ಮನೆ ರಾಜ್ಯ ಕೆತ್ತಿಕಲ್‌ ನಲ್ಲಿ ಗುಡ್ಡ ಕಡಿದಿರುವ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದ ದಿನೇಶ್ ಗುಂಡೂರಾವ್

ಕೆತ್ತಿಕಲ್‌ ನಲ್ಲಿ ಗುಡ್ಡ ಕಡಿದಿರುವ ಪ್ರಕರಣ: ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದ ದಿನೇಶ್ ಗುಂಡೂರಾವ್

0

ಮಂಗಳೂರು: ನಗರದ ಹೊರವಲಯದ ಕೆತ್ತಿಕಲ್‌ ನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಗುಡ್ಡ ಕಡಿದಿರುವ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.‌

Join Our Whatsapp Group

ಕೆತ್ತಿಕಲ್ ನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ರುವ ಗುಡ್ಡವನ್ನು ವೀಕ್ಷಿಸಿ, ಸ್ಥಳೀಯರ ಅಭಿಪ್ರಾಯ ಪಡೆದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗುಡ್ಡವನ್ನು ಬೇಕಾಬಿಟ್ಟಿ ಅಗೆದು ಮಣ್ಣು ತೆಗೆಯಲಾಗಿದೆ.‌ ಇಲ್ಲಿ ಮಣ್ಣು ಲಾಬಿಯ ಕೈವಾಡವೂ ಇದೆ ಎಂದು ಸ್ಥಳೀಯರು  ಆರೋಪಿಸಿದ್ದಾರೆ. ನಿರಂತರ ಮಳೆಯಾಗುತ್ತಿರುವುದರಿಂದ ಇಲ್ಲಿ ಭೂ ಕುಸಿತದ ಅಪಾಯ ಇದೆ. ಈ ಅವಾಂತರಕ್ಕೆ ಯಾರು ಕಾರಣ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.

ಈ ತನಿಖೆಗೆ ಸೂಚಿಸಿ ಪ್ರಸ್ತಾವ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ಆದೇಶಿಸಿದರು.‌

‘ಹೆದ್ದಾರಿ ಕಾಮಗಾರಿ ಆರಂಭವಾಗುವ ಪೂರ್ವದಿಂದಲೇ ಇಲ್ಲಿ ಮಣ್ಣು ತೆಗೆಯಲಾಗುತ್ತಿದೆ.‌ ನಂತರ ಹೆದ್ದಾರಿ ಪ್ರಾಧಿಕಾರ ರಸ್ತೆ ನಿರ್ಮಾಣದ ನೆಪದಲ್ಲಿ ಇನ್ನಷ್ಟು ಅಪಾಯ ಸೃಷ್ಟಿಸಿದೆ’ ಎಂದು ಸ್ಥಳೀಯರು ಆರೋಪಿಸಿದರು.

ಸ್ಥಳದಲ್ಲಿ ಪಿಎಸ್ ಐ ಮತ್ತು ತಂಡವನ್ನು ನೇಮಿಸಲಾಗಿದ್ದು, ನಿರಂತರ ನಿಗಾವಹಿಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್‌ ಅಗ್ರವಾಲ್ ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲ್ಲೂಕಿನ ಶಿರೂರಿನಲ್ಲಿ ನಡೆದಿರುವ ಭೂ ಕುಸಿತ ಪ್ರಕರಣದ ಅಧ್ಯಯನ ಕ್ಕೆ ಬಂದಿರುವ ಐಐಟಿ ಪ್ರಾಧ್ಯಾಪಕರನ್ನು ಒಳಗೊಂಡ ತಂಡ ಈ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ, ಕೆತ್ತಿಕಲ್ ಪ್ರದೇಶದ ಅಧ್ಯಯನ ‌ನಡೆಸಲಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದರು.