ಮನೆ ಸ್ಥಳೀಯ ವಿಪಕ್ಷಗಳು ನಡೆಸಿದ್ದು ಪಾದಯಾತ್ರೆಯಲ್ಲ, ಪಾಪದ ಪಾದಯಾತ್ರೆ: ಪುಷ್ಪ ಅಮರನಾಥ್

ವಿಪಕ್ಷಗಳು ನಡೆಸಿದ್ದು ಪಾದಯಾತ್ರೆಯಲ್ಲ, ಪಾಪದ ಪಾದಯಾತ್ರೆ: ಪುಷ್ಪ ಅಮರನಾಥ್

0

ಮೈಸೂರು: ಮೂಡ ಹಗರಣವನ್ನು ಮುಂದಿಟ್ಟುಕೊಂಡು ಮೈಸೂರು ಚಲೋ ಪಾದಯಾತ್ರೆ ನಡೆಸಿದ ಬಿಜೆಪಿ -ಜೆಡಿಎಸ್ ಪಕ್ಷಗಳ ವಿರುದ್ಧ  ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಪುಷ್ಪ ಅಮರನಾಥ್  ವಾಗ್ದಾಳಿ ನಡೆಸಿದರು.

Join Our Whatsapp Group

ಮುಖ್ಯಮಂತ್ರಿ ಸಿದ್ದರಾಮಯ್ಯನವರ 77ನೇ ಹುಟ್ಟುಹಬ್ಬದ ಪ್ರಯುಕ್ತ ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿಪಕ್ಷಗಳು ನಡೆಸಿದ್ದು ಪಾದಯಾತ್ರೆಯಲ್ಲ ಅದು ಪಾಪದ ಪಾದಯಾತ್ರೆ ಎಂದು ತಿಳಿಸಿದರು.

 ಈ ಪಾದಯಾತ್ರೆ ಮೂಲಕ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಶೋ ಮಾಡಿದರು.

 ಆದರೆ ಅವರ ಶೋ ಫ್ಲಾಫ್ ಆಯಿತು ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು.

 ಇವರು ಮೈಸೂರು ಚಲೋ ಮಾಡುವ ಬದಲು ದೆಹಲಿ ಚಲೋ ಮಾಡಬೇಕು, ಕೇಂದ್ರದಿಂದ ರಾಜ್ಯಕ್ಕೆ ಅನುದಾನ ತರಲು ದೆಹಲಿ ಚಲೋ ಮಾಡಬೇಕು ಎಂದು ತಿಳಿಸಿದರು.

 ಸ್ವತ: ತಾವೇ ರಕ್ತದಾನ ಮಾಡಿದರು.

 ಈ ಸಂದರ್ಭದಲ್ಲಿ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಆರ್ ಮೂರ್ತಿ. ಕೆಪಿಸಿಸಿ  ವಕ್ತಾರ ಎಂ ಲಕ್ಷ್ಮಣ್. ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ. ಕೆಪಿಸಿಸಿ ಮಹಿಳಾ ಉಪಾಧ್ಯಕ್ಷ ಪುಷ್ಪವಲ್ಲಿ. ಮಾಜಿ ಮೇಯರ್ ಮೋದಮಣಿ. ಮಹಿಳಾ ಮುಖಂಡರುಗಳಾದ ರಾಧಾಮಣಿ. ಮಂಜುಳಾ. ಭವ್ಯ. ಲತಾ ಮೋಹನ್ ಹಾಗೂ ಕಾಂಗ್ರೆಸ್ ಮುಖಂಡರಾದ ಟಿ ಬಿ ಚಿಕ್ಕಣ್ಣ. ಲೋಕೇಶ್ ಪಿಯಾ. ಎಲ್ ಭಾಸ್ಕರ್ ಗೌಡ. ಗಿರೀಶ್ ಉಪಸ್ಥಿತರಿದ್ದರು.