ಮನೆ ಕಾನೂನು ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ: ವಿಧೇಯಕ ಅಂಗೀಕರಿಸಿದ ಉತ್ತರಪ್ರದೇಶ ವಿಧಾನಸಭೆ

ಬಲವಂತದ ಮತಾಂತರಕ್ಕೆ ಜೀವಾವಧಿ ಶಿಕ್ಷೆ: ವಿಧೇಯಕ ಅಂಗೀಕರಿಸಿದ ಉತ್ತರಪ್ರದೇಶ ವಿಧಾನಸಭೆ

0

ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನುಗಳನ್ನು ಇನ್ನಷ್ಟು ಕಠಿಣಗೊಳಿಸುವ ನಿಟ್ಟಿನಲ್ಲಿ ‘ಉತ್ತರ ಪ್ರದೇಶ ಕಾನೂನುಬಾಹಿರ ಧರ್ಮ ಪರಿವರ್ತನೆ (ತಿದ್ದುಪಡಿ) ಮಸೂದೆ, 2024’ ಅನ್ನು ಉತ್ತರ ಪ್ರದೇಶ ವಿಧಾನಸಭೆಯು ಮಂಗಳವಾರ ಅಂಗೀಕರಿಸಿದೆ.

Join Our Whatsapp Group

ಮಸೂದೆಯು ಮೋಸದ ಅಥವಾ ಬಲವಂತದ ಮತಾಂತರಗಳಿಗೆ ಜೀವಾವಧಿ ಶಿಕ್ಷೆ ಶಿಫಾರಸು ಮಾಡುತ್ತದೆ. ಈ ಹಿಂದೆ ಗರಿಷ್ಠ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗುತ್ತಿತ್ತು.

ಮಸೂದೆಯು 2021 ರ ಕಾಯಿದೆಯ ಸೆಕ್ಷನ್ 4, 5, ಮತ್ತು 7ಕ್ಕೆ ತಿದ್ದುಪಡಿ ಮಾಡಿದ್ದು ಸೆಕ್ಷನ್ 7ಕ್ಕೆ  ಎರಡು ಉಪ-ಕಲಂಗಳನ್ನು ಸೇರಿಸಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಆಕ್ಷೇಪಕ್ಕೆ ಅವಕಾಶ ನೀಡದೆ ಆರೋಪಿಯ ಜಾಮೀನು ಅರ್ಜಿಯನ್ನು ಪರಿಗಣಿಸದೆ ಇರುವ ಅವಕಾಶವನ್ನು ಈ ತಿದ್ದುಪಡಿಗಳು ಒದಗಿಸಿವೆ.

ಕಾನೂನುಬಾಹಿರ ಮತಾಂತರದ ಅಡಿಯಲ್ಲಿ ಎಲ್ಲಾ ಅಪರಾಧಗಳು ಸಂಜ್ಞೇಯ ಅಪರಾಧಗಳಾಗಿದ್ದು ಜಾಮೀನು ರಹಿತವಾಗಿವೆ ಮತ್ತು ಸೆಷನ್ಸ್‌ ನ್ಯಾಯಾಲಯ ಅಥವಾ ಅದಕ್ಕೂ ಮೇಲ್ಪಟ್ಟ ನ್ಯಾಯಾಲಯಗಳು ಮಾತ್ರ ಅಂತಹ ಪ್ರಕರಣಗಳ ವಿಚಾರಣೆ ನಡೆಸಬಹುದಾಗಿದೆ.

ವ್ಯಕ್ತಿಯೊಬ್ಬ ಮಹಿಳೆ, ಅಪ್ರಾಪ್ತ ವಯಸ್ಕರು ಅಥವಾ ಮತಾಂತರದ ಉದ್ದೇಶದಿಂದ ಯಾರನ್ನಾದರೂ ಬೆದರಿಕೆ ಹಾಕಿದರೆ, ದಾಳಿ ಮಾಡಿದರೆ, ಮದುವೆಯಾಗಲು ಅಥವಾ ಮದುವೆಯಾಗುವುದಾಗಿ ಭರವಸೆ ನೀಡಿದರೆ, ಮದುವೆಯಾಗಲು ಸಂಚು ಮಾಡಿದರೆ ಅಥವಾ ಅಪಹರಿಸಿದರೆ ಅಂತಹ ಅಪರಾಧವನ್ನು ಅತ್ಯಂತ ಗಂಭೀರ ಮತ್ತು 20 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಬಹುದು ಎಂದು ತಿದ್ದುಪಡಿ ಮಸೂದೆಯ ಸೆಕ್ಷನ್‌ 5(3) ವಿವರಿಸುತ್ತದೆ.

ಸೆಕ್ಷನ್‌ 5ರ ಪ್ರಕಾರ ಅಪರಾಧಿಗೆ ವಿಧಿಸಲಾಗುವ ದಂಡವನ್ನು ಸಂತ್ರಸ್ತರ ವೈದ್ಯಕೀಯ ವೆಚ್ಚ ಮತ್ತು ಪುನರ್ವಸತಿಗೆ  ಪಾವತಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ದಂಡದ ಜೊತೆಗೆ ರೂ. ಐದು ಲಕ್ಷ ರೂಪಾಯಿವರೆಗೆ ಪರಿಹಾರ ನೀಡುವಂತೆ ನ್ಯಾಯಾಲಯ ಸೂಚಿಸಬೇಕು ಎಂದು ವಿಧೇಯಕ ತಿಳಿಸಿದೆ.

ತಿದ್ದುಪಡಿ ಮಾಡಲಾದ ಸೆಕ್ಷನ್ 4ರ ಪ್ರಕಾರ, ಬಲವಂತದ ಮತಾಂತರ ಪ್ರಕರಣಗಳಿಗೆ ಸಂಬಂಧಿಸಿದಂತೆ ಯಾರು ಬೇಕಾದರೂ ಎಫ್ಐಆರ್ ದಾಖಲಿಸಬಹುದಾಗಿದೆ. ಈ ಹಿಂದೆ ಸಂತ್ರಸ್ತರು, ಅವರ ಪೋಷಕರು ಅಥವಾ ಒಡಹುಟ್ಟಿದವರು ಮಾತ್ರವೇ ದೂರು ನೀಡಬಹುದಿತ್ತು.

ಮಸೂದೆ ಪ್ರಕಾರಸಾಮಾನ್ಯಅಪರಾಧಗಳಿಗೆಕನಿಷ್ಠ 5 ವರ್ಷ  ಮತ್ತುಗರಿಷ್ಠ 10 ವರ್ಷ ಜೈಲುಶಿಕ್ಷೆ ವಿಧಿಸಬಹುದಾಗಿದ್ದು ದಂಡದ ಮೊತ್ತವನ್ನು ₹ 50,000ಕ್ಕೆ ಹೆಚ್ಚಳ ಮಾಡಿದೆ.