ಮನೆ ಆರೋಗ್ಯ ಶ್ವಾಸಕೋಶದ ರೋಗಗಳು

ಶ್ವಾಸಕೋಶದ ರೋಗಗಳು

0

 ಕ್ಷಯರೋಗ :  ಭಾಗ ಒಂದು

Join Our Whatsapp Group

    ಮಾನವ ಜಾತಿಗೆ ಎಂತಹ ಇತಿಹಾಸವಿದೆಯೋ,ಅದೇ ರೀತಿ ಮನುಷ್ಯನನ್ನು ಪೀಡಿಸುವ ಕ್ಷಯರೋಗಕ್ಕೂ ಕೂಡಾ, ಅಷ್ಟೇ ಇತಿಹಾಸವಿದೆ ಕ್ಷಯಕ್ಕೆ ಸಂಬಂಧಿಸಿದ ಪ್ರಸ್ತಾಪ ವೇದಗಳಲ್ಲಿಯೂ ಇದೆ ಕ್ರಿ. ಪೂ.  600 ರ ಕಾಲದ ಚರಕ, ಶುಶೃತ ಗ್ರಂಥಿಗಳಲ್ಲಿಯೂ ಇದೆ. 

      ಸುಲಭವಾಗಿ ಕಂಡುಹಿಡಿಯಲ್ಪಡಬಲ್ಲ, ಪೂರ್ತಿಯಾಗಿ ಗುಣವಾಗಬಲ್ಲ ಕ್ಷಯರೋಗಕ್ಕೆ ಸರಾಸರಿ ಒಂದು ನಿಮಿಷಕ್ಕೆ ಒಬ್ಬ ಭಾರತೀಯ ಸಾಯುತ್ತಿರುವನೆಂದರೆ, ನಮ್ಮವರು ಈ ರೋಗದ ಬಗೆಗೆ ಎಷ್ಟು ಉದಾಸೀನರಾಗಿರುವರೆಂಬುದನ್ನು ಅರ್ಥಮಾಡಿಕೊಳ್ಳಬಹುದು.

    ಟ್ಯೂಬ್ರ್ಕ್ಯುಲೋಸಿಸ್ ಎಂದು ಕರೆಯಲ್ಪಡುವ ಕ್ಷಯ ರೋಗಕ್ಕೆ ಸಂಬಂಧಿಸಿದ ಏಕಾಣು ಜೀವಿಯನ್ನು 1982 ರಲ್ಲಿ ರಾಬರ್ಟ್    ಕಾಕ್ ಎಂಬ ಜರ್ಮನ್ ವೈದ್ಯ ಕಂಡುಹಿಡಿದ.

      ಆತನ ಹೆಸರಿನ ಮೇಲೆಯೇ ಈ ರೋಗವನ್ನುKoch s Disease ಎಂದು ಕೂಡ ಕರೆಯುತ್ತಾರೆ. ಅವನು ಕಂಡುಹಿಡಿದ ಕ್ಷಯ ರೋಗಕಾರಕ ಜೀವಿಯ ಹೆಸರು Mycobacterium Tuberculosis ದುರಾದೃಷ್ಟವೆಂದರೆ, ಈ ರೋಗಕ್ಕೆ ಚಿಕಿತ್ಸೆ ಅನಂತರ ಮತ್ತೆ 60 ವರ್ಷಗಳ ತನಕ ಕಂಡುಕೊಳ್ಳಲಾಗಲಿಲ್ಲ.

      ವಿಶ್ವದಲ್ಲಿ ಪ್ರತಿವರ್ಷ ಎಂಟು ಮಿಲಿಯ ವಸ ಟಿಬಿ ಪ್ರಕರಣಗಳು ನಮೂದಾಗುತ್ತಿವೆ ಅವುಗಳಲ್ಲಿ ಒಂದು ಪಾಯಿಂಟ್ ಐದು ಮಿಲಿಯ ಕೇಸುಗಳು ತಮ್ಮ ದೇಶಕ್ಕೆ ಸಂಬಂಧಿಸಿದ್ದು ಸರಾಸರಿ ಒಂದು ನಿಮಿಷಕ್ಕೆ ಒಬ್ಬ ಭಾರತೀಯ ಟಿಬಿ ಕಾರಣಗಳಿಂದ ಸಾಯುತ್ತಿರುವನೆಂದು ತಿಳಿದು ಬಂದಿದೆ.

