ಮನೆ ಮನೆ ಮದ್ದು ಮನೆ ಮುದ್ದು

ಮನೆ ಮುದ್ದು

0

  1. ಪ್ಲೇಟ್ ಪ್ಪನ್ನು ಎಳನೀರಿನಲ್ಲಿ ಹಾಕಿ ಕುಡಿಸಿದರೆ ಮೂತ್ರ ವಿಸರ್ಜನೆ ಆಗುತ್ತದೆ.
  2. ನವಾಸಾಗರವನ್ನು ಎಳನೀರಿನಲ್ಲಿ ಹಾಕಿ ಕುಡಿಸಿದರೆ ಮೂತ್ರ ಕಟ್ಟಿದರೆ ಹೊರಗೆ ಬಂದುಬಿಡುತ್ತದೆ.
  3. ಅಗಸೇಸೊಪ್ಪಿನ ಬೀಜದ ಕಷಾಯವನ್ನು ತಯಾರಿಸಿ ಕುಡಿಸುವುದರಿಂದ ಮೂತ್ರವು ಪ್ರವಾಹ ರೀತಿಯಾಗಿ ಹೊರ ಚೆಲ್ಲಿ ಬಿಡುವುದು ನಿವಾರಣೆ ಆಗುತ್ತದೆ.
  4. ಸೌತೆ ಬೀಜವನ್ನು ನುಣ್ಣಗೆ ಅರೆದು, ಸೈಂಧವ ಲವಣ ಒಂದು ಚಮಚ ಹಾಕಿ ಕುಡಿಸಲು ಮೂತ್ರದ ಕಲ್ಲು ಕರಗಿ ಹೊರಬರುವುದು.
  5. ಬೆಲ್ಲದ ಬೀಜವನ್ನು ತಂದು, ಪುಡಿ ಮಾಡಿ ಎಳನೀರಿನಲ್ಲಿ ಹಾಕಿ ಸಕ್ಕರೆ ಮಿಶ್ರಣ ಮಾಡಿ ಕುಡಿಸಲು ಮೂತ್ರದ ಕಲ್ಲು ಕರಗಿ ಮೂತ್ರ ವಿಸರ್ಜನೆ ಆಗುವುದು.
  6. ಬಾಳೆ ಗಡ್ಡೆಯನ್ನು ತಂದು, ತೊಳೆದು, ತುರಿದು, ರಸವನ್ನು ಹಿಂಡಿ ಕಿರುಕು ಸಾಲೇ ಬೇರಿನರಸದಲ್ಲಿ ಕುಡಿಯಲು ಮೂತ್ರದ ಕಲ್ಲು ನಿವಾರಣೆ ಆಗುವುದು.
  7. ಬಾಳೆ ದಿಂಡಿನ ರಸವನ್ನು ಕುಡಿಸಿದರೂ ಮೂತ್ರದ ಕಲ್ಲು ಕರಗಿ ಮೂತ್ರ ಹೊರ ಬರುವುದು.
  8. ನಾಯಿ ತುಳಸಿ ಎಲೆಯನ್ನು ಕುಟ್ಟಿ ಒಂದು ಲೋಟದ ರಸಕ್ಕೆ ಬೆಲ್ಲ ಬೆರೆಸಿ ಕುಡಿಸಲು ಮೂತ್ರ ಜುಲಾಬು ಆಗುವುದು ಕಲ್ಲು ಕರಗಿ ಹೋಗುವುದು.
  9. ಎಳನೀರಿಗೆ ಹಾಲನ್ನು ಬೆರೆಸಿ ಕಾಲು ತೋಲ ಏಲಕ್ಕಿಯನ್ನು ಪುಡಿ ಮಾಡಿ ಅರೆದು ಐದು ದಿನ ಮಿಶ್ರಣ ಮಾಡಿ ಕುಡಿದರೆ ಮೂತ್ರ ಜಾಡ್ಯಗಳು ಮೂಲವನ್ನು ನಿವಾರಿಸಿ,ಕಲ್ಲು ಕರಗಿಸುವುದರಲ್ಲಿ ಸಹಕಾರಿ.
  10. ಬಿಸಿ ನೀರಿನಲ್ಲಿ ಕರಿಬೇವಿನ ಸೊಪ್ಪನ್ನು ಅರೆದು ಬಿಸಿ ನೀರಿನಲ್ಲೇ ಕುದಿಸಿ ಕುಡಿಯುವುದರಿಂದ ಮೂತ್ರ ಕಟ್ಟಿದರೆ ನಿವಾರಣೆ ಆಗುವುದು.
  11. ಮೂತ್ರದಲ್ಲಿ ರಕ್ತವೂ ಸುರಿಯುತ್ತಿದ್ದರೆ ಉತ್ತರಣಿ ಸೊಪ್ಪಿನ ರಸಕ್ಕೆ ಮೆಣಸಿನ ಚೂರ್ಣ ಬೆರೆಸಿ ಕುಡಿದರೆ,ರಕ್ತ ಸೋರುವುದು ಕಡಿಮೆಯಾಗುವುದು.
