ಮನೆ ಮಾನಸಿಕ ಆರೋಗ್ಯ ಮರೆವಿನ ರೋಗ

ಮರೆವಿನ ರೋಗ

0

      ಜನರಿಗೆ ವಯಸ್ಸಾಗುತ್ತಿದ್ದಂತೆ, ಸಾಮಾನ್ಯವಾಗಿ ಅವರ ಶಕ್ತಿ ಸಾಮರ್ಥ್ಯ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ. ಅವರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಕುಂದುತ್ತದೆ.ಕೆಲವರಲ್ಲಿ ಈ ಬದಲಾವಣೆ,ಅವಧಿಗೆ ಮುಂಚೆಯೇ ಶುರುವಾಗಿ ಬಹಳ ಶೀಘ್ರಗತಿಯಲ್ಲಿ ನಡೆದು ಹೋಗುತ್ತದೆ. ಅವರು ಅಸಮರ್ಧರಾಗುತ್ತಾರೆ. ಮಿದುಳಿನ ನರಕೋಶಗಳು ನಶಿಸಿ ಹೋಗುವುದೇ ಇದಕ್ಕೆ ಕಾರಣ ಈ ಸ್ಥಿತಿಯನ್ನು ಡೆಮೆನ್ಷಿಯ ಎಂದು ಕರೆಯುತ್ತಾರೆ ಹೀಗೆ ನರಕೋಶಗಳಲ್ಲಿ ನಶಿಸಿ ಹೋಗುವುದಕ್ಕೆ ಕಾರಣ ಇನ್ನೂ ಸ್ಪಷ್ಟವಾಗಿ ನಮಗೆ ತಿಳಿದಿಲ್ಲ.

Join Our Whatsapp Group

     45 ವರ್ಷದ ನಾರಾಯಣಪ್ಪ ಬಹಳ ಚೆನ್ನಾಗಿ ವ್ಯಾಪಾರ ಮಾಡುತ್ತಿದ್ದರು ಎರಡು ವರ್ಷದಿಂದ ಅವರು ಗಲ್ಲಾಪೆಟ್ಟಿಗೆಯ ಮೇಲೆ ಕುಳಿತುಕೊಳ್ಳಲು ಅವರ ಮಕ್ಕಳು ಬಿಡುತ್ತಿಲ್ಲ. ಏಕೆಂದರೆ ಈಗ ಅವರಿಗೆ ಸರಳವಾದ ಕೂಡುವ ಕಳೆಯುವ ಲೆಕ್ಕ ಮಾಡುವುದೂ ಮರೆತು ಹೋಗಿದೆ. ನಾರಾಯಣಪ್ಪನವರು ತಮ್ಮ ಒಳ್ಳೆಯ ಸ್ವಭಾವದಿಂದ. ಶಾಂತ ಚಿತ್ತತೆಯಿಂದ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಈ ನಡುವೆ ಅವರು ಮುಂಗೋಪಿಗಳಾಗಿದ್ದಾರೆ.ಎಲ್ಲರ ಮಲ್ಲೆ ಕೂಗಾಡಿಬಿಡುತ್ತಾರೆ.ಅನೇಕ ಸಲ, ತಮ್ಮ ಅಂಗಡಿಗೆ ಬರುವ ಹಳೇ ಗಿರಾಕಿಗಳನ್ನು ಸ್ನೇಹಿತರನ್ನು ಗುರುತು ಹಿಡಿಯುವುದಿಲ್ಲ.ಮನೆಯಿಂದ ಅಂಗಡಿಗೆ ಬರುವಾಗ ಎರಡು ಸಲ ದಾರಿ ತಪ್ಪಿ ಪರದಾಡಿದರು. ಆದ್ದರಿಂದ ಅವರನ್ನು ಒಬ್ಬರೇ ಹೋಗಲು ಮನೆಯವರು ಬಿಡುವುದಿಲ್ಲ. ಅವರ ಹೆಂಡತಿ ಗಮನಿಸಿದಿದ್ದರೆ,ಅವರು ಶರಟನ್ನು ತಿರುವು ಮುರುವು ಹಾಕಿಕೊಳ್ಳುತ್ತಾರೆ, ಗುಂಡಿ ಹಾಕಲು ಮರೆಯುತ್ತಾರೆ.ಅವರ ಮಿದುಳಿನ ವಿಶೇಷ ಎಕ್ಸ್ ರೇ ಚಿತ್ರ ತೆಗೆದಾಗ,ಅವರ ಮಿದುಳಿನ ಬಹು ಭಾಗ ನಶಿಸಿಹೋಗಿದ್ದಿದ್ದು ಕಂಡು ಬಂತು. 

