ಮನೆ ದೇವರ ನಾಮ ಕಣ್ಣ ನೀರಲ್ಲಿ ನಿನ್ನ ಪಾದವ

ಕಣ್ಣ ನೀರಲ್ಲಿ ನಿನ್ನ ಪಾದವ

0

ಕಣ್ಣ ನೀರಲ್ಲಿ ನಿನ್ನ ಪಾದವ ತೊಳೆಯುವೆ ಗುರುವೆ
ಭಕ್ತಿ ಎಂಬ ಹೃದಯ ಪುಷ್ಪದೇ ಅರ್ಚಿಸುವೆ ಪ್ರಭುವೇ ||
ಪಾಪದಾ ಹೊರೆ ಹೊತ್ತು ಬಂದೆ ನಿನ್ನ ಸನ್ನಿಧಿಗೆ ||
ಮೊರೆಯ ಕೇಳಿ ಕರುಣೆ ತೋರೋ ಭಾಗ್ಯದ ನಿಧಿಯೆ ||
ಸೌಭಾಗ್ಯದ ನಿಧಿಯೆ || ಕಣ್ಣ||

ರಾಘವೇಂದ್ರನ ಜ್ಯೋತಿ ಬೆಳಗೆ ಇರುಳು ಕರಗುವುದು
ರಾಘವೇಂದ್ರನು ಒಲಿದ ವೇಳೆ ಮರಣ ಭಯವಿರದು ||
ರಾಘವೇಂದ್ರನ ಪಾದ ಧೂಳಿ ಬಾಳ ಬೆಳಗುವುದು ||
ರಾಘವೇಂದ್ರ ಎನುತ ಜೀವ ಮುಕ್ತಿ ಪಡೆಯುವುದು ||
ಜಗವ ಮರೆಯುವುದು || ಕಣ್ಣ ||

ನಾನು ಎಂಬ ಸ್ವಾರ್ಥವನ್ನು ತೆಗೆದು ಮನದಿಂದಾ
ನೀನೇ ಎಲ್ಲ ಎಂಬ ತತ್ವವ ತುಂಬು ಮದದಿಂದಾ ||
ನಿನ್ನ ಕರುಣೆ ಇಲ್ಲದಿರಲು ನಾನು ತೃಣದಂತೆ ||
ನೀನು ಬೆರೆತ ಹೃದಯಕೆ ಮುಕ್ತಿ ದೊರೆತಂತೆ ||
ನನಗೆಲ್ಲಿಯ ಚಿಂತೆ || ಕಣ್ಣ ||
ಗುರುವಿಗೆ ಶರಣಂ ಸದ್ಗುರುವಿಗೆ ಶರಣಂ||