ಮನೆ ಆರೋಗ್ಯ ಅನಿಯಂತ್ರಿತ ಮೂತ್ರ ವಿಸರ್ಜನೆ

ಅನಿಯಂತ್ರಿತ ಮೂತ್ರ ವಿಸರ್ಜನೆ

0

ಮೂತ್ರ ವಿಸರ್ಜನೆಯ ಮೇಲೆ  ನಿಯಂತ್ರಣವಿಲ್ಲದಿರುವುದು ಕೆಲವರಿಗೆ ಸಮಸ್ಯೆಯಾಗಿರುತ್ತದೆ. ಮೂತ್ರ ವಿಸರ್ಜನೆ ಮಾಡಬೇಕೆಂಬ ಇಚ್ಛೆಯಾದ ಕೂಡಲೇ ಬಾತ್ ರೂಮಿಗೆ ಹೋಗುವವರೆಗೂ ತಡೆಯಲಾಗದೇ ಹೋಗುವುದು ಕೆಲವರಿಗೆ ಸಮಸ್ಯೆಯಾದರೆ, ಬಹಳ ಮಂದಿಗೆ ಸೀನಿದಾಗ, ಕೆಮ್ಮಿದಾಗ, ಇಲ್ಲವೇ ಸ್ವಲ್ಪ ಭಾರ ಎತ್ತಿದಾಗ  ಮೂತ್ರದ ಹನಿಗಳು ಬಟ್ಟೆಯಲ್ಲಿಯೇ ಬಿದ್ದುಹೋಗುವ ಸಮಸ್ಯೆಯಿರುತ್ತದೆ.

Join Our Whatsapp Group

ಮೂತ್ರ ವಿಸರ್ಜನೆಯ ಮೇಲೆ ಹೇಗೆ ಹಿಡಿತವಿಲ್ಲದೆ ಹೋಗುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಎನ್ನುತ್ತಾರೆ. ಇದು ಹೆಚ್ಚಾಗಿ 65 ವರ್ಷ ದಾಟಿದವರಿಗೂ, ಅದರಲ್ಲೂ ಸ್ತ್ರೀಯರಿಗೂ  ಇರುತ್ತದೆ.

ಮೂತ್ರ ವಿಸರ್ಜನೆಯ ಮೇಲೆ ಹಿಡಿತವಿಲ್ಲದಿರುವುದು ಒಂದು ರೋಗವಲ್ಲ. ಅದೊಂದು ಲಕ್ಷಣ ಮಾತ್ರ.ಶರೀರದಲ್ಲಿ ಬೇರೇಲ್ಲೋ ಅಸ್ವಸ್ಥತೆಯಿಂದ ಎಂಬುದರ ಸೂಚನೆಯದು.

ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣವಿಲ್ಲದಿರಲು ಹಲವಾರು ಕಾರಣಗಳಿವೆ.

★ಮೂತ್ರ ಮಾರ್ಗ ಸೋಂಕಿಗೆ ಗುರಿಯಾಗುವುದು, ಮೂತ್ರಕೋಶದಲ್ಲಿ ಕಲ್ಲುಗಳು ಟ್ಯೂಮರ್ ಗಳು ಉಂಟಾಗುವುದು. 

★ ಗರ್ಭಾಶಯ ಜಾರಿ ಹೋಗುವುದು,ಇಲ್ಲವೇ ಜನೆಂದ್ರಿಯ ಜಾರುವುದು.

★ ಗರ್ಭಧರಿಸುವ ವೇಳೆಯಲ್ಲಿ ಸ್ತ್ರೀಗೆ ಪ್ರೊಜೆಸ್ಟರಾನ್  ಎಂಬ ಹಾರ್ಮೋನ್ ಹೆಚ್ಚು ಪ್ರಮಾಣದಲ್ಲಿ ಉತ್ಪಾದಯಾಗುತ್ತದೆ. ಇದರಿಂದಾಗಿ ಆ ದಿನಗಳಲ್ಲಿ ಆಕೆಯ ಸ್ನಾಯುಗಳು, ಅಸ್ತಿರಜ್ಜುಗಳು ಸಡಿಲವಾಗಿ ತಾತ್ಕಾಲಿಕವಾಗಿ ಆಕೆಗೆ ಮೂತ್ರದ ಮೇಲೆ ಹಿಡಿತ ತಪ್ಪಬಹುದು. ಆದರೆ ಹೆರಿಗೆಯಾದ ಮೇಲೆ ಮತ್ತೆ ಯಥಾಸ್ಥಿತಿಗೆ ಬರುತ್ತದೆ.

