ಮನೆ ಯೋಗಾಸನ ಏಕಪಾದ ಸರ್ವಾಂಗಾಸನ

ಏಕಪಾದ ಸರ್ವಾಂಗಾಸನ

0

     ‘ ಏಕಪಾದ’ ಎಂದರೆ ಒಂದು ಅಡಿ ‘ಸರ್ವಾಂಗಸನ’ದ ಈ ವ್ಯತ್ಯಾ ಸ್ತಭಂಗಿಯಲ್ಲಿ ‘ಹಲಾಸನ’ದಲ್ಲಿರುವಂತೆ ಒಂದು ಕಾಲು ನೆಲದಮೇಲೆ,ಇನ್ನೊಂದು ಕಾಲು ಮತ್ತು ಮುಂಡ ನೆಲಕ್ಕೆ ಲಂಬವಾಗಿ ನೆಟ್ಟಗೆ ನಿಲ್ಲುವಂತಾಗಬೇಕು.

Join Our Whatsapp Group

ಅಭ್ಯಾಸ ಕ್ರಮ

1. ಮೊದಲು ‘ಸಾಲಂಬ ಸರ್ವಾಂಗಾಸ’ನದ ಅಭ್ಯಾಸವನ್ನು ಕೈಗೊಳ್ಳಬೇಕು.

2. ಬಳಿಕ, ‘ಸರವಾಂಗಸನ’ದಲ್ಲಿ ಎಡಗಾಲನ್ನು ಮೇಲೆತ್ತಿ, ಉಸಿರನ್ನು ಹೊರಬಿಟ್ಟು ಬಲಗಾಲನ್ನು ಸರಿಸಿ,ಅದನ್ನು ನೆಲದಮೇಲಿಳಿಸಿ, ‘ಹಲಾಸನ’ದ ಭಂಗಿಗೆ ತರಬೇಕು. ಆ ಕಾಲನ್ನು ನೆಟ್ಟಗೆ ಮತ್ತು ಕಾದಲದಂತೆ ಇಡಬೇಕು.ಮಂಡಿಯನ್ನು ಬಾಗಿಸಬಾರದು.

3. ಬಲಗಾಲನ್ನು ನೆಲದ ಮೇಲೆ ಇರಿಸಿರುವಾಗ ಎಡಮಂಡಿಯನ್ನು ಬಿಗಿ ಮಾಡಿ,  ಎಡಗಾಲನ್ನು ತಲೆಗೆ ದಃರಾಗಿ ಮೇಲೆತ್ತಿ, ನೆಟ್ಟಗೆ ಹಿಗ್ಗಿಸಿ,ಅದನ್ನು ನಿಲ್ಲಿಸಬೇಕು.

4. ಈ ಭಂಗಿಯಲ್ಲಿ, ಸಾಮಾನ್ಯ ಉಸಿರಾಟದಿಂದ 20  ಸೆಕೆಂಡುಗಳ ಕಾಲ ನೆರಸಬೇಕು.

5. ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ಬಲಗಾಲನ್ನೆತಿ ಮತ್ತೆ ‘ಸರ್ವಂಗಾಸನ’ಕ್ಕೆ ಬಂದು,ಬಳಿಕ ಎಡಗಾಲನ್ನು ‘ಹಲಾಸನ’ದಲ್ಲಿ ನೆಲಕ್ಕಿಳಿಸಬೇಕು. ಇದರಲ್ಲಿ ಬಲಗಾಲನ್ನು ಲಂಬವಾಗಿ ಮೇಲ್ಗಡೆಗೆ ನಿಲ್ಲಿಸಿ, ಬಿಗೌಗೊಳಿಸಬೇಕು. ಎರಡು ಕಾಲುಗಳನ್ನೂ ಕೆಳಕ್ಕಿಳಿಸುವ ‘ಹಲಾಸನ’ಕ್ಕಿಂತಲೂ ಕಾಲನ್ನು ಮೇಲೆತ್ತಿ, ಮತ್ತೆ ಸರ್ವಾಂಗಾಸಕ್ಕೆ ಬರುವುದರಿಂದ ಕಿಬ್ಬೊಟ್ಟೆಯೊಳಗಿನ ಅಂಗಗಳಿಗೆ  ಹೆಚ್ಚು ವ್ಯಾಯಾಮ ದೊರಕುವುದು.

6. ಈ ಪಕ್ಕದಲ್ಲಿ ಮಾಡುವ ಭಂಗಿಯಲ್ಲಿ ನೆಲೆಸುವ ಕಾಲವೂ ಅಷ್ಟೇ ಇರಬೇಕು.

ಪರಿಣಾಮಗಳು

ಈ ಆಸನದ ಭಂಗಿಯು  ಮೂತ್ರಪಿಂಡಗಳನ್ನೂ ಕಾಲುಗಳಲ್ಲಿಯ ಮಾಂಸ ಖಂಡಗಳನ್ನೂ ಲವಲವಿಕೆಗೊಳಿಸಿ ಅವುಗಳ ಕಾರ್ಯನಿರ್ವಹಣೆಯನ್ನು ಕ್ರಮಗೊಳಿಸುತ್ತದೆ.