ಮನೆ ಯೋಗಾಸನ ಪಾರ್ಶ್ವ ಸರ್ವಾಂಗಾಸನ

ಪಾರ್ಶ್ವ ಸರ್ವಾಂಗಾಸನ

0

 ‘ಪಾರ್ಶ್ವ’ವೆಂದರೆ ಪಕ್ಕ.ಬದಿ ‘ಸರ್ವಾಂಗಸನ’ದ ಈ ವ್ಯತ್ಯಸ ಭಂಗಿಯಲ್ಲಿ ಮುಂಡವನ್ನು ಒಂದು ಪಕ್ಕಕ್ಕೆ ತಿರುಚ ಬೇಕಾಗಿರುವುದರಿಂದ ಈ ಆಸನಕ್ಕೆ ಈ ಹೆಸರು.

Join Our Whatsapp Group

 ಅಭ್ಯಾಸ ಕ್ರಮ

1. ಸಾಲಂಬ  ಸರ್ವಾಂಗಾಸನದಿಂದ ಮುಂಡ ಮತ್ತು ಕಾಲಗಳನ್ನು ಬಲಭಾಗಕ್ಕೆ ತಿರುಗಿಸಬೇಕು

2. ಬಿಳಿಕ, ಎಡಗೈ ಮಣಿಕಟ್ಟು ಬೆನ್ನುಹುರಿಯ ತಳಭಾಗ ತ್ರಿಕೋಣಾಕಾರದ ಕಾಕ್ಸಿಲ್ ಎಂಬ ಎಲುಬಿನ ಮೇಲೆ ನೆಲೆಸುವಂತೆ ಎಡದಂಗೈಯನ್ನು ಎಡ ಟೊಂಕದ ಮೇಲಿಟ್ಟು ದೇಹವನ್ನು ಎಡಗೈ ಮೇಲಿಳಿಸಿ, ಅದರ ಭಾರವನ್ನು ಎಡಮೊಣಕೈಗೂ ಮತ್ತು ಮಣಿಕಟ್ಟಿಗೂ ವಹಿಸಬೇಕು.

3. ಬಲದಂಗೈಯನ್ನು ಸರ್ವಾಂಗಸನದಲ್ಲಿಟ್ಟಂತೆ ಎದೆಯ ಹಿಂಬದಿಯ ಬೆನ್ನು ಮೂಳೆಯ ಬಳಿಯಲ್ಲಿಟ್ಟಿರಬೇಕು.

4. ಆ ಬಳಿಕ, ಎಡದಂಗೈ ಆಧಾರದ ಮೇಲೆ ಎರಡು ಕಾಲುಗಳನ್ನು ಮೇಲೆತ್ತಿ, ಒಂದು ಕೋನವಾಗುವಂತೆ ಮಾಡಿ ಆ ಭಂಗಿಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ಸಾಮಾನ್ಯವಾದ ಉಸಿರಾಟದಿಂದ ನೆಲೆಸಬೇಕು.

 ಪರಿಣಾಮಗಳು

     ಈ ಆಸನವು ಮನೆಕಟ್ಟುಗಳಿಗೆ ಬಹಳ ಬಲ ಕೊಡುತ್ತದೆ; ವಿತ್ತಕೋಶ ಮೇದೋಜಿರಕ ಮತ್ತು ಗುಲ್ಮ ಇವುಗಳಿಗೆ ವ್ಯಾಯಾಮವನ್ನು ಒದಗಿಸುವುದಲ್ಲದೆ ಈ ಅಂಗಗಳೆಲ್ಲವನ್ನು ಆರೋಗ್ಯ ಸ್ಥಿತಿಯಲ್ಲಿಡಲು ಅನುಕೂಲಸುತ್ತದೆ.