ಮನೆ ರಾಷ್ಟ್ರೀಯ ಆನೆಗಳಿಗೆ ಅನುಕೂಲಕರ ಆವಾಸಸ್ಥಾನ ಖಾತ್ರಿಪಡಿಸಲು ಎಲ್ಲ ಪ್ರಯತ್ನ ಮಾಡಲು ಭಾರತ ಬದ್ಧ: ಪ್ರಧಾನಿ ಮೋದಿ

ಆನೆಗಳಿಗೆ ಅನುಕೂಲಕರ ಆವಾಸಸ್ಥಾನ ಖಾತ್ರಿಪಡಿಸಲು ಎಲ್ಲ ಪ್ರಯತ್ನ ಮಾಡಲು ಭಾರತ ಬದ್ಧ: ಪ್ರಧಾನಿ ಮೋದಿ

0

ನವದೆಹಲಿ: ಆನೆಗಳಿಗೆ ಅನುಕೂಲಕರವಾದ ಆವಾಸಸ್ಥಾನವನ್ನು ಖಾತ್ರಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪುನರುಚ್ಚರಿಸಿದ್ದಾರೆ.

Join Our Whatsapp Group

ವಿಶ್ವ ಆನೆ ದಿನದ ಪ್ರಯುಕ್ತ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಆನೆಗಳನ್ನು ಸಂರಕ್ಷಿಸುವ ಸಮುದಾಯದ ಪ್ರಯತ್ನಗಳನ್ನು ಪ್ರಶಂಸಿಸುವ ಸುಸಂದರ್ಭ ಇದಾಗಿದೆ. ಆನೆಗಳು ಅಭಿವೃದ್ಧಿ ಹೊಂದಲು ಅನುಕೂಲಕರವಾದ ಆವಾಸಸ್ಥಾನವನ್ನು ಖಾತ್ರಿಪಡಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುವುದು ನಮ್ಮ ಬದ್ಧತೆಯಾಗಿದೆ. ಆನೆಗಳು ನಮ್ಮ ಸಂಸ್ಕೃತಿ ಮತ್ತು ಇತಿಹಾಸದೊಂದಿಗೆ ಸಂಬಂಧ ಹೊಂದಿವೆ. ದೇಶದಲ್ಲಿ ಕಳೆದ ಕೆಲವು ವರ್ಷಗಳಿಂದ ಆನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸಂತೋಷದ ಸಂಗತಿ’ ಎಂದು ಬರೆದುಕೊಂಡಿದ್ದಾರೆ.

ವಿಶ್ವ ಆನೆ ದಿನಾಚರಣೆ ಅಂಗವಾಗಿ ಆನೆಗಳು ಸಂಭ್ರಮಿಸಲು ವಿವಿಧ ಚಟುವಟಿಕೆಗಳನ್ನು ಉದ್ಯಾನಗಳಲ್ಲಿ ರೂಪಿಸಲಾಗಿದೆ. ಆನೆಗಳಿಗೆ ಗೆಣಸು, ಬಾಳೆಹಣ್ಣು, ಕಲ್ಲಂಗಡಿ, ಕಬ್ಬು, ಸೇರಿದಂತೆ ವಿಶೇಷ ಆಹಾರವನ್ನು ನೀಡಲಾಗುತ್ತಿದೆ.

ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆನೆಗಳ ನಿರ್ವಹಣೆ, ಕಾಡಿನಲ್ಲಿ ಎದುರಿಸುವ ಸಮಸ್ಯೆ, ಆನೆ ಚಲನ ವಲನಗಳ ಬಗ್ಗೆ ಪ್ರವಾಸಿಗರಿಗೆ ಉದ್ಯಾನದ ಸ್ವಯಂಸೇವಕರು ಮಾಹಿತಿ ನೀಡಿದ್ದಾರೆ.