★ಹೆಚ್ಚು ತೂಕದ ಶಿಶುವಿಗೆ ಜನ್ಮ ಕೊಟ್ಟ ಸ್ತ್ರೀಯರಿಗೂ, ಶಿಶು ಜನನಕ್ಕೆ ಎರಡು ಮೂರು ಗಂಟೆಗಳ ಕಾಲ ಪ್ರಸವ ವೇದನೆಗೊಳಗಾದ ಸ್ತ್ರೀಯರಿಗೂ ಸಹ ಹೀಗಾಗುವ ಸಂಭವವಿದೆ.

★ಹೆರಿಗೆಯಾದ ಕೆಲವು ವಾರಗಳು, ಇಲ್ಲವೇ ತಿಂಗಳುಗಳಲ್ಲಿ ಮೂತ್ರ ವಿಸರ್ಜನೆಯ ಮೇಲೆ ನಿಯಂತ್ರಣ ಸ್ವಾಧೀನ ಪುನಃ ಬರುತ್ತದೆ.ಆ ವೇಳೆಗೆ ಆಕೆಯಲ್ಲಿನ ಹಾರ್ಮೋನು ಗಳ ಉತ್ಪಾದನೆ, ಸ್ನಾಯುಗಳ ಶಕ್ತಿ ಮತ್ತೆ ಸಾಧಾರಣ ಸ್ಥಿತಿಗೆ ಬರುವುದೂ ಇದಕ್ಕೆ ಕಾರಣ.

★ದೀರ್ಘಕಾಲದವರೆಗೆ ಮಲಬದತೆಯಿರುವುದೂ ಸಹ ಸ್ತ್ರಿಯರಲ್ಲಿ ಈ ಸ್ಥಿತಿಗೆ ಕಾರಣವಾಗುತ್ತದೆ.

ಚಿಕಿತ್ಸೆ

★ಈ ಸಮಸ್ಯೆಯಿಂದ ತೊಂದರೆ ಪಡುತ್ತಿರುವವರು ಡಾಕ್ಟರ್ ನ್ನು ಸಂಪರ್ಕಿಸಿದರೆ, ಹಲವು ಪರೀಕ್ಷೆಗಳ ನಂತರ ಇದಕ್ಕೆ ಮೂಲಕಾರಣ ವೇನೆಂದು ತಿಳಿದು, ಅದಕ್ಕೆ ತಕ್ಕ ಅಗತ್ಯವಾದ ಚಿಕಿತ್ಸೆಯನ್ನು ಸೂಚಿಸುತ್ತಾರೆ.

ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳು

★ ಈ ಸಮಸ್ಯೆಯಿಂದ ತೊಂದರೆ ಗೀಡಾದವರು, ಕೆಲವು ದಿನಗಳವರೆಗೆ ಮಾತ್ರ ವಿಸರ್ಜನೆಗೆ ಸಂಬಂಧಿಸಿದಂತೆ ಡೈರಿಯನ್ನು ಬರೆದಿಟ್ಟುಕೊಳ್ಳಬೇಕು. ಯಾವಾಗ ಮೂತ್ರಕ್ಕೆ ಹೋಗುತ್ತಿದ್ದಾರೆ, ಎಷ್ಟು ಬಾರಿ ಹೋಗುತ್ತಿದ್ದಾರೆ. ಆ ದಿನ ಏನು ತಿಂದರು,ಏನು ಕುಡಿದರು ಇಂತಹ ವಿಷಯಗಳೆಲ್ಲವೂ ಅದರಲ್ಲಿ ವಿವರವಾಗಿ ಇರಬೇಕು. ಈ ಡೈರಿಯ ಮೂಲಕ ಡಾಕ್ಟರ್ ರಿಗೆ ಕಾಯಿಲೆಯ ಮೂಲ ಕಾರಣವೇನೆನ್ನುವುದು  ತಿಳಿದು ಬರುತ್ತದೆ.

