ಮನೆ ಯೋಗಾಸನ ಸಾಲಂಬ ಸರ್ವಾಂಗಾಸನ

ಸಾಲಂಬ ಸರ್ವಾಂಗಾಸನ

0

ಸಾಲಂಬ ಆಶ್ರಯ  ಅಥವಾ ಅಧಾರವನ್ನು ಹೊಂದಿರುವ ಸರ್ವಾಂಗ ಸಮಸ್ತ ಅವಯವಗಳು ಅಂದರೆ ದೇಹದ ಸಮಸ್ತ ಭಾಗಗಳು ಈ ಭಂಗಿಯಲ್ಲಿ ದೇಹದ ಅವಯವ ಗಳೆಲ್ಲವೂ ವ್ಯಾಯಾಮಕ್ಕೆ ಒಳಗಾಗುತ್ತಾದರಿಂದ  ಆಸನಕ್ಕೆ ಹೆಸರು.

Join Our Whatsapp Group

1. ಮೊದಲು ನೆಲದಲ್ಲಿ ಜಮಖಾಲದ ಮೇಲೆ ಬೆನ್ನು ಕೆಳಗು ಮಾಡಿ ಮಲಗಿ, ಕಾಲುಗಳನ್ನು ನೀಳವಾಗಿ ಚಾಚಿ ಮಂಡಿಭಾಗಳ್ನನು ಬಿಗಿಗೊಳಿಸಬೇಕು. ಕೈಗಳನ್ನು ಕಾಲುಗಳ ಪಕ್ಕಗಳಲ್ಲಿಯೇ ಅಂಗೈಕೆಳಮೊಗ ಮಾಡಿಸಿರಬೇಕು. ಬಳಿಕ ಕೆಲವು ಸಲ ಉಸಿರಾಟ ನಡೆಸಬೇಕು.

2. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು. ಮಂಡಿಗಳನ್ನು ಬಿಗ್ಗಿಸಿ,ಕಾಲುಗಳನ್ನು ಹೊಟ್ಟೆಯ ಕಡೆಗೆ ಸರಿಸಿ, ತೊಡೆಗಳನ್ನು ಹೊಟ್ಟೆಗೆ ಮುಟ್ಟಿಸಿ ಒತ್ತಿಡಬೇಕು. ಮತ್ತೆ ಎರಡು ಸಲ ಉಸಿರಾಟ ನಡೆಸಬೇಕು.

3. ಅನಂತರ, ಉಸಿರನ್ನು ಹೊರ ಹೊಗಿಸುತ್ತ. ಟೊಂಕವನ್ನು ನೆಲದಿಂದ ಮೇಲೆತ್ತಿ ತೋಳುಗಳನ್ನು ಮೊಣಕೈಗಳ ಬಳಿ ಬಾಗಿಸಿ,ಕೈಗಳನ್ನು ಟೊಂಕಗಳ ಮೇಲಿಟ್ಟು ಮತ್ತೆ ಎರಡು ಸಲ ಉಸಿರಾಟ ನಡೆಸಬೇಕು.

4. ಆ ಬಳಿಕ ಮತ್ತೆ ಉಸಿರನ್ನು ಹೊರಕ್ಕೆಬಿಟ್ಟು ಮುಂಡ ಭಾಗವನ್ನು ಮೇಲೆಬ್ಬಿಸಿ ಕೈಗಳ ಆಶ್ರಯದಿಂದ ಅದನ್ನು ನೆಲಕ್ಕೆ ಲಂಬವಾಗುವ ರೀತಿಯಲ್ಲಿ ಗದ್ದವನ್ನು ತಗುಲಿಸುವವರೆಗೂ ಹೆಸರೇ ಏರಿಸಿಡಬೇಕು.

5. ಈ ಸ್ಥಿತಿ ಈ ಸ್ಥಿತಿಯಲ್ಲಿ ತಲೆಯ ಅಥವಾ ಕತ್ತಿನ ಹಿಂಬದಿ ಭುಜಗಳು, ಮೊಣ ಕೈವರೆಗೂ ಇರುವ ತೋಳುಗಳ ಕೆಳಬದಿ ಇವು ಮಾತ್ರ ನೆಲದ ಮೇಲೊರಗಿಸಬೇಕು. ಕೈಗಳನ್ನು ಬೆನ್ನು ಮೂಳೆಯ ನಡುತಾಣದಲ್ಲಿ ಕಾಣಿಸಿದಂತೆ ಇಡಬೇಕು.

6. ತರುವಾಯ, ಉಸಿರನ್ನು ಹೊರಕ್ಕೆಹರಿಸಿ, ಕಾಲುಗಳನ್ನು ನೇರವಾಗಿ ಚಾಚಿ, ಕಾಲಿನ ತುದಿಗಳನ್ನು ಮೇಲ್ಮೊಗ ಮಾಡಿಡಬೇಕು.

7. ಈ ಭಂಗಿಯಲ್ಲಿ, ಸುಮಾರು ಐದು ನಿಮಿಷಗಳ ಕಾಲ ಸಮವಾಗಿ ಉಸಿರಾಟ ನಡೆಸುತ್ತ ನೆಲೆಸಬೇಕು.

8. ಇದಾದ ಮೇಲೆ ಉಸಿರನ್ನು ಹೊರಬಿಟ್ಟು, ಮೆಲ್ಲಗೆ ಕೆಳಕ್ಕೆ ಜಾರಿ, ಕೈಗಳನ್ನು ಬಿಡಿಸಿ, ನೆಲದಮೇಲೆ ಅಂಗಾತವಾಗಿ ಮಲಗಿ ಮಿಶ್ರಮಿಶಿಕೊಳ್ಳಬೇಕು.

9. ಈ ಆಸರೆಯಿಲ್ಲದೆ ಈ ಆಸನ ಭಂಗಿಯನ್ನು ಆಭ್ಯಸಿಸ ಲಾಗದಿದ್ದರೆ ಒಂದು ನಾಗಾಲ್ಮಣೆಯ ಆಶ್ರಯ ಪಡೆದು ಆಸನಾಭ್ಯಾಸದ ತಂತ್ರವನ್ನನುಸರಿಸಬೇಕು.