ಮನೆ ಅಪರಾಧ ಸರ್ಕಾರಿ ಕಾರಿನಲ್ಲಿ ಬಂದ ಮೌಲ್ವಿ: ಬಸನಗೌಡ ಪಾಟೀಲ್​ ಯತ್ನಾಳ್ ಆಕ್ಷೇಪ

ಸರ್ಕಾರಿ ಕಾರಿನಲ್ಲಿ ಬಂದ ಮೌಲ್ವಿ: ಬಸನಗೌಡ ಪಾಟೀಲ್​ ಯತ್ನಾಳ್ ಆಕ್ಷೇಪ

0

ಬೆಂಗಳೂರು : ಬೆಂಗಳೂರಿನ  ಸಿಎಂ ಕಾನ್ವೆನ್ಶನ್​​ ನಲ್ಲಿ ನಡೆದ ಸುನ್ನಿ ಕೋಆರ್ಡಿನೇಷನ್​ ಕಾರ್ಯಕ್ರಮಕ್ಕೆ ಮುಸ್ಲಿಂ ಮೌಲ್ವಿ ಬಂದಿದ್ದು, ಇದಕ್ಕೆ ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್  ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Join Our Whatsapp Group

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮೌಲ್ವಿ ಶೇಖ್ ಅಬೂಬಕರ್ ಅಹ್ಮದ್​​ ಸರ್ಕಾರದ “ಜಿ” ಸಿರೀಸ್​ನ ಕಾರಿನಲ್ಲಿ ಪೊಲೀಸ್​ ಭದ್ರತೆಯಲ್ಲಿ ಬಂದಿದ್ದರು. ಮೌಲ್ವಿ ಶೇಖ್ ಅಬೂಬಕರ್ ಅಹ್ಮದ್​​ ಸರ್ಕಾರದ ಕಾರಿನಲ್ಲಿ ಬಂದಿರುವ ವಿಡಿಯೋವನ್ನು ಶಾಸಕ ಯತ್ನಾಳ್​ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿ, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಸರ್ಕಾರಕ್ಕೆ ಸಂಬಂಧವಿಲ್ಲದ ವ್ಯಕ್ತಿಗೆ ಪೊಲೀಸ್ ಭದ್ರತೆ ಹಾಗೂ ಪೊಲೀಸ್​ ಭದ್ರತೆ ಮತ್ತು ಪ್ರೊಟೋಕಾಲ್​​ ಅನ್ನು ನೀಡಲಾಗಿದೆ. ಅಲ್ಲದೆ, “ಜಿ” ಸಿರಿಸ್​ನ ಸರ್ಕಾರಿ ಕಾರಿನಲ್ಲಿ ಏಕೆ ಬಂದರು? ಇದು ಶಿಷ್ಟಾಚಾರದ ನಿಯಮಗಳ ಉಲ್ಲಂಘನೆಯಲ್ಲವೇ? ಎಂದು ಸರ್ಕಾರಕ್ಕೆ ಯತ್ನಾಳ್​ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರ ಮತಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಮುಖಂಡರಿಗೆ ಅನುಕೂಲಗಳು ಮತ್ತು ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ಇದು ನಿಯಮಗಳಿಗೆ ವಿರುದ್ಧವಾಗಿರುವುದು ಮಾತ್ರವಲ್ಲದೆ ತೆರಿಗೆದಾರರ ಹಣ ವ್ಯರ್ಥವೂ ಆಗಿದೆ. ರಾಜ್ಯವು ಮಳೆಯ ಅಬ್ಬರಕ್ಕೆ ತತ್ತರಿಸಿರುವ ಸಂದರ್ಭದಲ್ಲಿ ಸರ್ಕಾರ ಈ ರೀತಿ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ಮಾಡಿದರು.