    ಹೇಗೆ ಪ್ರಾರಂಭವಾಗುತ್ತದೆ?

    ಟಿಬಿ ಶರೀರದ ಯಾವ ಭಾಗಕ್ಕಾದರೂ ತಗಲಬಹುದು ಹೆಚ್ಚಾಗಿ ಶ್ವಾಸಕೋಶಗಳಿಗೆ ತಲುಪುತ್ತದೆ. ಸಾಮಾನ್ಯವಾಗಿ ಟಿಬಿ ಎಕಾಣು ಜೀವಿಗಳಿರುವ ಗಾಳಿಯನ್ನು ಉಸಿರಾಡುವುದರಿಂದ ನೆರೆಯ ಮನುಷ್ಯನಿಗೆ ಟಿಬಿ ಆರಡುತ್ತದೆ.

     ಟಿವಿ ಸೋಂಕಾದ ಮನುಷ್ಯನ ಕಿಮ್ಮಿದಾಗ,ಉಗುಳಿದಾಗ, ಮಾತಾಡ್ತಿರುವಾಗ,ಸೀನಿದಾಗ ಅವನಿಂದ ಸೂಕ್ಷ್ಮಜೀವಿಗಳು ಗಾಳಿಯೊಳಗೆ ಹರಾಡುತ್ತವೆ. ಆ ಗಾಳಿಯನ್ನು ಆರೋಗ್ಯವಂತನು  ಆರೋಗ್ಯವಂತರು ಉಸಿರಾಡಿದಾಗ ಈ ಜೀವಿಗಳು ಪ್ರವೇಶಿಸುತ್ತವೆ.

      ಒಬ್ಬ ಮನುಷ್ಯನ ಶರೀರದೊಳಗೆ ಟಿವಿ ಬ್ಯಾಕ್ಟೀರಿಯಾ ಗಳು ಪ್ರವೇಶಿಸಿದ ಕೂಡಲೇ, ಅವುಗಳನ್ನು ವಶಪಡಿಸಿಕೊಳ್ಳಲು ಅವನ ಶರೀರ ಕಫವನ್ನು ತಯಾರಿಸುತ್ತದೆ.ಕ್ರಿಮಿಗಳನ್ನು ಅಡಗಿಸಿಕೊಂಡಿರುವ ಕಫವನ್ನು ಅವನು ಕೆಮ್ಮಿದಾಗ, ಉಳಿದಾಗ ಇಲ್ಲವೇ ಸೀನಿದಾಗ ಹೊರಬೀಳು ತ್ತದೆ.

     ಶರೀರದಲ್ಲಿ ಟಿವಿ ಸೂಕ್ಷ್ಮ ಜೀವಿಗಳು ಇನ್ನೂ ಉಳಿದಿದ್ದರೆ ಅವುಗಳನ್ನು ಆತನಲ್ಲಿರುವ ಬಿಳಿಯ ರಕ್ತಕಣಗಳು ಕೊಲ್ಲಲು ಪ್ರಯತ್ನಿಸುತ್ತವೆ.

      ಈ ಎರಡು ರೀತಿಗಳಲ್ಲಿಯೂ ಅವನ ಶರೀರ ಟಿವಿ ಬ್ಯಾಕ್ಟೀರಿಯಾ ಗಳನ್ನು ಹೋಗಲಾಡಿಸಿಕೊಳ್ಳದಾದಗ, ಅವು ಆತನಲ್ಲಿ ಮನೆ ಮಾಡಿ, ಅವನ ಶ್ವಾಸನಾಳಗಳ ಮೂಲಕ ವೃದಿಗೊಳ್ಳಲು ಆರಂಭಿಸುತ್ತವೆ.

       ಸರಿಯಾದ ಪೌಷ್ಟಿಕಾ ಹಾರಗಳನ್ನು ತೆಗೆದುಕೊಳ್ಳುವುದು, ಡಯಾಬಿಟೀಸ್ ಏಡ್ಸ್,ಸೀತಾಳ, ಕಿಕ್ಕೇರಿದ ಪ್ರದೇಶದಲ್ಲಿ ವಾಸ, ಸರಿಯಾಗಿ ಶುಚಿತ್ವ ಕಾಪಾಡುತ್ತಿರುವುದು, ಈ ಅಂಶಗಳೆಲ್ಲವೂ ಟಿವಿ ಸೋಂಕು, ಅಭಿವೃದ್ಧಿಹೊಂದಲು ಸಹಕರಿಗಳಾಗುತ್ತವೆ.

