ಮನೆ ಪ್ರವಾಸ ಚಿಕ್ಕಮಗಳೂರು ಜಿಲ್ಲೆಯ ಏಳು ಪ್ರಸಿದ್ಧ ತಾಣಗಳಿವು

ಚಿಕ್ಕಮಗಳೂರು ಜಿಲ್ಲೆಯ ಏಳು ಪ್ರಸಿದ್ಧ ತಾಣಗಳಿವು

0

ಕರ್ನಾಟಕದ ಪಶ್ಚಿಮ ಭಾಗದಲ್ಲಿರುವ ಸುಂದರವಾದ ಜಿಲ್ಲೆ ಚಿಕ್ಕಮಗಳೂರು . ‘ಕಾಫಿ ನಾಡು’ ಎಂದೇ ಪ್ರಸಿದ್ಧಿ ಪಡೆದಿದೆ . ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟಗಳು ಮತ್ತು ಆಕರ್ಷಣೀಯ ಗಿರಿಧಾಮಗಳಿಗೆ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿನ ಐತಿಹಾಸಿಕ ದೇವಾಲಯಗಳು ಹಾಗೂ ಜಲಪಾತಗಳು ಜನರ ಕಣ್ಮನ ಸೆಳೆಯುವಂತದ್ದು. ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಯ ಏಳು ಪ್ರಸಿದ್ಧ ತಾಣಗಳಿವು

Join Our Whatsapp Group

ಮುಳ್ಳಯ್ಯನಗಿರಿ ಬೆಟ್ಟ

ಚಿಕ್ಕಮಗಳೂರಿನ ಅತ್ಯಂತ ಪ್ರಸಿದ್ಧ ಸ್ಥಳಗಳಲ್ಲಿ ಮುಳ್ಳಯ್ಯನಗಿರಿ ಶಿಖರ ಕೂಡ ಒಂದು. ಇದು ಕರ್ನಾಟಕದ ಅತಿ ಎತ್ತರವಾದ ಶಿಖರ ವಾಗಿದ್ದು 2000 ಮೀಟರ್ (6330 ಅಡಿ) ಎತ್ತರವಾಗಿದೆ. ಶಿಖರದ ಮೇಲೆ ಸಣ್ಣ ದೇವಾಲಯಗಳನ್ನು ಕಾಣಬಹುದಾಗಿದ್ದು ಇದು ಏಷ್ಯಾದ ಅತ್ಯುತ್ತಮ ಕಾಫಿ ಎಸ್ಟೇಟ್ ಗಳಲ್ಲಿ ಒಂದಾಗಿದೆ. ಚಾರಣಿಗರ ಸ್ವರ್ಗ ವಾಗಿದೆ ಮುಳ್ಳಯ್ಯನಗಿರಿ ಬೆಟ್ಟ.

ಚಿಕ್ಕಮಗಳೂರಿನಿಂದ ಸುಮಾರು 22 ಕಿಲೋಮೀಟರ್ ದೂರದಲ್ಲಿರುವ ಮುಳ್ಳಯ್ಯನಗಿರಿಯು ಚಾರಣಕ್ಕೆ ಉತ್ತಮ ಸ್ಥಳ.

ಶೃಂಗೇರಿ ಶಾರದಾಂಬ ದೇವಾಲಯ

ಚಿಕ್ಕಮಗಳೂರಿನ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿರುವ ಶಾರದಾಂಬ ದೇವಸ್ಥಾನ . ಶೃಂಗೇರಿ ಯಲ್ಲಿರುವ ಸರಸ್ವತಿ ದೇವಿಗೆ ಸಮರ್ಪಿತವಾಗಿರುವ ಪ್ರಸಿದ್ಧ ಹಿಂದೂ ದೇವಾಲಯವಾಗಿದೆ. ಶ್ರೀ ಆದಿಶಂಕರಾಚಾರ್ಯರು 8 ನೇ ಶತಮಾನದಲ್ಲಿ ಶೃಂಗೇರಿ ಶಾರದ ದೇವಸ್ಥಾನವನ್ನು ಸ್ಥಾಪಿಸಿದರು. ಅನೇಕ ರಾಜ್ಯಗಳಿಂದ ಇಲ್ಲಿಗೆ ಭಕ್ತಾದಿಗಳು ಬರುವರು ಹೀಗಾಗಿ ಇದು ಕರ್ನಾಟಕದ ಹೆಮ್ಮೆಯ ಸ್ಥಳವಾಗಿದೆ .

ಹೆಬ್ಬೆ ಜಲಪಾತ

ನೈಸರ್ಗಿಕ ಅದ್ಭುತಗಳಿಗೆ ಹೆಸರುವಾಸಿಯಾದ ಚಿಕ್ಕಮಗಳೂರಿನ ಪ್ರಮುಖ ಆಕರ್ಷಕ ಜಲಪಾತವಾಗಿದೆ ಹೆಬ್ಬೆ ಜಲಪಾತ. ನಗರ ಜೀವನದ ಜಂಜಾಟದಿಂದ ಸೋತವರಿಗೆ ಇದೊಂದು ಉತ್ತಮ ಸ್ಥಳವಾಗಿದೆ. ಕೆಮ್ಮಣ್ಣುಗುಂಡಿ ಗಿರಿಧಾಮ ದ ಬಳಿ ಇರುವ ಇದು ಕರ್ನಾಟಕದ ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಜಲಪಾತದ ಸುತ್ತಲೂ ಕಾಫಿ ಎಸ್ಟೇಟುಗಳಿದ್ದು ಇದು ಪ್ರಯಾಣವನ್ನು ಇನ್ನಷ್ಟು ಮುದಗೊಳಿಸುತ್ತದೆ.

