ಮನೆ ಉದ್ಯೋಗ ಯಾದಗಿರಿ ಜಿಲ್ಲಾಡಳಿತದಿಂದ ನೇಮಕಾತಿ: ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

ಯಾದಗಿರಿ ಜಿಲ್ಲಾಡಳಿತದಿಂದ ನೇಮಕಾತಿ: ಪದವೀಧರ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

0

ಬೆಂಗಳೂರು: ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ಸಿಬ್ಬಂದಿ ಹುದ್ದೆ ಭರ್ತಿಗೆ ಯಾದಗಿರಿ ಜಿಲ್ಲಾಡಳಿತ ಅರ್ಜಿ ಆಹ್ವಾನಿಸಿದೆ. ಹನ್ನೊಂದು ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಪದವೀಧರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.

Join Our Whatsapp Group

ವಿದ್ಯಾರ್ಹತೆ: ವಿಜ್ಞಾನ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ಮ್ಯಾನೇಜ್‌ಮೆಂಟ್​ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ಸಂಬಂಧಿಸಿದ ಕ್ಷೇತ್ರದಲ್ಲಿ 3ರಿಂದ 5 ವರ್ಷದ ಅನುಭವ ಹೊಂದಿದ್ದು, ಈಗಾಗಲೇ ವಿಪತ್ತು ನಿರ್ವಹಣಾ ಕಾರ್ಯದಲ್ಲಿ ಅನುಭವ ಹೊಂದಿದ್ದರೆ ಉತ್ತಮ.

ವೇತನ: ಮಾಸಿಕ 48,400 ರೂಪಾಯಿ ವೇತನದ ಜೊತೆಗೆ ಪ್ರವಾಸ ಭತ್ಯೆ.

ಅರ್ಜಿ ಸಲ್ಲಿಸುವ ವಿಧಾನ: ಆಫ್​ಲೈನ್​ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿ ಭರ್ತಿ ಮಾಡಿ, ಕೆಳಗಿನ ವಿಳಾಸಕ್ಕೆ ಸಲ್ಲಿಸಿ.

ಉಪಜಿಲ್ಲಾಧಿಕಾರಿ (ವಿಪತ್ತು ನಿರ್ವಹಣಾ ಘಟಕ) ಉಪ ಆಯುಕ್ತರ ಕಚೇರಿ, ಯಾದಗಿರಿ ಜಿಲ್ಲೆ.

ಆಗಸ್ಟ್​ 21ರೊಳಗೆ ಅರ್ಜಿ ಸಲ್ಲಿಸಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ yadgir.nic.in ಇಲ್ಲಿಗೆ ಭೇಟಿ ನೀಡಿ.

ಧಾರವಾಡ ಕೃಷಿ ವಿವಿ ನೇಮಕಾತಿ: ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರೊಜೆಕ್ಟ್​ ಅಸೋಸಿಯೇಟ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ 21,000-25,000 ವೇತನ ನಿಗದಿಪಡಿಸಲಾಗಿದೆ.

ಬಿಎಸ್ಸಿ (ಕೃಷಿ)ಯಲ್ಲಿ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ಅಭ್ಯರ್ಥಿಗಳು 3 ವರ್ಷ ಸಂಶೋಧನಾ ಕಾರ್ಯ ನಿರ್ವಹಣೆ ಅನುಭವ ಹೊಂದಿರಬೇಕು.

ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆಸಕ್ತರು ನಿಗದಿತ ಅರ್ಜಿಯೊಂದಿಗೆ ಅಗತ್ಯ ಪ್ರಮಾಣಪತ್ರಗಳ ಜೊತೆಗೆ ಆಗಸ್ಟ್​ 20ರಂದು ಬೆಳಗ್ಗೆ 10.30ಕ್ಕೆ ನಡೆಯುವ ವಾಕ್​ ಇನ್​ ಇಂಟರ್‌ವ್ಯೂನಲ್ಲಿ ಭಾಗಿಯಾಗಬಹುದು.

ಚೇಂಬರ್​ ಆಫ್​ ಅಸೋಸಿಯೇಟ್​, ಸಂಶೋಧನಾ ನಿರ್ದೇಶಕರು (ಹೆಚ್​ಕ್ಯೂ), ಕೃಷಿನಗರ, ಧಾರವಾಡ 58005 ಇಲ್ಲಿ ನೇರ ಸಂದರ್ಶನ ನಡೆಯುತ್ತದೆ.

ಹೆಚ್ಚಿನ ಮಾಹಿತಿ ಮತ್ತು ನಿಗದಿತ ಅರ್ಜಿಗಾಗಿ uasd.edu ಇಲ್ಲಿಗೆ ಭೇಟಿ ನೀಡಿ.