಗಿಕ ಉದ್ರೇಕದ ಮೂಲಕ ಉಬ್ಬಿದ ಒಳಗಿನ ಕಣಜಾಲ ಮೂತ್ರಕೋಶವನ್ನು ಪೂರ್ತಿಯಾಗಿ ಖಾಲಿ ಮಾಡದಂತೆ ಅದು ಪಡಿಸುತ್ತವೆ.

★ನೀವೇನಾದರೂ ಗರ್ಭನಿರೋಧಕ ಕ್ರಮವಾಗಿ  ಡಯಾಫ್ರಮ್ ಬಳಸುತ್ತಿದ್ದರೆ ಡಯಾಫ್ರಮ್ ಸರಿಯಾಗಿ ಅಳವಡಿಕೆಯಾಗಿದೆಯೋ ಇಲ್ಲವೋ ಪರೀಕ್ಷಿಸಿಕೊಳ್ಳಿ. ಡಯಾಫ್ರಮ್  ಬಹಳ ದೊಡ್ಡದಾಗಿದ್ದರೆ, ಇಲ್ಲವೇ ಸರಿಯಾಗಿ ಅಳವಡಿಕೆಯಾಗಿದ್ದರೆ ಬ್ಲಾಡರನ್ನು ಖಾಲಿ ಮಾಡಲು ಅಡ್ಡಿಯಾಗಿ,ಒಳಗೆ ಬ್ಯಾಕ್ಟೀರಿಯಾ ವೃದ್ಧಿಯಾಗಲು ಅವಕಾಶವಾಗುತ್ತದೆ

★ಮೂತ್ರದಲ್ಲಿನ ಉರಿ ಎರಡು ದಿನಗಳು ಕಳೆದರೂ ತಪ್ಪದೆ ಮೂತ್ರದಲ್ಲಿ ರಕ್ತವಿದ್ದು ಜ್ವರವು ಇದ್ದರೆ ಆಲಸ್ಯ ಮಾಡದೆ ಡಾಕ್ಟರನ್ನು ಸಂಪರ್ಕಿಸಿ ನೀವೇ ಆೄಂಟಿಬಯಾಟಿಕ್ಸ್ ತೆಗೆದುಕೊಳ್ಳಬೇಡಿ .