ಮನೆ ಮನರಂಜನೆ “ಚೀತಾ’ ಚಿತ್ರದಲ್ಲಿ ರಗಡ್‌ ಆಗಿ ಕಾಣಿಸಿಕೊಂಡ ಮೇಘಾ ಶೆಟ್ಟಿ

“ಚೀತಾ’ ಚಿತ್ರದಲ್ಲಿ ರಗಡ್‌ ಆಗಿ ಕಾಣಿಸಿಕೊಂಡ ಮೇಘಾ ಶೆಟ್ಟಿ

0

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಕೊಟ್ಟ ಮೇಘಾ ಶೆಟ್ಟಿ ಈಗ ಸಿನಿಮಾಗಳಲ್ಲಿ ನಾಯಕಿಯಾಗಿ ಬಿಝಿಯಾಗಿದ್ದಾರೆ. ಈಗಾಗಲೇ ಮೇಘಾ ನಟಿಸಿರುವ “ತ್ರಿಬಲ್‌ ರೈಡಿಂಗ್‌’ ಹಾಗೂ “ಕೈವಾ’ ಚಿತ್ರ ಬಿಡುಗಡೆಯಾಗಿದೆ. ಸದ್ಯ “ಚೀತಾ’ ಹಾಗೂ “ಆಪರೇಶನ್‌ ಲಂಡನ್‌ ಕೆಫೆ’ ಬಿಡುಗಡೆಯ ಹಂತಕ್ಕೆ ಬಂದಿದೆ.

Join Our Whatsapp Group

ಆಗಸ್ಟ್‌ 4 ಮೇಘಾ ಶೆಟ್ಟಿ ಹುಟ್ಟುಹಬ್ಬ ಈ ಹಿನ್ನೆಲೆಯಲ್ಲಿ ಎರಡೂ ಚಿತ್ರತಂಡಗಳು ಚಿತ್ರದ ಮೇಘಾ ಅವರ ಲುಕ್‌ ಬಿಡುಗಡೆ ಮಾಡಿ ಶುಭಕೋರಿದೆ. “ಚೀತಾ’ ಚಿತ್ರದಲ್ಲಿ ಮೇಘಾ ಸಖತ್‌ ರಗಡ್‌ ಆಗಿ ಕಾಣಿಸಿಕೊಂಡರೆ, ಲಂಡನ್‌ ಕೆಫೆಯಲ್ಲಿ ಪಕ್ಕಾ ಹಳ್ಳಿ ಹುಡುಗಿಯಾಗಿ ಮಿಂಚಿದ್ದಾರೆ. “ಚೀತಾ’ ಚಿತ್ರದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ನಟಿಸಿದ್ದಾರೆ.

ಇನ್ನು, ಕವೀಶ್‌ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿರುವ “ಆಪರೇಶನ್‌ ಲಂಡನ್‌ ಕೆಫೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಈ ಚಿತ್ರ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ, ಮರಾಠಿ, ಹಿಂದಿ, ತಮಿಳು ತೆಲುಗು, ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿ¨ ಇದೊಂದು ಮಾಸ್‌ ಆ್ಯಕ್ಷನ್‌ ಚಿತ್ರವಾಗಿದ್ದು, ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ತೊಡಗಿದೆ. ಸಡಗರ ರಾಘವೇಂದ್ರ ಈ ಚಿತ್ರದ ನಿರ್ದೇಶಕರು.

ಕವೀಶ್‌ ಮತ್ತು ಮೇಘಾ ಶೆಟ್ಟಿ ಜೊತೆಯಲ್ಲಿ ಮರಾಠಿಯ ಶಿವಾನಿ ಸುರ್ವೆ ವಿರಾಟ್‌ ಮಡಕೆ ಪ್ರಸಾದ್‌ ಕಾಂಡೇಕರ್‌ ಹಾಗೂ ಕನ್ನಡದ ಅರ್ಜುನ್‌ ಕಾಪಿಕಾಡ್‌, ಬಿ ಸುರೇಶ್‌, ಕೃಷ್ಣ ಹೆಬ್ಟಾಳೆ, ಧರ್ಮೇಂದ್ರ ಅರಸ್‌, ನೀನಾಸಂ ಅಶ್ವತ್‌ ಸೇರಿದಂತೆ ಅನೇಕರು ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.

ಇಂಡಿಯನ್‌ ಫಿಲಂ ಫ್ಯಾಕ್ಟರಿ ಮತ್ತು ದೀಪಕ್‌ ರಾಣೆ ಫಿಲಂ ಲಾಂಛನದ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಚಿತ್ರವನ್ನು ಉಡುಪಿಯ ವಿಜಯ್‌ ಕುಮಾರ್‌ ಶೆಟ್ಟಿ ಹವರಾಲ, ರಮೇಶ್‌ ಕೊಠಾರಿ, ದೀಪಕ್‌ ರಾಣೆ ಮತ್ತು ವಿಜಯ್‌ ಪ್ರಕಾಶ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.