ಈ ಕ್ಷೇತ್ರವು ಸುಮಾರು ಪುರಾತನವಾದದ್ದು 200 ವರ್ಷಗಳ ಹಿಂದೆ ಅನ್ಯಧರ್ಮಿಯರ ಆಕ್ರಮಣದಿಂದ ವಿಗ್ರಹ ನಾಶವಾಗುವುದನ್ನು ತಡೆಯಲು ಹೊನ್ನಲಗೆರೆ ಗ್ರಾಮಕ್ಕೆ ತಂದು ಲಕ್ಷ್ಮಿ ನಾರಾಯಣನನ್ನು ಈ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಿದರು.
ಇಲ್ಲಿ ಶ್ರೀವೈಷ್ಣವ ಸಂಪ್ರದಾಯದಂತೆ ಪಂಚರಾತ್ರ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಶ್ರೀ ಲಕ್ಷ್ಮಿನಾರಾಯಣಸ್ವಾಮಿಯ ವಿಗ್ರಹ ತುಂಬಾ ವಿಶೇಷವಾದಂತಹದು. ಹೊಯ್ಸಳ ಶಿಲ್ಪ ಶೈಲಿಯ ಉಳ್ಳಂತಹ ಸುಂದರವಾದ ಕಲಾಕೃತಿಯಿಂದ ನಿರ್ಮಿತವಾಗಿದೆ. ಮೂಲದಲ್ಲಿ ಇದು ಹೊಯ್ಸಳ ಶಿಲ್ಪಿ ಸೌಂದರ್ಯ ಅಭೂತಪೂರ್ವ ಕಲಾಕೃತಿಯನ್ನು ಹೊಂದಿದಂತ ದೇವಸ್ಥಾನದಿಂದ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವುದರಿಂದ ಜೊತೆಗೆ ಇಲ್ಲಿ ರಾಮಾನುಜಾಚಾರ್ಯರು ಆಳ್ವರು ಎರಡು ವಿಗ್ರಹಗಳನ್ನು ಜೊತೆಯಲ್ಲಿ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿರುವತಂದ್ದು.
ಇನ್ನೊಂದು ವಿಶೇಷ ಲಕ್ಷ್ಮೀನಾರಾಯಣ ವಿಗ್ರಹದ ಪ್ರಭಾವಳಿಯಲ್ಲಿ ದಶಾವತಾರ ಅವತಾರಗಳನ್ನು ಸಣ್ಣದಾಗಿ ವಿಶೇಷ ರೀತಿಯಲ್ಲಿ ಕೆತ್ತನೆ ಮಾಡಿದ್ದಾರೆ. ಶ್ರೀ ಲಕ್ಷ್ಮಿನಾರಾಯಣ ಶಂಖು, ಚಕ್ರ ಗದಾಧಾರಿಯಾಗಿದ್ದಾನೆ. ಬಲ ವಕ್ಷ ಸ್ಥಳದಲ್ಲಿ ಲಕ್ಷ್ಮಿಯ ಒಂದು ಕೆತ್ತನೆಯನ್ನು ಹೊಂದಿದ್ದಾನೆ. ಮತ್ತು ಬಹಳ ಸುಂದರವಾದ ಕಲಾಕೃತಿಯಿಂದ ನಿರ್ವಣ ವಾಗಿರುವಂಥ ಶಿಲ್ಪಿಯ ಕೈಚಳಕ್ಕೆ ಉತ್ತಮವಾದ ನಿರ್ದರ್ಶನವಾಗಿದೆ.
ಶ್ರೀ ಲಕ್ಷ್ಮಿ ನಾರಾಯಣ ವಿಗ್ರಹ ಶ್ರೀವೈಷ್ಣವ ಸಂಪ್ರದಾಯದಂತೆ ಎಲ್ಲಾ ಹಬ್ಬ ಹರಿದಿನಗಳು ಇಲ್ಲಿ ಅಚ್ಚರಿಸುತ್ತಾರೆ.ವೈಕುಂಠ ಏಕಾದಶಿ, ಶ್ರಾವಣ ಮಾಸದಲ್ಲಿ ಬರುವಂತಹ ಶ್ರೀ ಕೃಷ್ಣಾಷ್ಟಮಿಹೀಗೆ ಹಲವಾರು ಹಬ್ಬ ಹರಿದಿನಗಳನ್ನು ಈ ಕ್ಷೇತ್ರದ ದೇವಾಲಯದಲ್ಲಿ ಆಚರಿಸುತ್ತಾರೆ.
ಗ್ರಾಮಸ್ಥರ ಸಹಾಯದಿಂದ ಪ್ರತಿನಿತ್ಯವೂ ದೇವರಿಗೆ ಪೂಜೆಗಳನ್ನು ನಡೆಸುತ್ತಿದ್ದಾರೆ.ಈ ದೇವಸ್ಥಾನವು ಶೀತಲವಾಗಿತ್ತು ದೇವಸ್ಥಾನವನ್ನು ಗ್ರಾಮಸ್ಥರು ಮೂರು ಬಾರಿ ಜೀರ್ಣೋದ್ಧಾರ ಮಾಡಿದರು. 1982ರಲ್ಲಿ ಗ್ರಾಮದ ಯುವ ಮುಖಂಡರು ಸೇರಿ ಇದ್ದಂತ ಸ್ಥಿತಿಯಲ್ಲಿ ಸ್ವಲ್ಪ ಸುದ್ದಿಕರಣ ಮಾಡಿ ಪೂಜೆ ಪುರಸ್ಕಾರಕ್ಕೆ ಅಡ್ಡಿ ಬರದ ಹಾಗೆ ಅಭಿವೃದ್ಧಿಯನ್ನು ಮಾಡಿದರು.
