ಮನೆ ಆರೋಗ್ಯ ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ ಒಂದು

ಸ್ತ್ರೀಯರಲ್ಲಿ ಅಧಿಕ ಮೂತ್ರ ವಿಸರ್ಜನೆ : ಭಾಗ ಒಂದು

0

    ಯಾವ ಸ್ಟೇಯಾಗಲಿ, ಪುರುಷರಾಗಲಿ ಎಷ್ಟು ಬಾರಿ ಮೂತ್ರ ವಿಸರ್ಜನೆಗೆ ಹೋಗಬೇಕು, ಎಷ್ಟು ಬಾರಿ ಹೋಗುತ್ತಾರೆ ನ್ನುವುದು ಅನೇಕ ಅಂಶಗಳನ್ನ ವಲಂಬಿಸಿದೆ. ಅವರಿಗಿರುವ ಅಭ್ಯಾಸಗಳು.ಎಷ್ಟು ದ್ರವ ಪದಾರ್ಥಗಳನ್ನು ಸೇವಿಸುತ್ತಾರೆ, ಅವರ ಮೂತ್ರ ಕೋಶ ಸ್ನಾಯುಗಳು ಎಷ್ಟು ಬಲವಾಗಿವೆ, ಈ ಮೊದಲಾದ ಅಂಶಗಳಿಗೆ ಅನುಗುಣವಾಗಿರುತ್ತದೆ.

Join Our Whatsapp Group

     ಓವರ್ ಸ್ತ್ರೀ ದಿನಕ್ಕೆ ಸರಾಸರಿ ಎರಡರಿಂದ ಆರು ಬಾರಿ ಮೂತ್ರಕ್ಕೆ ಹೋಗುತ್ತಾಳೆ. ಆದರೆ ಕೆಲವು ಸಂದರ್ಭಗಳಲ್ಲಿ ಕೆಲವು ಸನ್ನಿವೇಶಗಳಲ್ಲಿ ಅದಕ್ಕೂ ಮೀರಿ ಹೆಚ್ಚು ಬಾರಿ ಮೂತ್ರಕ್ಕೆ ಹೋಗಬೇಕಾಗಿ ಬರಬಹುದು.ಯಾವಾಗಲಾದರೂಮ್ಮೆ ಹೀಗಾದರೆ ಸರಿ ಪದೇಪದೇ ಹಾಗಾಗುತ್ತಿದ್ದು ಮೂತ್ರ ಬರುತ್ತಿರುವಾಗ ಉರಿದು ಸಹ ಇದ್ದರೆ ಆಕೆ ಖಂಡಿತಾ ಡಾಕ್ಟರ್ ಸಲಹೆ ಪಡೆಯುವುದು ಅಗತ್ಯ.

ಡಯಾಬಿಟಿಸ್ ನಿಂದಾಗಿ

    ★ಮಧುಮೇಹ ವ್ಯಾದಿಯನ್ನು ನಮ್ಮವರು ‘ಅತಿ ಮೂತ್ರ ರೋಗ ’ಎಂದೂ ಕರೆಯುತ್ತಾರೆ ಮೂತ್ರ ವಿಸರ್ಜನೆ ಪುನಃ ಪುನಃ ಆಗುವುದೇ ಅಲ್ಲದೆ ಪ್ರತಿಬಾರಿಯೂ ಅಧಿಕ ಪ್ರಮಾಣದಲ್ಲಿ ಮಾತ್ರ ವಿಸರ್ಜನೆಯಾಗುವುದು ಈ ವ್ಯಾದಿಯ ಮುಖ್ಯ ಲಕ್ಷಣ. ಇತರ ಲಕ್ಷಣಗಳೇಂನೆಂದರೆ :

★ಬಹಳ ಬಾಯಾರಿಕೆ ಯಾಗುವುದು

★ತೂಕ ಕಡಿಮೆಯಾಗುವುದು

★ಕಾರಣವಿಲ್ಲದೆ ಆಯಾಸ, ಬಲಹೀನತೆ

★ಜನನೇಂದ್ರಿಯ ಬಳಿ ಕಡಿತ, ನವೇ ಮೊದಲಾದವು

★  ಈರೋಗ ತಾಯಿ ತಂದೆಯರಿಂದ ಮಕ್ಕಳಿಗೆ ವಂಶ ಪಾರಂಪರೆಯವಾಗಿ ಹರಡುತ್ತದೆ.

★ ಈ ಶರೀರದಲ್ಲಿ ಇನ್ಸುಲಿನ್ ಸಾಕಷ್ಟು ಉತ್ಪತ್ತಿಯಾಗದಿರುವುದು ಈ ರೋಗಕ್ಕೆ ಕಾರಣ ನಾವು ತಿನ್ನುವ ಆಹಾರದಲ್ಲಿ ಕೊಬ್ಬು, ಕರಬೋಹೈಡ್ರೇಟ್ ಗಳನ್ನು ಶತ್ತಿಯಾಗಿ ಮಾರ್ಪಡಿಸಲು ಇನ್ಸುಲಿನ್ ಸಹಾಯ ಮಾಡುತ್ತದೆ. ಇನ್ಶುರೆನ್ಸ್ ಶರೀರದಲ್ಲಿ ಸಾಕಷ್ಟು ಇಲ್ಲದಿರುವಾಗ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಬಹಳ ಇರುತ್ತದೆ.

     ★ ಡಯಾಬಿಟಿಸ್ ಇದೆಯೋ ಇಲ್ಲವೋ ತಿಳಿದುಕೊಳ್ಳಲು, ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಪರೀಕ್ಷೆ ಮಾಡಿಸಿಕೊಳ್ಳಬೇಕಾಗುತ್ತದೆ. ಈ ಟೆಸ್ಟು ಗಳನ್ನು ಹಲವು ದೆಸೆಗಳಲ್ಲಿ  ಮಾಡಿಸಿಕೊಳ್ಳಬೇಕಾಗುತ್ತದೆ ಉಪವಾಸವಿದ್ದು ಆಹಾರ ತಿಂದ ಎರಡು ಗಂಟೆಗಳ ನಂತರ ಈ ರೀತಿಯಾಗಿ..

     ★ಒಂದು ವೇಳೆ ರಕ್ತದಲ್ಲಿ ಸಕ್ಕರೆ ಅಧಿಕವಾಗಿದ್ದರೆ,ಡಾಕ್ಟರ್ ಅದನ್ನು ಕಂಟ್ರೋಲ್ ಮಾಡಲು ಕೆಲವು ಮಾತ್ರೆಗಳನ್ನು ಇಲ್ಲವೇ,ಇನ್ಸುಲಿ ಇಂಜೆಕ್ಷನ್ ಗಳನ್ನು ಶಿಪಾರಸು  ಮಾಡುತ್ತಾರೆ. ರಕ್ತದಲ್ಲಿಸಕ್ಕರೆ ಇಳಿಮುಖವಾಗುತ್ತಲೇ ಮೇಲಿನ ಲಕ್ಷಣಗಳೆಲ್ಲವೂ ಒಂದೊಂದಾಗಿ ಇಲ್ಲವಾಗುತ್ತವೆ.

ಟೀ,ಕಾಫಿ, ಆಲ್ಕೋಹಾಲ್ ಗಳಿಂದ

     ★ಕಾಫಿ, ಟೀ, ಆಲ್ಕೋಹಾಲ್  ಮೊದಲಾದವುಗಳನ್ನು ಹೆಚ್ಚಾಗಿ ತೆಗೆದುಕೊಳ್ಳುತ್ತಿದ್ದಾರೆ ಅಧಿಕ ಮೂತ್ರ ವಿಸರ್ಜಸಲಾ ರಂಭಿಸುತ್ತಾರೆ.

