ಮನೆ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ: ಶಿಕ್ಷಣ ಇಲಾಖೆಯಲ್ಲಿ ಕೇಸರಿಕರಣಕ್ಕೆ ಬಿಜೆಪಿ ಪ್ರಯತ್ನ- ಆರ್.ಧೃವನಾರಾಯಣ್

ಪಠ್ಯಪುಸ್ತಕ ಪರಿಷ್ಕರಣೆ: ಶಿಕ್ಷಣ ಇಲಾಖೆಯಲ್ಲಿ ಕೇಸರಿಕರಣಕ್ಕೆ ಬಿಜೆಪಿ ಪ್ರಯತ್ನ- ಆರ್.ಧೃವನಾರಾಯಣ್

0

ಮೈಸೂರು(Mysuru): ಶಿಕ್ಷಣ ಇಲಾಖೆಯಲ್ಲಿ ಕೇಸರಿಕರಣಕ್ಕೆ ಬಿಜೆಪಿ ಪ್ರಯತ್ನಿಸುತ್ತಿದ್ದು, ಮಕ್ಕಳ‌ ಮನಸ್ಸಲ್ಲಿ ಈ ಭಾವನೆ ಮೂಡಿಸುವುದು ಬೇಡ ಎಂದು   ಆರ್.ಧೃವನಾರಾಯಣ್ ನುಡಿದರು.

ಮೈಸೂರಿನಲ್ಲಿಂದು ಮಾತನಾಡಿದ ಅವರು, ದೇವನೂರು ಮಹದವೇವು ಒಬ್ಬ ಸಜ್ಜನ ಸಾಹಿತಿ ಅಂತವರ ಮನಸಲ್ಲಿ ತಾನು ಬರೆದ ಕೃತಿ ಸೇರಿಸಬಾರದು ಎಂಬ ಮಾತುಗಳನ್ನ ಆಡಿದ್ದಾರೆ. ಇದನ್ನ ಸರ್ಕಾರ ಅರಿತುಕೊಳ್ಳಬೇಕು‌ ಕೂಡಲೇ ಸರ್ಕಾರ ಚಿಂತನಾ ಶೀಲ ಸಾಹಿತಿಗಳ ಜೊತೆ ಮಾತುಕತೆ ಮಾಡಬೇಕು. ಯಾವ ವಿಚಾರವನ್ನು ಪ್ರಕಟ ಮಾಡಬೇಕು ಎಂದು ಕುಲಂಕುಶವಾಗಿ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್ ಪಕ್ಷ ಈ ವಿಚಾರದ ರಾಜಕಾರಣ ಮಾಡಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಈ ರೀತಿಯ ಗೊಂದಲ ಇರಲಿಲ್ಲ. ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಈ ರೀತಿ ಗೊಂದಲ ಸೃಷ್ಟಿ ಆಗಿದೆ. ಹಿಂದುತ್ವ ಮನೋಭಾವನೆ ಮೂಡಿಸುವುದು, ಕೇಸರಿಕರಣ ಮಾಡುವುದು ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ. ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗರಿಗೆ ಇಲ್ಲ ಎಂದರು.

ಜಬ್ಬರ್ ಗೆ ವಿಧಾನ ಪರಿಷತ್ ಟಿಕೆಟ್ ನೀಡಿರುವ ಕುರಿತು ಪ್ರತಿಕ್ರಿಯಿಸಿ,  ಅಲ್ಪಸಂಖ್ಯಾತ ಜನಸಂಖ್ಯೆ ಅನುಗುಣವಾಗಿ ಸ್ಥಾನಮಾನ ಸಿಕ್ಕಿಲ್ಲ ‌ ಹೀಗಾಗಿ ಜಬ್ಬರ್ ಗೆ ಪರಿಷತ್ ಟಿಕೆಟ್ ಕೊಟ್ಟಿದ್ದೇವೆ ಎಂದು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಶೇ 14 ರಷ್ಟು ಅಲ್ಪಸಂಖ್ಯಾತರಿದ್ದಾರೆ. ಅವರ ಜನಸಂಖ್ಯೆ ಅನುಗುಣವಾಗಿ ಇನ್ನೂ ಸರಿಯಾದ ಸ್ಥಾನಮಾನ ಕಲ್ಪಿಸಲು ಸಾಧ್ಯವಾಗಿಲ್ಲ. ಹಾಗಾಗಿ ಜಬ್ಬರ್ ಗೆ ಟಿಕೆಟ್ ನೀಡಿದ್ದೇವೆ. ಇದು ಅಲ್ಪಸಂಖ್ಯಾತರ ಓಲೈಕೆ ಅಲ್ಲ‌. ಎಸ್ ಆರ್ ಪಾಟೀಲ್ ಗೆ ನಾಲ್ಕು ಬಾರಿ ಅವಕಾಶ ಸಿಕ್ಕಿದೆ‌ ಅವರಿಗೆ ಸೂಕ್ತ ಅವಕಾಶಗಳು ಸಿಗಲಿವೆ. ಯಾರೂ ಕೂಡ ಪಕ್ಷದಲ್ಲಿ ಅಸಮಾಧಾನಗೊಳ್ಳಬಾರದು ಎಂದು ಮನವಿ ಮಾಡಿದರು.