★ ಡೈರಿಯ ಮೂಲಕ ಅತಿಯಾಗಿ ನೀರು ಕುಡಿಯುತ್ತಿರುವಿರೆಂದು ತಿಳಿದುಬಂದಲ್ಲಿ,  ನೀರಿನ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಬೇಕು. ಆದರೆ ಕುಡಿಯದೇ ಇರಬಾರದು. ಡಾಕ್ಟರ್ ಸಲಹೆಯಂತೆ ಮಾಡಬೇಕು.

★ನೀವು ಕಾಫಿ, ಟೀಗಳನ್ನು ಹೆಚ್ಚಾಗಿ ಕುಡಿಯುತ್ತಿರುವಿರೆಂದು ಡೈರಿಯಿಂದ ತಿಳಿದರೆ, ಇಲ್ಲವೇ ಹೆಚ್ಚು ಆಲ್ಕೋಹಾಲನ್ನು ಸೇವಿಸುತ್ತಿರುವುದಾದರೆ ಅವುಗಳನ್ನು ನಿಲ್ಲಿಸಬೇಕು.

 ವಿಟಮಿನ್ ಡಿ ಹೆಚ್ಚಾದರೆ ಕಿಡ್ನಿಗಳಲ್ಲಿ ಕಲ್ಲುಗಳು

ಶರೀರಕ್ಕೆ ಅಗತ್ಯವಾದ ವಿಟಮಿನ್ ಡಿ ಯನ್ನು ನಾವು ಹೆಚ್ಚಾಗಿ ಸೂರ್ಯಕಿರಣಗಳಿಂದ ಪಡೆಯುತ್ತೇವೆ. ಬೆಣ್ಣೆ, ಮೀನುಗಳು, ಮಲ್ಟಿ ವಿಟಿಮಿನ್  ಮಾತ್ರೆಗಳ ಮೂಲಕವೂ ಈ ವಿಟಮಿನ್ ಸಲಭಿಸುತ್ತದೆ.

★ಕೆಲವರಿಗೆ ಮಲ್ಟಿಮಿಟಮಿನ್ ಟ್ಯಾಬ್ಲೆಟ್ ಗಳನ್ನು ಟಾನಿಕ್ ನಂತೆ ದೀರ್ಘ ಕಾಲದವರೆಗೆ ತೆಗೆದುಕೊಳ್ಳುವ ಅಭ್ಯಾಸವಿರುತ್ತದೆ. ದೀರ್ಘಕಾಲದ ನಂತರ ಇದು ಅಪಾಯಕ್ಕೆ ಮಾಡುತ್ತದೆ.

★ಈ ಮುನ್ನ ಮೂತ್ರಪಿಂಡಗಳಲ್ಲಿ ಕಲ್ಲುಗಳಿಂದ ತೊಂದರೆಗೀಡಾದವರು, ತಮ್ಮ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಕಿಡ್ನಿ ಸ್ಟೋನ್ ಇರುವವರು, ವಿಟಮಿನ್ ಡಿ ಹೊಂದಿರುವ ಮಲ್ಟಿವಿಟಮಿನ್ ಮಾತ್ರೆಗಳನ್ನು ಬಳಸದಿರುವುದು ಒಳ್ಳೆಯದು.

★ವಿಟಮಿನ್ ಬಿ.ಸಿ ಗಳು ಶರೀರದಲ್ಲಿ ನಿಲ್ಲುವುದಿಲ್ಲವಾದ್ದರಿಂದ ಹೂಗಳ ಬಳಕೆಯಿಂದ ಅಷ್ಟು ಅಪಾಯವಿಲ್ಲ.ಆ ವ್ಯಕ್ತಿಗೆ ಅವುಗಳಿಗೆ ಸಂಬಂಧಿಸಿದ ಬೇರೆ ಕಾಂಪ್ಲಿಕೇಷನ್ ಕಾಯಿಲೆ ಏನಾದರೂ ಇದ್ದ ಹೊರತಾಗಿ.