ಮನೆ ರಾಜ್ಯ ಪೊಲೀಸರೇ ಲೋಪ ಎಸಗಿದಾಗ ಪ್ರಶ್ನೆ ಮಾಡುವ ಹಕ್ಕು ಕೂಡ ಸಾರ್ವಜನಿಕರಿಗೆ ಇದೆ: ಪ್ರತಾಪ್ ಸಿಂಹ

ಪೊಲೀಸರೇ ಲೋಪ ಎಸಗಿದಾಗ ಪ್ರಶ್ನೆ ಮಾಡುವ ಹಕ್ಕು ಕೂಡ ಸಾರ್ವಜನಿಕರಿಗೆ ಇದೆ: ಪ್ರತಾಪ್ ಸಿಂಹ

0

ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಆರೋಪ: ಎಸಿಪಿ ವಿರುದ್ಧ ದೂರು

ಬೆಂಗಳೂರು: ಹಿಂದೂ ಸಂಘಟನೆ ಮುಖಂಡ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎಸಿಪಿ ಚಂದನ್ ಕುಮಾರ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ, ಪುನೀತ್ ಕೆರೆಹಳ್ಳಿ ಹಾಗೂ ಶಾಸಕ ಹರೀಶ್ ಪೂಂಜಾ ಅವರು ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್ ಕುಮಾರ್ ಅವರ ಬಳಿ ದೂರು ನೀಡಿದ್ದಾರೆ.

Join Our Whatsapp Group

ಈ ಕುರಿತು ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ಎಸಿಪಿ ಚಂದನ್ ಕುಮಾರ್​ ರಿಂದ ಹಲ್ಲೆ ಕೇಸ್ ದಾಖಲಿಸಿದ್ದೇವೆ. ಪೊಲೀಸರೇ ಲೋಪ ಎಸಗಿದಾಗ ಅದನ್ನು ಪ್ರಶ್ನೆ ಮಾಡುವ ಹಕ್ಕು ಕೂಡ ಸಾರ್ವಜನಿಕರಿಗೆ ಇದೆ. ಇನ್ನು ಕೆಲವು ಪೊಲೀಸರು ಹೀರೋಗಳಾಗುವುದಕ್ಕೆ ಇತರ ಮಾಡುತ್ತಾರೆ. ಇಂತಹ ಘಟನೆ ಆಗಬಾರದು ಎಂದು ಮನವರಿಕೆ ಮಾಡಲು ಬಂದಿದ್ದೇವೆ. ಎಸಿಪಿ ಚಂದನ್ ಅವರ ಮೇಲೆ ನನಗೆ ಯಾವುದೇ ದ್ವೇಷ ಇಲ್ಲ ಎಂದರು.

ಘಟನೆ ವೇಳೆ ಬಂದಂತಹ ಅಬ್ದುಲ್​ ರಜಾಕ್​ ಮೇಲೆ ಯಾವುದೇ ಕೇಸ್​ ದಾಖಲಿಸಲ್ಲ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಅಲ್ಲಿಗೆ ಹೋದವರನ್ನ ಠಾಣೆಗೆ ಕರೆದುಕೊಂಡು ಬಂದು ಹಲ್ಲೆ ಮಾಡ್ತೀರಾ?, ಅವರ ಬಟ್ಟೆ ಬಿಚ್ಚಿಸುತ್ತಿರಾ ಅಥವಾ ಇಲ್ಲಿ ಸಲಿಂಗ ಕಾಮಿಗಳು ಇದ್ದಾರಾ ಎಂದು ಪೊಲೀಸರ ವಿರುದ್ದ ಕಿಡಿಕಾರಿದರು.