ಮನೆ ರಾಜಕೀಯ ಶೀರ್ಷಾಸನದಲ್ಲಿ ಪಿಂಡಾಸನ

ಶೀರ್ಷಾಸನದಲ್ಲಿ ಪಿಂಡಾಸನ

0

 ‘ಪಿಂಡ’ ವೆಂದರೆ ಗರ್ಭಕೋಶದೊಳಗಿರುವ ಜೀವ ಚೈತನ್ಯವಸ್ತು. ತಲೆಯ ನಿಲ್ಲುವ ಭಂಗಿಯಲ್ಲಿಯ ಆ ‘ಪದ್ಮಾಸನ’ದಿಂದ ಟೊಂಕಗಳನ್ನು ಬಗ್ಗಿಸಿ,ಕಾಲುಗಳು ಕಂಕುಳುಗಳನ್ನು ಮುಟ್ಟುವಂತೆ ಅದನ್ನು ಕೆಳಗಿಳಿಸುವುದು.

Join Our Whatsapp Group

ಅಭ್ಯಾಸ ಕ್ರಮ

1. ಈ ಹಿಂದೆ ವಿವರಿಸಿದಂತೆ ‘ಶೀ ರ್ಷಾಸನ’ದಲ್ಲಿಯ ಪದ್ಮಾ ಸನದ ಭಂಗಿಯಲ್ಲಿ ಮೊದಲು ನೆಲಸಬೇಕು. ಬಳಿಕ ಉಸಿರನ್ನು  ಹೊರಕ್ಕೆ ಬಿಟ್ಟು,ಟೊಂಕವನ್ನು ಬಗ್ಗಿಸಿ,ಎರಡು ಸಲ ಉಸಿರಾಟ ನಡೆಸಿ, ಮತ್ತೆ ಉಸಿರನ್ನು ಹೊರಹೋಗಿ ಸುತ್ತ, ಕಾಲುಗಳನ್ನು ತೆಗ್ಗಿಸುತ್ತ. ಕಂಕುಳ ಸಮೀಪದಲ್ಲಿ ತೋಳುಗಳನ್ನು ಮುಟ್ಟಿಸಬೇಕು.

2. ಈ ಬಭಂಗಿಯಲ್ಲಿ ಸುಮಾರು 20 -30 ಸೆಕೆಂಡುಗಳ ಕಾಲ ಸಾಮಾನ್ಯವಾಗಿ ಉಸಿರಾಡುತ್ತಾ ನೆಲೆಸಬೇಕು.

3. ಈಗ ಉಸಿರನ್ನು ಒಳಕ್ಕೆಳೆದು ‘ಊರ್ಧ್ವಪದ್ಮಾಸನ’ಕ್ಕೆ ಮತ್ತೆ ಹಿಂದುರುಗಿ ಕಾಲುಗಳನ್ನು ಬಿಚ್ಚಿ ‘ಶೀರ್ಷಾಸನ’ದಲ್ಲಿ ಸ್ವಲ್ಪ ಕಾಲ ನಿಲ್ಲಬೇಕು. ಆ ಬಳಿಕ ಕಾಲುಗಳಿಂದ ಬೇರೆ ರೀತಿಯಲ್ಲಿ, ಅಂದರೆ ವ್ಯತ್ಯಸ್ತ ಬಗೆಯಲ್ಲಿ ಪಾದಗಳನ್ನು ತೊಳೆಗಳ ಮೇಲೆ ಸೇರಿಸಿ, ‘ಪದ್ಮಾಸನ’ವನ್ನು ರಚಿಸಿ ಭಂಗಿಯಲ್ಲಿ ಮತ್ತೆ ನಿಲ್ಲಬೇಕು.

4. ಆಮೇಲೆ ಅಡಗಿಸಿದ ಕಾಲುಗಳನ್ನು ಒಂದೊಂದಾಗಿ ಬಿಡಿಸಿ, ಅವುಗಳನ್ನು ‘ಶೀರ್ಷಾಸನ’ಕ್ಕೆ ಹಿಂದಿರುಗಿಸಿ,ಅನಂತರ ಉಸಿರನ್ನು ಹೊರಕ್ಕೆ ಬಿಡುತ್ತ, ಮೆಲ್ಲಮೆಲ್ಲಗೆ ನೆರವಾಗಿ ನೆಲದ ಮೇಲಿಳಿಸಬೇಕು.

ಪರಿಣಾಮಗಳು

     ಈ ಭಂಗಿಯಲ್ಲಿ  ಪರಿಣಾಮಗಳು ಹಿಂದಿನ ಭಂಗಿಯಲ್ಲಾಗುವಂತೆಯೇ ಹೌದು. ಇದರ ಜೊತೆಗೆ ಕಿಬ್ಬೊಟ್ಟೆಯೊಳಗಿನ ಅಂಗಗಳ ಸಂಕೋಚನದಿಂದಲೂ ಮತ್ತು ಹೆಚ್ಚಿನ ಪ್ರಮಾಣದ ರಕ್ತವು ಈ ಭಾಗಗಳಿಗೆ ಚೆನ್ನಾಗಿ ಹುರುಪುಗೊಂಡು ಅವು ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಈ ಆಸನ ಭಂಗಿಯು ಬರಲು ನೆರವಾಗುತ್ತದೆ.