ಮನೆ ಆರೋಗ್ಯ ರೋಗ ನಿವಾರಕ ಶಕ್ತಿ

ರೋಗ ನಿವಾರಕ ಶಕ್ತಿ

0

1. ಪ್ರತಿದಿನವೂ ಬೆಳಿಗ್ಗೆ ಎದ್ದು ಒಂದು ಲೋಟ ತಣ್ಣೀರಿಗೆ ಒಂದು ನಿಂಬೇರಸ,ಒಂದು ಚಮಚ ಜೇನುತುಪ್ಪ ಸೇವಿಸುತ್ತಾ ಬಂದರೆ ರೋಗನಿರೋಧಕ ಶಕ್ತಿ ಹೆಚ್ಚುವುದು.

Join Our Whatsapp Group

2. ರಾತ್ರಿ ಮಲಗುವಾಗ ಕೆಂಪಗೆ ಕಾದ ಹಲ್ಲಿಗೆ ಒಂದು ಚಮಚ ಅರಿಶಿನ ಪುಡಿ, ಅರ್ಧ ಚಮಚ ಮೆಣಸಿನ ಕಾಳಿನ ಪುಡಿ ಸೇರಿಸಿ,ಕುಡಿಯುವುದರಿಂದ ಯಾವ ರೋಗವೂ ಅಂಟುವುದಿಲ್ಲ.

3. ಪ್ರತಿದಿನವೂ ಊದಿನಕ್ಕೆ ಎರಡು ವೇಳೆ ಅಡಿಕೆ ವೀಳ್ಯದೆಲೆ,ಸುಣ್ಣ ಸೇರಿಸಿ ಊಟ ಆದ ಮೇಲೆ ಅಗಿಯುತ್ತಾ ಇದ್ದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.

4. ಪ್ರತಿದಿನವೂ ಒಂದು 10 ತುಳಸಿ ಕುಡಿಗಳನ್ನು ಕಿತ್ತು ತಿನ್ನುವುದರಿಂದ ರೋಗ ಬರುವುದೇ ಇಲ್ಲ.

5. ಪ್ರತಿದಿನವೂ ಒಂದೊಂದು ನೆಲ್ಲಿಕಾಯಿಯನ್ನು ಅಗಿದು ನುಂಗುತ್ತಿದ್ದರೆ ರೋಗ ಹೆದರಿ ಓಡಿಹೋಗುವುದು.

6. ಪ್ರತಿದಿನವೂ ಅರ್ಧ ತೊಲ ಅಳಲೇಕಾಯಿಯ ಪುಡಿಯನ್ನು ಹಾಲು, ಜೇನು ಸೇರಿಸಿ ಕುಡಿದರೆ ರೋಗದಿಂದ ಮುಕ್ತರಾಗಿ ಸ್ವರ್ಗಸುಖ ಪಡೆಯುವುದರಲ್ಲಿ ಸಂದೇಹವೇ ಇಲ್ಲ.

 ಲಕ್ಕ ಪಾರ್ಶ್ವ ವಾಯು:-

1. ಪ್ರತಿದಿನವೂ ಬೆಳ್ಳುಳ್ಳಿಯ ಪಾಯಸ ಮಾಡಿ ಚೆನ್ನಾಗಿ ಮರ್ಧಿಸಿ ಸಕ್ಕರೆ ಅಥವಾ ಬೆಲ್ಲ ಸೇರಿಸಿ ಕುಡಿದರೆ ಲಕ್ವ ಗುಣವಾಗುವುದು.ಇದನ್ನು ಒಂದು ದಿನ ಮಾಡಿದರೆ ಗುಣ ವಾಗುವುದಿಲ್ಲ. ಗುಣವಾಗುವವರೆಗೂ ಬೆಳಿಗ್ಗೆ ಸಾಯಂಕಾಲ ಮಾಡಿ ಸೇವಿಸಬೇಕು.ಅಷ್ಟೇ ಅಲ್ಲ ಪ್ರತಿದಿನವೂ ಹುರಳಿ  ಸಾರು ಪಲ್ಯ, ನುಚ್ಚಿನ ಉಂಡೆ ಸೇವಿಸಬೇಕು.

2. ರಾತ್ರಿ ಮಜ್ಜಿಗೆಯಲ್ಲಿ ಬೆಳ್ಳುಳ್ಳಿ ನೆನೆಹಾಕಿ ಬೆಳಿಗ್ಗೆ ಅರೆದು, ಸೌವರ್ಚ ಲವಣ ಓಮ, ಹಿಂಗು, ಸೈಂಧವ ಲವಣ ಸೇರಿಸಿ ಕುಡಿಯಲು ವಾತ ದೋಷವು ತೊಲಗಿ ಲಕ್ಟಗುಣವಾಗುವುದು.

3. ನುಗ್ಗೆ ಸೊಪ್ಪಿನ ಸಾರು,ನುಗ್ಗೆಕಾಯಿ ಹುಳಿ,ನುಗ್ಗೇ ತೊಗಟೆ ರಸ ಬೆಳಿಗ್ಗೆ ಒಂದು ಲೋಟ ಕುಡಿಯುವುದು, ಹುಣಸೇಹಣ್ಣು ಸೇವಿಸಬಾರದು.ಹೀಗೆ ಮಾಡಿದರೆ ಲಕ್ಟ ಗುಣವಾಗುತ್ತದೆ.