    ★ ಈ ಪಾನೀಯಗಳಲ್ಲಿರುವ ಕೆಫೀನ್ ಮೂತ್ರ ಉತ್ಪಾದನೆಯನ್ನು ಅಧಿಕಗೊಳಿಸುತ್ತದೆ. ಇವುಗಳನ್ನು ಕುಡಿಯುವುದು ಕಡಿಮೆಯಾದ ಕೂಡಲೇ,ಅಧಿಕ ಮೂತ್ರ ವಿಸರ್ಜನೆ ನಿಯಂತ್ರಣಕ್ಕೆ ಬರುತ್ತದೆ.

 ಕೆಲಬಗೆಯ ಔಷಧಿಗಳಿಂದ 

     ಶರೀರದಲ್ಲಿನ ನೀರಿನ ಪ್ರಮಾಣವನ್ನು ತಗ್ಗಿಸಲು ಬಳಸುವ ಕೆಲವು ಬಗೆಯ ಔಷಧಗಳಿಂದಾಗಿಯೂ, ಅಧಿಕ ಮೂತ್ರ  ವಿಸರ್ಜನೆ ಯಾಗುತ್ತದೆ.ಎಂದು ಕರೆಯಲ್ಪಡುವ ಈ ಔಷಧಿಗಳಲ್ಲಿ ಕೆಲವು ಮೊದಲಾದವು ಈ ಔಷಧಗಳು ಹೈಬೀಪಿಯನ್ನು  ಹೃದ್ರೋಯ ಗಗಳನ್ನು, ಲಿವರ್ ಗೆ ಸಂಬಂಧಿಸಿದ ರೋಗಗಳನ್ನು ತಗ್ಗಿಸಲು ಕೂಡಾ ಉಪಯೋಗಿಸಲ್ಪಡುತ್ತವೆ.

   ಚಳಿ ಏರ್ ಕಂಡೀಷನ್ಡ್ ಕೋಣೆಗಳಲ್ಲಿ

     ★ಸಾಧಾರಣವಾಗಿ ನಮ್ಮ ಶರೀರದಲ್ಲಿ ನೀರಿನ ಸ್ವಲ್ಪ ಭಾಗ ಬೆವರಿನ ರೂಪದಲ್ಲಿ ಹೊರ ಬೀಳುತ್ತದೆ. ಆದರೆ ನಾವು ತಂಪಾದ ವಾತಾವರಣದಲ್ಲಿದ್ದಾಗ ಇಲ್ಲವೇ ಹವಾನಿಯಂತ್ರಿಕ ಕೋಣೆಯಲ್ಲಿದ್ದಾಗ ನಮಗೆ ಬೆವರು ಬರದು. ಅಂತಹ ಸಂದರ್ಭಗಳಲ್ಲಿ ಶರೀರದಲ್ಲಿನ ನೀರಿನ ಪ್ರಮಾಣವನ್ನು ಸಮತೋಲನಗೊಳಿಸಲು ಶರೀರ ಮೂತ್ರ ವಿಸರ್ಜನೆ ಮೂಲಕ ನೀರನ್ನು ಹೊರ ಹಾಕುತ್ತದೆ.

   ★ಆಗ ಪದೇ ಪದೇ ಮೂತ್ರಕ್ಕೆ ಹೋಗುವುದೋ. ಇಲ್ಲವೋ ಅಧಿಕ ಮೂತ್ರ ವಿಸರ್ಜನೆ ಮಾಡುವುದೋ ಮಾಡುತ್ತೇವೆ ಇದೂ ಸಹ ಬಹಳ. ಸಹಜ ತಾತ್ಕಾಲಿಕವಾಗಿರುವ ಇಂತಹ ಕುರುತು ಚಿಂತಿಸಬೇಕಾದ ಅಗತ್ಯವಿಲ್ಲ .