ಮನೆ ಪೌರಾಣಿಕ ದಕ್ಷನ ವಂಶಾಭಿವೃದ್ಧಿ : ಭಾಗ ಆರು

ದಕ್ಷನ ವಂಶಾಭಿವೃದ್ಧಿ : ಭಾಗ ಆರು

0

ಸ್ವಯಂಭವ ಮನುವು 14 ಮನುವರಲ್ಲಿ ಮೊದಲನೆಯವನು.ಉಳಿದವರು ಸ್ವಾರೋಚಿಷು, ಔತ್ತಮಿ, ತಾಮಸ, ರೈವತ, ಚಾಕ್ಷುಷ, ವೈವಸ್ವತ, ಧರ್ಮಸಾವರ್ಣಿ, ರುದ್ರಸಾವರ್ಣಿ, ರೌಚ್ಯದೇವ ಸವರ್ಣಿ,  ಇಂದ್ರಸಾವರ್ಣಿ, ಮೊದಲಾದವರು. ಸ್ವಯಂಭುವ  ಮನುವಿಗೆ ಹತ್ತು ಜನ ಸಂತಾನ. ಅವರೇ ಅಗ್ನೀದ್ರ, ಅಗ್ನಿ ಬಾವು,ಮೇಧ,ಮೇಧಾತಿಧಿ, ವಸು, ಜ್ಯೋತಿಷ್ಮಂತ,ದ್ಯುತಿಮಂತ, ಹವ್ಯ ಸವನ ಸುಪುತ್ರರು ಈತನ ಕಾಲದಲ್ಲಿನ ಮರೀಚಿ, ಅಂಗೀರಸ, ಅತ್ರಿ ,ಪುಲಹ ಕ್ರತು, ಪುಲಸ್ತ್ಯ,ಹಾಗೂ ವಸಿಷ್ಠರು,  ಸ್ವಾರೋಚಿಷುವಿನ ಕಾಲದಲ್ಲಿ ಔರ್ವ, ಸ್ತಂಭ, ಕಶ್ಯಪ, ಪ್ರಾಣ, ಬೃಹಸ್ಪತಿ,ದತ್ತ, ನಿಶ್ಚ್ಯವನರು,ಸಪ್ತ ಮಹರ್ಷಿಗಳು. ಉತ್ತಮ ಮನುವು ಕಾಲದಲ್ಲಿ ವಸಿಷ್ಠನ ಪುತ್ರರಾದ ರಾಜಸ್ಸು ಗೋತ್ರನು,ಊರ್ಧ್ವಬಾಹು, ಸವನ ಅನಘ, ಸುತಪಸು, ಶುಕ್ರರು ಸಪ್ತ ಮಹರ್ಷಿಗಳು ತಾಮಸ ಮನುವಿನ ಕಾಲದಲ್ಲಿ ಜ್ಯೋತಿರ್ಮಯ,ಪೃಥು, ಕಾವ್ಯ, ಚೈತ್ರ,ಅಗ್ನಿವನಕ, ಪೀವರ,ನರ ಇವರು ಸಪ್ತ ಮಹರ್ಷಿಗಳಾಗಿದ್ದರು. ರೈವತ ಮನುವಿನ ಕಾಲದಲ್ಲಿ ಹಿರಣ್ಯರೋಮ, ವೇದಶ್ರೀ, ಊರ್ಧ್ವ ಬಾಹು,ವೇದಬಾಹು, ಸುಧಾಮ ಪರಾಜಯ, ಮಹಾಮುನಿ,ಸಪ್ತರ್ಷಿಗಳು ಈತನ ಮಕ್ಕಳೇ ಬಾಲಮುಧು ಸಂಭಾವ್ಯ ಹಾಗೂ ಸತ್ಯಕರು.

