ಮನೆ ಆರೋಗ್ಯ ಮೈ ನವೆ

ಮೈ ನವೆ

0

1. ಭತ್ತದ ಹುಲ್ಲನ್ನು ಸುಟ್ಟು ಆ ಕರುಕುನ್ನು ನೀರಿನಲ್ಲಿ ಸೇರಿಸಿ ಮೈಗೆ, ಹಚ್ಚಿ ಎರಡು ಗಂಟೆ ಬಿಟ್ಟು ಸ್ಥಾನ ಮಾಡಿದರೆ ನಾವೇ ಕಡಿಮೆಯಾಗುವುದು

Join Our Whatsapp Group

2. ದೊಡ್ಡಪತ್ರೆಯನ್ನು ಹಾಲಿನಲ್ಲಿ ಅರೆದು ಸಕ್ಕರೆ ಬೆರೆಸಿ ಕುಡಿಯುವುದಲ್ಲದೆ ಅದೇ ಸೊಪ್ಪನ್ನು ಅರೆದು ಮೈಗೆ ಹಚ್ಚುತ್ತಾ ಬಂದರೆ ನವೆ ಪರಿಹಾರವಾಗುವುದು.

3. ಗರಿಕೆಯನ್ನು ಶೇಖರಿಸಿ ,ತೊಳೆದು, ಕುಟ್ಟಿ ರಸವನ್ನು ತಯಾರು ಮಾಡಿ ಅದಕ್ಕೆ ಅರಿಶಿನ  ಪುಡಿ ಹಾಕಿ, ಮೈಗೆಲ್ಲಾ ಲೇಪಿಸಲು ನವೆ ಪರಿಹಾರವಾಗುವುದು.

4. ಸೀಬೆ  ಗಿಡದ ಚಿಗುರನ್ನು ತಂದು, ಚೆನ್ನಾಗಿ ಅರೆದು ಅದಕ್ಕೆ ಮೊಸರನ್ನು ಸೇರಿಸಿ ಮೈಗೆ ಸವರಿಕೊಂಡು ಎರಡು ಗಂಟೆ ಬಿಟ್ಟು ಸ್ನಾನ ಮಾಡಿದರೆ ಗುಣವಾಗುವುದು..

5. ಸೋರೆಕಾಯಿಯನ್ನು ತುರಿದು,ಅದರ ರಸವನ್ನು ಹಿಂಡಿಕೊಂಡು ಮೈಗೆಲ್ಲಾ ಸವರಿದರೆ ಮೈ ನವೆ ಹೋಗುವುದು.

6. ಎಲ್ಲಾ ವಿಧವಾದ ಹಣ್ಣುಗಳನ್ನು ತರಕಾರಿಗಳನ್ನು ಸೇವಿಸುವುದರಿಂದ ಮೈ ನವೆ ನಿವಾರಣೆಯಾಗುವುದು

7. ನಿಂಬೆಹಣ್ಣನ್ನು ಪ್ರತಿದಿನ ಸೇವಿಸುತ್ತಿದ್ದರೆ ಮೈನವೆ ಬರುವುದೇ ಇಲ್ಲ.

8. ಪುದೀನಾ ಸೊಪ್ಪಿನ ರಸ ಸೇವಿಸಿ ಅದರ ರಸ ಮೈಗೆ ಹಚ್ಚಿದರೆ ಮೈ ನವೆ ನಿವಾರಣೆ ಆಗುತ್ತದೆ.

9. ಕೊತ್ತಂಬರಿ ಬೀಜದ ಕಷಾಯ ಮಾಡಿ ಕುಡಿದರೆ ಪಿತ್ತ ಶಮಾನವಾಗಿ ಮೈ ನವೆ ಗುಣವಾಗುತ್ತದೆ.