  12. ಪದೇ ಪದೇ ಮೂತ್ರ ವಿಸರ್ಜನೆ ಆಗುತ್ತಿದ್ದಾಗ, ದಾಲ್ಚಿನ್ನಿಯವನ್ನು ಕುಡಿ ಮಾಡಿ ಒಂದು ಚಮಚಕ್ಕೆ ಜೇನುತುಪ್ಪ ಬೆರೆಸಿ ನೆಕ್ಕುವುದರಿಂದ ಗುಣವಾಗುವುದು.
  13. ನಿಂಬೆರಸಕ್ಕೆ ಎಳನೀರು ಸೇರಿಸಿ,ಕುಡಿಯುತ್ತಾ ಬಂದರೆ ಅತಿ ಮೂತ್ರದ ದೋಷ ನಿವಾರಣೆ ಆಗುವುದು ಮೂತ್ರದ ಉರಿ ನಿಂತು ಹೋಗುವುದು.
  14. ಸೌತೆಕಾಯಿ ತುರಿದು ಅದರ ರಸ ಹಿಂಡಿ, ಒಂದು ಕಡೆ ಶೇಖರಿಸಿ ಬಾಳೇ ಮೋಕೆಯಲ್ಲಿ ಹೂವಿನ ಭಾಗ ಬಿಡಿಸಿ ಕುಟ್ಟಿ ರಸ ಮಾಡಿ, ಸೌತೆಕಾಯಿ ರಸದೊಂದಿಗೆ ಮಿಶ್ರಣ ಮಾಡಿ ಸೇವಿಸಲು ಮೂತ್ರ ದೋಷ ಬಹು ಮೂತ್ರ ನಿವಾರಣೆ ಆಗುವುದು.
  15. ಹುರುಳಿ ಕಟ್ಟನ್ನು ಸೇವಿಸುತ್ತಾ ಬರಲು ಮೂತ್ರ ದೋಷ ಗುಣವಾಗುವುದು.
  16. ಕಬ್ಬಿನ ಗಾಣಕ್ಕೆ ಕಬ್ಬು ಕೊಡುವಾಗ ಕಬ್ಬನ್ನು ಎರಡು ಭಾಗ ಮಾಡಿ ಅದರಲ್ಲಿ ನಿಂಬೇ ಹೋಳು, ಹಸಿಶುಂಠಿ,ಒಂದು ಹಸುರು ಮೆಣಸಿನಕಾಯಿ ಇಟ್ಟು ಗಾಣ ತಿರುಗಿಸಿದರೆ ಇದರ ರಸ ಬರುತ್ತದೆ ಅದಕ್ಕೆ ಎಳನೀರು ಸೇರಿಸಿ ಕುಡಿದರೆ ಮೂತ್ರ ದೋಷ ನಿವಾರಣೆ ಯಾಗುವುದು.
  17. ಮೊಸರಿಗೆ ಬೆಲ್ಲ ಸೇರಿಸಿ ಕುಡಿಯುವುದರಿಂದ ಮೂತ್ರದ ಕಲ್ಮಷ ನಿವಾರಣೆ ಆಗುತ್ತದೆ.
  18. ನೆಗ್ಗಿಲು ಮುಳ್ಳನ್ನು ತಂದು ಪುಟ್ಟಿ ಅದಕ್ಕೆ ನೀರು ಹಾಕಿ, ಕಷಾಯ ತಯಾರಿಸಿ, ಸಕ್ಕರೆ ಅಥವಾ ಬೆಲ್ಲ ಬೆರೆಸಿ ಕುಡಿಯಲು ಮೂತ್ರದ ದೋಷಗಳು ನಿವಾರಣೆ ಆಗುವುದು.
  19. ಬೂದಗುಂಬಳಕಾಯಿ ತುರಿದು ರಸವನ್ನು ಹಿಂಡಿ ಅದಕ್ಕೆ ನಿಂಬೇರಸ ಸೇರಿಸಿ ಕುಡಿದರೆ ಮೂತ್ರ ರೋಗ ಗುಣವಾಗುವುದು.
  20. ಸೋರೆಕಾಯಿಯನ್ನು ತುರಿದು ರಸವನ್ನು ಹಿಂಡಿ ಅದಕ್ಕೆ ನಿಂಬೇರಸ ಸೇರಿಸಿ ಕುಡಿದರೆ ಮೂತ್ರ ರೋಗಗಳು ಮಾಣವುದು.
  21. ಸೋಂಪುಕಾಳನ್ನು ಕುಟ್ಟಿ ಪುಡಿ ಮಾಡಿ ಒಂದು ಲೋಟ ಹಾಕಿ ಕಷಾಯ ಮಾಡಿ ಕುಡಿದರೆ ಬಹುಮೂತ್ರ ನಿವಾರಣೆ ಆಗುವುದು.