Join Our Whatsapp Group

     ಚಾಕ್ಷುಷ ಮನುವಿನ ಕಾಲದಲ್ಲಿ ಸಂಮೇಧನು,ವಿರಜ, ಹವಿಷ್ಟಂತ,ಉತ್ತಮ,ಮಧು, ಅತಿ ನಾಮ, ಸಹಿಷ್ಣುವರು, ಸಪ್ತ ರ್ಷಿಗಳು, ಈತನ ಮಕ್ಕಳು ಕುರು,ಪುರು,ಶತದ್ಯುಮ್ನ, ಅಭಿಮನ್ಯು, ತಪಸ್ವಿ ಸತ್ಯವಂತ, ಶುಚಿ,ಅಗ್ನಿಷ್ಟೋಮ, ಅತಿರಾತ್ರಿ, ಸುದ್ಯುಮ್ನರು, ವೈವಸ್ವತ ಮನುವು ಕಾಲದಲ್ಲಿ ವಸಿಷ್ಠ, ಕಶ್ಯಪ ಅತ್ರಿ ಜಮದಗ್ನಿ,ಗೌತಮ,ವಿಶ್ವಾಮಿತ್ರ, ಭಾರದ್ವಜರು, ಸಪ್ತರ್ಷಿಗಳು. ಈತನಿಗೆ  ಇಕ್ಷ್ವಾ ಕು, ನಭಾಗ, ದೃಷ್ಟ, ಶರ್ಯಾತಿ, ನರಿಷ್ಟಂತ ಫ್ರಾಂಶು, ನೃಗು, ದಿಷ್ಟು,ಕರೂಷ,ಪೃಷಧರರು   ಜನಿಸಿದರು. ಮಹಾಭಾರತದ ಪ್ರಕಾರ ಈತನಿಗೆ ವೇನು, ದೃಷ್ಟು, ನಿರಿಷ್ಯಂತ,ನಭಾಗ, ಇಕ್ಷ್ವಾಕು, ಕರೂಷ, ಶರ್ಯಾತಿ, ಇಳ,ಪೃಷದರ, ನಭಾಗಾರಿಷ್ಠರು. ಜನಿಸಿದರು.

       ಮುಂಬರುವ ಯುಗವಾದ ಸಾವರ್ಣಿಯುಗದ ಪಾಲಕನು ಸವರ್ಣಿ ಯಾಗುತ್ತಾನೆಂದು ಪುರಾಣಗಳ ನಿರ್ಣಯವಾಗಿದೆ.ಈತನ ಮಕ್ಕಳು ವಿರಜ, ಊರ್ವರೀಯ, ನಿರೋಮಕರು, ಸ್ವಾವರ್ಣಿ ಕಾಲದಲ್ಲಿ ದೀಪ್ತಿ ಮಂತ, ಗಾಲವ, ರಾಮ,ಕೃಪ, ದ್ರೋಣಸುತ ಅಶ್ವತ್ಥಾಮ,ಪರಾಶುತ, ವ್ಯಾಸ, ಋಷ್ಯಶೃಂಗರು, ಪ್ತಸ ಮಹರ್ಷಿಗಳಾಗುತ್ತಾರೆ. ದೇವಿ,ಭಗವತ,ಕಾಶೀಖಂಡ, ಅಶ್ವತ್ಥಾಮನು ಭವಿಷ್ಯತ್ಕಲ್ಪದಲ್ಲಿ ವೇದವ್ಯಾಸನಾಗಿ ಜನಿಸುತ್ತನೆಂದು ಹೇಳುತ್ತೇವೆ. ವಿರೋಚನದ ಪುತ್ರನಾದ ಮಹಾಬಲಿ ಆ ಯುಗದಲ್ಲಿ ಇಂದ್ರನಗಿ ದೇವಲೋಕವನ್ನು ಆಳುತ್ತಾನೆ. ದಕ್ಷ ಸಾವರ್ಣಿ ಕಾಲದಲ್ಲಿ ದ್ವಾದಶ ಪಾರರು, ದ್ವಾದಶ ಮರೀಚಿ,ಗರ್ಭರು ದ್ವಾದಶ ಸುಧರ್ಮರು ಮರು ಜನಿಸುತ್ತಾರೆ. ಇವರ ಮಕ್ಕಳು ಧೃತಕೇತು, ದೀಪ್ತಿಕೇತು, ಪಂಚಹಸ್ತ, ನಿರಾಮಯ,ಪೃಥುಶ್ರವರು, ಸವನ,ದ್ಯುತಿಮಂತ,ಭವ್ಯ, ವಸು,ವೇದತಿಥಿ,ಜ್ಯೋತಿಷ್ಟಂತ,ಸತ್ಯ ಇವರುಗಳು ಸಪ್ತ ಋಷಿಗಳು. ಬ್ರಹ್ಮ ಸಾವರ್ಣಿಯ ಕಾಲದಲ್ಲಿ ಸುಧಾಮರು, ವಿಶುದ್ಧರು  ಎಂಬ ಹೆಸರುನ್ನುಳ್ಳ ಅಲ್ಪಸಂಖ್ಯಾತರಾಗಿ  ಜನಿಸುತ್ತಾರೆ.