2015ರಲ್ಲಿ ಧರ್ಮಸ್ಥಳದ ಪರಿಷತ್ತಿನವರಿಗೆ ಶೀತಲವಲ್ಲವಾಗಿದ್ದಂತಹ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿ ದೇವಸ್ಥಾನಕ್ಕೆ ಹೊಸ ರೂಪ ಕೊಟ್ಟಿದ್ದಾರೆ. ಈ ಗ್ರಾಮದ ವಿಧಾನ ಪರಿಷತ್ತನ ಸದಸ್ಯರಾದಂತಹ ಶ್ರೀಯುತ ಚಂದ್ರಕಾಲ ರಾಮಕೃಷ್ಣ ಅವರು ಈ ದೇವಸ್ಥಾನದ ಅಭಿವೃದ್ಧಿಗೆ ಹಲವಾರು ಕಾರ್ಯವನ್ನು ಹಮ್ಮಿಕೊಂಡು ಶ್ರಮಿಸುತ್ತಿದ್ದಾರೆ.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಅವರ ಸಹಾಯ ಬಹಳ ಅದ್ಭುತ ಪೂರ್ವವಾಗಿದೆ.ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯವರು ದೇವಾಲಯದ ಕೈಂಕರ್ಯಗಳಲ್ಲಿ ಎಲ್ಲಾ ರೀತಿಯಿಂದಲೂ ಬಹಳ ಸಹಾಯ ಮಾಡಿದ್ದಾರೆ. ಈ ದೇವಾಲಯಗವು11-2-2015 ಪುನರ್ಜೀವನಗೊಳಿಸಿದರು.
ಮಾಘ ಮಾಸ ಶುಕ್ಲ ಪಕ್ಷ ಸ್ವಾತಿ ನಕ್ಷತ್ರದ ದಿನದಂದು ಪ್ರತಿ ವರ್ಷ ಮಾರ್ಷೀಕೋತ್ಸವ ಮಹೋತ್ಸವ ವಾದಿಗಳು ನಡೆಯುತ್ತದೆ.ಮೂರು ದಿನಸ ವಿಜೃಂಭಣೆಯಿಂದ ನಡೆಸುತ್ತಾರೆ ಮೊದಲನೆಯ ದಿನ ಅಂಕರ ಅರ್ಪಣೆ ಧ್ವಜಾರೋಹಣ,ಎರಡನೆಯ ದಿನಸ ಸ್ವಾಮಿಯವರಿಗೆ ಕುಂಭಾಭಿಷೇಕ,ಮೂರನೆಯ ದಿವಸ ಕಲ್ಯಾಣ ಮಹೋತ್ಸವಾದಿ ಶ್ರೀ ಲಕ್ಷ್ಮಿ ನಾರಾಯಣ ಸ್ವಾಮಿಯವರಿಗೆ ತಿರು ಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳುತ್ತಾರೆ.
ಅಕ್ಕ ಪಕ್ಕದ ಗ್ರಾಮಸ್ಥರು ಬಂದು ಮಹೋತ್ಸವದಲ್ಲಿ ಪಾಲ್ಗೊಂಡು ಅವರ ಅಭಿಷ್ಟಗಳನ್ನು ನಿವೇದಿಸಿಕೊಳ್ಳುತ್ತಾರೆ.ಇನ್ನೊಂದು ವಿಶೇಷವೇನೆಂದರೆ ಮದುವೆ ಆಗದೇ ಇರುವವರು, ಸಂತಾನ ಫಲಾಪೇಕ್ಷೆಯಿಂದ ಬಂದವರು ಸ್ವಾಮಿಯ ಸನ್ನಿಧಿಯಲ್ಲಿ ಸಂಕಲ್ಪ ಮಾಡಿ ನಂತರ ವಧು ವರರಿಗೆ ವಿವಾಹ ಆಗುವುದು ಸಂತಾನವಿಲ್ಲದವರಿಗೆ ಸಂತಾನ ಫಲವನ್ನು ಕರುಣಿಸುವುದು ಇಲ್ಲಿನ ವಿಶೇಷ.
ಈ ರೀತಿ ಇಲ್ಲಿ ಶ್ರೀ ಲಕ್ಷ್ಮಿನಾರಾಯಣಸ್ವಾಮಿಯು ಬಹಳ ವಿಶೇಷವಾಗಿದ್ದಾನೆ.ಭಕ್ತರ ಅಭೀಷ್ಟಗಳನ್ನು ಈಡೇರಿಸುತ್ತಾ ಬಂದಿದ್ದಾನೆ.