ನವದೆಹಲಿ: ರಕ್ತ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಮಾಜಿ ಕ್ರಿಕೆಟರ್ ಅಂಶುಮನ್ ಗಾಯಕ್ವಾಡ್ ಬುಧವಾರ ನಿಧನರಾಗಿದ್ದಾರೆ. 71 ವರ್ಷವಾಗಿದ್ದ ಅಂಶು ಮಾನ್, ವಡೋದರಾದ ಭಾಯಿಲಾಲ್ ಆಸ್ಪತ್ರೆಯಲ್ಲಿ ಚಕಿತ್ಸೆ ಫಲಕಾರಿಯಾಗದೆ
ಕೊನೆಯುಸಿರೆಳೆದಿದ್ದಾರೆ.
ಭಾರತ ಕ್ರಿಕೆಟ್ ತಂಡದ ಪರ 40 ಟೆಸ್ಟ್, 15 ಏಕದಿನ ಪಂದ್ಯಗಳನ್ನಾಡಿರುವ ಅಂಶುಮನ್, 22 ವರ್ಷಗಳ ಕ್ರಿಕೆಟ್ ಬದುಕಿನಲ್ಲಿ 205 ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳನ್ನೂ ಆಡಿದ್ದಾರೆ. ಇದಲ್ಲದೆ, ಭಾರತ ಕ್ರಿಕೆಟ್ ತಂಡಕ್ಕೆ ಕೋಚ್ ಜವಾಬ್ದಾರಿ ಕೂಡ ನಿರ್ವಹಿಸಿದ ಅನುಭವ ಹೊಂದಿದ್ದರು.
ಮಾರಕ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಂಶುಮನ್‌ಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಈ ವೇಳೆ ಸ್ನೇಹಿತನಿಗೆ ನೆರವು ನೀಡುವಂತೆ ಇವರ ಜೊತೆ ಆಟಗಾರ, ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರು ಬಿಸಿಸಿಐಯನ್ನು ಒತ್ತಾಯಿಸಿದ್ದರು. ಇದಾದ ಬೆನ್ನಲ್ಲೇ ಅಂಶುಮನ್ ಚಿಕಿತ್ಸೆಗಾಗಿ ಬಿಸಿಸಿಐ 1 ಕೋಟಿ ರೂ. ಬಿಡುಗಡೆ ಮಾಡಿ, ಸಹಾಯ ಹಸ್ತ ಚಾಚಿತ್ತು.