ಮನೆ ಯೋಗಾಸನ ಸಾಲಾಂಬ ಸರ್ವಾಂಗಾಸನ

ಸಾಲಾಂಬ ಸರ್ವಾಂಗಾಸನ

0

ಆ ಬಂಗಿ ಅಭ್ಯಾಸವು ಹಾಸನದಿಂದ ಒಂದಕ್ಕಿಂತಲೂ ಕಷ್ಟಕರವಾದದ್ದು

Join Our Whatsapp Group

ಅಭ್ಯಾಸ ಕ್ರಮ

1.ಮೊದಲು ‘ಸಲಾಂಬ ಸರ್ವಾಂಗಾಸನ’ ಒಂದು ನ್ನು ಮಾಡಿ ಮುಗಿಸಬೇಕು.

2. ಬಳಿಕ, ಮುಂಡದ ಹಿಂಬದಿ ಗಿಟ್ಟ ಕೈಗಳನ್ನು ತೆಗೆದು,ಕೈ ಬೆರಳುಗಳನ್ನು ಒಂದರಲ್ಲೊಂದು ಸೇರಿಸಿ ಹೆಣೆದು,ಮಣಿಕಟ್ಟುಗಳನ್ನು ತಿರುಗಿಸಿ,ತೋಳುಗಳನ್ನು ನೀಳವಾಗಿ ಚಾಚಬೇಕು. ಆಗ ಹೆಬ್ಬೆರಳುಗಳು ನೆಲವನ್ನಂಟಿ ಅಂಗೈಗಳು ಮೇಲ್ಮೊಗವಾಗಿರುತ್ತವೆ, ಇದರಲ್ಲಿ ನೇರವಾಗಿ ಮೇಲೆತ್ತಿ  ನಿಲ್ಲಿಸಿದ ದೇಹದ ಒಂದು ಕಡೆ ತಲೆ ಮತ್ತೊಂದು ಕಡೆ ನೀಳವಾಗಿ ಚಾಕಿಟ್ಟು ತೋಳುಗಳು ಹೀಗೆ ಇರುತ್ತವೆ.

3. ಈ ಭಂಗಿಯಲ್ಲಿ ಕಾಲುಗಳನ್ನೂ ಬೆನ್ನನ್ನೂ ಆದಷ್ಟು ಚಲಿಸದಂತೆ ಸ್ತಬ್ದವಾಗಿ ನಿಲ್ಲಿಸಬೇಕು.

4. ಸರ್ವಾಂಗಾಸನ ಒಂದುನ್ನು ಮಾಡಿ ಮುಗಿಸಿದ ಮೇಲೆ ಆ ಭಂಗಿಯಲ್ಲಿ ಸುಮಾರು ಒಂದು ನಿಮಿಷದ ಕಾಲ ನೆಲೆಸಬೇಕು.

ಪರಿಣಾಮಗಳು

      ಈ ಭಂಗಿಯಲ್ಲಿ ಬೆನ್ನಿನ ಮಾಂಸ ಖಂಡಗಳನ್ನು ಹಿಗ್ಗಿಸಿ ಸಮತೋಲನ ಸ್ಥಿತಿಯಲ್ಲಿಡುವುದರಿಂದಲೂ ಮತ್ತು ದೇಹದ ಭಾರವೆಲ್ಲವನ್ನೂ ಕತ್ತಿನ ಹಿಂಭಾಗವೇ ವಹಿಸುವುದರಿಂದಲೂ ಬೆನ್ನು ಮತ್ತು ಕತ್ತು ಬಲಗೊಳ್ಳುವವು, ಅಲ್ಲದೆ ತೋಳುಗಳ ಮಾಂಸಖಂಗಳು ಹುರುಪುಗೊಳ್ಳುವವು.

 ನೀರಾಲಂಬ ಸರ್ವಾಂಗಾಸನ ಒಂದು :-

 ‘ನೀರಾಲಂಬ’ವೆಂದರೆ ಅಧಾರ ಅಥವಾ ಆಸರೆಯಿಲ್ಲದ್ದು ಎಂದರ್ಥ. ಇದು ‘ಸಲಾಂಬ’ಕ್ಕೆ  ವಿರುದ್ಧ ಏಕೆಂದರೆ ‘ಸಲಾಂಬ’ಕ್ಕೆ  ಆಸರೆಯಿದೆ. ಇದು ಸಲಂಬಾಸನದ ವ್ಯತ್ಯಾಸ ಭಂಗಿಯೆನಿಸಿದ ಇದು, ಹಿಂದಿನ ಎರಡು ಆಸನಗಳಿಗಿಂತ ಕಷ್ಟಕರ. ಈ ಆಸನಕ್ಕೆ  ತೊಳುಗಳ ಆಸರೆಯಿಲ್ಲದಿರುವುದೇ ಇದಕ್ಕೆ ಕಾರಣ ಮತ್ತು ದೇಹದ ಹೊರೆ. ಅದರ ಸಮತೋಲನ ಇವುಗಳ ಹೊಣೆ ಕತ್ತಿನ ಮಾಂಸಖಂಡಗಳಿಗೆ,, ಬೆನ್ನಿಗೆ ಮತ್ತು ಕಿಬ್ಬೊಟ್ಟೆಗಳಿಗೆ ವಹಿಸಿದೆಯಾಗಿ ಈ ಭಾಗಗಳು ಈ ಆಸನದಿಂದ ಬಲಗೊಳ್ಳುವವು.

ಅಭ್ಯಾಸ ಕ್ರಮ

1. ಮೊದಲು ‘ಸಲಾಂಬ ಸರ್ವಾಂಗಾಸನ’ವನ್ನು ಮಾಡಬೇಕು.

2. ಬಳಿಕ, ಕೈಗಳನ್ನು ಬಿಡಿಸಿ,ಅವುಗಳನ್ನು ತಲೆಯ ಮೇಲ್ಗಡೆಗೆ ತಂದು, ತೋಳುಗಳನ್ನು ನೆಲದಮೇಲೆ ಈ ಕಡೆಗೆ ನೀಳಲಾಗಿ ಚಾಚಿಡಬೇಕು ಆಗ ತಲೆ ಮತ್ತು ನೀಡಿದ ತೋಳುಗಳು ನೆಟ್ಟಗಿರಿಸಿದ ದೇಹದ ಒಂದು ದಿಕ್ಕಿನಲ್ಲಿಯೇ ಇರುತ್ತದೆ. ಈ ಸ್ಥಿತಿಯಲ್ಲಿ ಸಮತೋಲನೆಯನ್ನು ಸಾಧಿಸಬೇಕು..

3. ಈ ಭಂಗಿಯಲ್ಲಿಯೂ ಒಂದು ನಿಮಿಷ ನೆಲಸಬೇಕು.