         ಫರಂಗಿ ರೋಗವು ಲೈಂಗಿಕ ಸಂಪರ್ಕದಿಂದ ಮಾತ್ರ ಒಬ್ಬರಿಂದ ಒಬ್ಬರಿಗೆ ಹರಡುವ ಲೈಂಗಿಕ ರೋಗ .ಪ್ರಾರಂಭದಲ್ಲಿ ಚಿಕಿತ್ಸೆ ನಡೆಸಿ ಅದನ್ನು ಬುಡಮಟ್ಟ ತೆಗೆಯದೇ ಹೋದರೆ, ಕೆಲವು ವರ್ಷಗಳ ನಂತರ ಅದು ಮಿದುಳನ್ನು ಆವರಿಸಿ ಅದನ್ನು ಹಾಳುಮಾಡಿ ಡೆಮೆನ್ಷಿಯಾವನ್ನು ತರುತ್ತದೆ.

        ಕ್ಯಾನ್ಸರ್, ಮಿದುಳನ್ನೂ ಬಿಡುವುದಿಲ್ಲ ಕ್ಯಾನ್ಸರ್ ಗೆಡ್ಡೆ ಮಿದುಳಿನ ಭಾಗವನ್ನು ಹಾಳುಗೆಡುವುತ್ತದೆ. ಮಿದುಳಿನ ಯಾವ ಭಾಗದಲ್ಲಿ ಗೆಡ್ಡೆ ಬೆಳೆದಿದೆ ಎನ್ನುವುದರ ಮೇಲೆ ರೋಗ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ.ಮಿದುಳಿನ ಭಾಗದಲ್ಲಿ ಬೆಳೆದ ಗೆಡ್ಡೆಗಳಿಂದ, ರೋಗಿ ಚಿತ್ತವಿಕಲತೆಯ ಚಿಹ್ನೆಗಳಿಂದ ಬಳಸಬಹುದು.ಚಿಕ್ಕದಾಗಿದ್ದಾಗಲೇ ಈ ಗೆಡ್ಡೆಯನ್ನು ಗುರುತಿಸಿ, ಶಸ್ತ್ರಚಿಕಿಸ್ತೆಯಿಂದ ತೆಗೆದುಹಾಕಿದರೆ, ರೋಗಿ ಸುಧಾರಿಸುತ್ತಾನೆ.

      ಕೆಲವರಲ್ಲಿ ರಕ್ತನಾಳಗಳು ಪೆಡ ಸಾಗುತ್ತವೆ. ಅದರಿಂದ ಅವುಗಳಲ್ಲಿ ಹರಿಯುವ ರಕ್ತದ ಪ್ರಮಾಣ ಕಡಿಮೆಯಾಗುತ್ತದೆ. ಆಗ  ಮಿದುಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಪೂರೈಕೆ ಆಗುವುದಿಲ್ಲ; ಗ್ಲುಕೋಸ್  ಮತ್ತು ಆಮ್ಲಜನಕದ ಕೊರತೆಯಿಂದ ಮಿದುಳಿನ  ನರಕೋಶಗಳು ನಶಿಸಿಹೋಗಲು ಪ್ರಾರಂಭವಾಗುತ್ತವೆ. ಇನ್ನು ಕೆಲವರಲ್ಲಿ ಅಧಿಕ ರಕ್ತ ಒತ್ತಡದಿಂದಲೋ, ಸಕ್ಕರೆ ಖಾಯಿಲೆಯಿಂದಲೋ ಮತ್ಯಾವುದು ಕಾರಣದಿಂದ ಆಗಾಗ್ಯೆ ಮಿದುಳಿನ ರಕ್ತಸ್ರಾವವಾಗಿ ಮಿದುಳಿನ ನರಕೋಶಗಳು ಹಾಳಾಗತೊಡಗುತ್ತವೆ. 