ಟಿಬಿ ಸೋಂಕು

    ಟಿಬಿ ಬ್ಯಾಕ್ಟೀರಿಯಾಗಳು ಶರೀರದಲ್ಲಿ ಸ್ಥಾಪನೆಗೊಳ್ಳಲು ಪ್ರಯತ್ನಿಸುತ್ತಿರುವ ದೆಸೆಯಲ್ಲಿ, ಶರೀರದ ಬಿಳಿ ರಕ್ತಕಣಗಳು ಅವುಗಳನ್ನು ನುಂಗಿ ಹಾಕಿ, ಕೆಲವು ಪ್ರತ್ಯೇಕ ಗ್ರಂಥಿಗಳ ಬಳಿಗೆ ತಳ್ಳಿಕೊಂಡು ಹೋಗುತ್ತವೆ ಅಲ್ಲಿ ಗ್ರಂಥಿಗಳು ಬ್ಯಾಕ್ಟೀರಿಯಾಗಳನ್ನು ಟ್ರ್ಯಾಪ್ ಮಾಡಿ,ಅವು  ಶರೀರದ ಉಳಿದ ಭಾಗಕ್ಕೆ ವ್ಯಾಪಿಸದಂತೆ ಅಡ್ಡಿ ಮಾಡುತ್ತವೆ.

     ಒಬ್ಬ ವ್ಯಕ್ತಿ ಟಿಬಿಗೆ ಒಳಗಾಗುವನೇ ಇಲ್ಲವೇ ಎನ್ನುವುದು,ಅವನ ಶರೀರದಲ್ಲಿ ಬಳಿ ಇಳಿಯ ರಕ್ತಣಗಳ ಅಥವಾ ಟಿಬಿ ಜೀವಾಣುಗಳ ಮೇಲೆ ಅವಲಂಬಿಸಿರುತ್ತದೆ.

   . ಟಿಬಿ ಬ್ಯಾಕ್ಟೀರಿಯಾಗಳ ಸಂಖ್ಯೆ ಅಧಿಕವಾಗಿದ್ದು ಅವು ಶಕ್ತಿಯುತವಾಗಿದ್ದಲ್ಲಿ ಬಿಳಿಯ ರಕ್ತಕಣಗಳು ಸೋತುಹೋಗಿ, ಶರೀರ ಟಿವಿಗೆ ಗುರಿಯಾಗುತ್ತದೆ. ಹಾಗಲ್ಲದೆ ಬಿಳಿಯ ರಕ್ತಕಣಗಳು ಶಕ್ತಿಯುತವಾಗಿದ್ದರೆ, ಅವನು ಟಿವಿಯನ್ನು ಜಯಿಸುತ್ತಾನೆ.

       ಟಿಬಿ ಜೀವಾಣುಗಳು ಶಕ್ತಿಯುತವಾಗಿದ್ದರೆ ಟಿವಿ ಸೋಂಕು ವ್ಯಾಪಿಸುವುದು ಖಚಿತ,

. ಅನಂತರ ಟಿವಿ ಬ್ಯಾಕ್ಟೀರಿಯಾ ಗಳು ಲಕ್ಷಾಂತರ ಸಂಖ್ಯೆಯಲ್ಲಿ ಬೆಳೆಯಲಾರಂಭಿಸುತ್ತವೆ.

      ಟಿಬಿ ಸೋಂಕಿರುವ ಸ್ಥಳದಲ್ಲಿ ಕೆಲವು ವಾರಗಳಿಗೆ ಒಂದು ಸಣ್ಣ ಗೆಡ್ಡೆಯಂತಹುದು ಕಾಣಿಸಿಕೊಳ್ಳುತ್ತದೆ. ಈ ಗೆಡ್ಡೆಯನ್ನುTubercle ಎನ್ನುತ್ತಾರೆ ಈ ಗೆಡ್ಡೆ ಪ್ರೈಮರಿ ಸೋಂಕನ್ನು ಸೂಚಿಸುತ್ತದೆ.