ಬಾಬಾಬುಡನ್ ಗಿರಿ

ಚಿಕ್ಕಮಗಳೂರಿನ ಇನ್ನೊಂದು ಪ್ರಮುಖ ಶಿಖರವಾಗಿದೆ ಬಾಬಾಬುಡನ್ ಗಿರಿ .ಚಿಕ್ಕಮಗಳೂರು ಪಟ್ಟಣದಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಇದು ಚಾರಣಕ್ಕಾಗಿ ಜನಪ್ರಿಯವಾಗಿದೆ. ಬೆಟ್ಟವು ಸೂಫಿ ಸಂತ ಮತ್ತು ಮತ್ತು ದಾದಾ ಹಯಾತ್ ಖಲಂದರ್ ಮಂದಿರವನ್ನು ಹೊಂದಿದ್ದು ಇದು ಹಿಂದೂ ಮತ್ತು ಮುಸ್ಲಿಮರ ಪ್ರಸಿದ್ಧ ಯಾತ್ರಾಸ್ಥಳವಾಗಿದೆ. ಪ್ರಾಚೀನ ಕಾಲದಲ್ಲಿ ಬಾಬಾಬುಡನ್ ಗಿರಿ ಶ್ರೇಣಿಯನ್ನು ಚಂದ್ರದ್ರೋಣ ಪರ್ವತ ಎಂದು ಕರೆಯಲಾಗುತ್ತಿತ್ತು.

ಭದ್ರಾ ವನ್ಯಜೀವಿ ಅಭಯಾರಣ್ಯ

ಚಿಕ್ಕಮಗಳೂರಿನಲ್ಲಿ ಭೇಟಿ ನೀಡಲೇಬೇಕಾದ ಇನ್ನೊಂದು ಸ್ಥಳ ಭದ್ರಾ ವನ್ಯಜೀವಿ ಅಭಯಾರಣ್ಯ. ಪಶ್ಚಿಮಘಟ್ಟಗಳಲ್ಲಿ ನೆಲೆಸಿರುವ ಅತ್ಯಂತ ವೈವಿಧ್ಯಮಯ ಸ್ಥಳವಾಗಿರುವ ಇದು ಅನೇಕ ಸಸ್ಯ ಮತ್ತು ಪ್ರಾಣಿಗಳ ಆವಾಸಸ್ಥಾನವಾಗಿದೆ. ಚಿಕ್ಕಮಗಳೂರು ಪಟ್ಟಣದಿಂದ 38 ಕಿಲೋಮೀಟರ್ ದೂರದಲ್ಲಿದ್ದು 490 ಚದರ ಕಿಲೋಮೀಟರ್ ವಿಸ್ತೀರ್ಣದಲ್ಲಿ ಹರಡಿದೆ. ಅನೇಕ ಅಪರಿಚಿತ ಪ್ರಾಣಿಗಳು ಇಲ್ಲಿ ಕಂಡುಬರುತ್ತದೆ ಹಾಗೂ 120ಕ್ಕೂ ಹೆಚ್ಚು ಜಾತಿಯ ಮರಗಳನ್ನು ಇಲ್ಲಿವೆ .

ಕಲ್ಹಟ್ಟಿ ಫಾಲ್ಸ್

ಕಲ್ಹಟ್ಟಿ ಅಥವಾ ಕಲ್ಲತ್ತಗಿರಿಯು ಚಿಕ್ಕಮಗಳೂರು ಜಿಲ್ಲೆಯ ಸುಂದರವಾದ ದೇವಾಲಯ ಮತ್ತು ಜಲಪಾತವಾಗಿದೆ. ಇದು ಕೆಮ್ಮಣ್ಣುಗುಂಡಿಗೆ ಹೋಗುವ ದಾರಿಯಲ್ಲಿದ್ದು ಹೆಚ್ಚಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಆನೆಯ ಮುಖವಿರುವ ಬಂಡೆಯ ಮೇಲಿಂದ ಧುಮ್ಮಿಕ್ಕುವ ನೀರು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಇದು ಹೆಚ್ಚಿನ ಎತ್ತರ ಹಾಗೂ ಆಳವಿಲ್ಲದ್ದರಿಂದ ಪ್ರವಾಸಿಗರ ಉತ್ತಮ ಸ್ಥಳವಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನ

ಚಿಕ್ಕಮಗಳೂರು ಜಿಲ್ಲೆಯಲ್ಲಿನ ಪ್ರಸಿದ್ಧ ಉದ್ಯಾನವನ ಕುದುರೆಮುಖ ರಾಷ್ಟ್ರೀಯ ಉದ್ಯಾನವನ .ಇದು ಹಲವಾರು ಜಾತಿಯ ಸಸ್ಯ ಮತ್ತು ಪ್ರಾಣಿಗಳಿಗೆ ನೆಲೆ. ನಿರ್ದಿಷ್ಟ ಕಡೆಯಿಂದ ಕುದುರೆಯ ಮುಖವನ್ನು ಹೋಲುವುದರಿಂದ ಇದು ಕುದುರೆಮುಖ ಎಂಬ ಹೆಸರನ್ನು ಪಡೆದುಕೊಂಡಿದೆ. ಭೂಮಿಯ ಮೇಲಿನ ಸ್ವರ್ಗ ಎಂದೇ ಪ್ರಸಿದ್ಧಿ ಪಡೆದಿರುವ ಇದಕ್ಕೆ 1987 ರಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಉದ್ಯಾನವನದ ಸ್ಥಾನಮಾನವನ್ನು ನೀಡಲಾಯಿತು. ನೈಸರ್ಗಿಕ ಸೌಂದರ್ಯಕ್ಕೂ ಹೆಸರುವಾಸಿಯಾಗಿರುವ ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.