     ಮಿದುಳಿನ ನರಕೋಶಗಳು ನಶಿಸಿಹೋದರೆ, ಮಿದುಳಿನ ಒಂದು ಭಾಗ ಹಾಳಾದರೆ ಅದನ್ನು ಸರಿಪಡಿಸ ಬಲ್ಲದಂತಹ ಔಷಧಗಳು ಲಭ್ಯವಿಲ್ಲ.ರೋಗಿಗೆ, ಮನೆಯವರಿಗೆ ಈ ನ್ಯೂನ್ಯತೆಯನ್ನು ಒಪ್ಪಿಕೊಳ್ಳದೆ ಬೇರೆ ದಾರಿಯೇ ಇಲ್ಲ ಚಿಕಿತ್ಸೆ  ಮಾಡಬಲ್ಲವಂತಹ ಕಾರಣಗಳಿದ್ದರೆ ಉದಾಹರಣೆ, ಫರಂಗಿ ರೋಗ, ಕ್ಯಾನ್ಸರ್ ಗೆಡ್ಡೆ, ಕ್ಷಯದ ಗಡ್ಡೆ, ಕೀವು ಅಥವಾ ರಕ್ತದ ಹೆಪ್ಪು ಸೂಕ್ತ ಚಿಕಿತ್ಸೆ ಮಾಡಿ ಮಿದುಳಿನ ಮತ್ತಷ್ಟು  ನಶಿಸುವುದನ್ನು ತಡೆಗಟ್ಟಬಹುದು. ನಂತರ ರೋಗಿಯನ್ನು ಆತನು ಇರುವವರೆಗೆ ಮುತುವರ್ಜಿಯಿಂದ. ಒಳ್ಳೆಯ  ಶುಶ್ರೂಷೆ ಮಾಡಿ, ನೋಡಿಕೊಳ್ಳಬೇಕು 

     ಆನಂದ 25 ವರ್ಷದ ಯುವಕ ಸ್ಕೂಟರ್ ನಿಂದದ ಬಿದ್ದು ತಲೆಗೆ ಗಾಯ ಮಾಡಿಕೊಂಡ ಪ್ರಜ್ಞೆ ಏನು ತಪ್ಪಿಲಿಲ್ಲ. ತಾನೇ ಎದ್ದು ಹತ್ತಿರದಲ್ಲಿದ್ದ ವೈದ್ಯರನ್ನು ಕಂಡು  ಗಾಯಕ್ಕೆ ಪಟ್ಟಿಮಾಡಿಸಿಕೊಂಡ.ಮೂರು ತಿಂಗಳ ತನಕ ಯಾವ ತೊಂದರೆಯೂ ಇರಲಿಲ್ಲ. ಆಮೇಲೆ ಆತನಿಗೆ ತಲೆನೋವು ಬರಂಲಾರಂಭಿಸಿತು. ತಲೆಯ ನೋವು ಸದಾ ಇರುತ್ತಾ, ದಿನೇ ದಿನೇ ಹೆಚ್ಚಾಗತೊಡಗಿತು  ಆನಂದ  ಸಿಡುಕನಾದ ಕೆಲಸ ಮಾಡುವಾಗ ತಪ್ಪುಗಳಾಗತೊಡಗಿದವು. ಕೆಲವು ಸಾರಿ ಮಂಕನಂತೆ ಒಂದು ಕಡೆ ಕುಳಿತುಕೊಂಡು ಬಿಡುತ್ತಿದ್ದ.ಹಣದ ವಿಚಾರದಲ್ಲಿ ಆ ಅಜಾಗರೂತನಾದ. ಗಾಭರಿಗೊಂಡ ಅವನ ಹೆಂಡತಿ, ತಜ್ಞರ ಬಳಿಗೆ ಆತನನ್ನು ಕರೆದೊಯ್ದುಳು ವಿಶೇಷ ಎಕ್ಸ್ ರೆ ಚಿತ್ರ ತೆಗೆದಾಗ ತಲೆಬುರುಡೆ ಮತ್ತು ಮಿದುಳಿನ ನಡುವೆ ಒಂದೆರಡು ರಕ್ತ ಹೆಪ್ಪುಗಟ್ಟಿತ್ತು ತಕ್ಷಣ ಚಿಕಿತ್ಸೆ ನಡೆಸಿ ಹೆಪ್ಪನ್ನು ತೆಗೆದು ಹಾಕಿದ ಮೇಲೆ,ಆನಂದ ಪೂರ್ಣವಾಗಿ ಚೇತರಿಸಿಕೊಂಡ.