ಈ ಯುಗದಲ್ಲಿ ಶಾಂತಿ ಎಂಬುವವನು ಇಂದ್ರ ಪದವಿಯನ್ನು ಸ್ವೀಕರಿಸುತ್ತಾನೆ. ಈ ಕಾಲದಲ್ಲಿ ಹವಿಷ್ಮಂತ ಸುಕೃತ, ಸತ್ಯ, ತಪೋಮೂರ್ತಿ,ನಾಭಾಗ, ಅಪರತಿಮೌಜ, ಸತ್ಯಕ್ಕೆತು ಇವರು ಸಪ್ತರ್ಷಿಗಳು. ಬ್ರಹ್ಮಸಾವರ್ಣಿಯ, 10 ಮಕ್ಕಳಲ್ಲಿ ಸುಕ್ಷೇತ್ರ ಉತ್ತಮೌಜ, ಭೂತೌಸೇನರು ಚಕ್ರವರ್ತಿಗಳಾಗುವವರು. ಧರ್ಮಸಾವರ್ಣಿ ಮನವು ಕಾಲದಲ್ಲಿ ವಿಭಂಗಮರು, ಕಾಮಗರು, ನಿರ್ವಾಂತರು ಎಂಬ ಹೆಸರನ್ನುಳ್ಳವರು ದೇವತೆಗಳಾಗಿ ಜನಿಸುವರು.
ವಖಷ, ಅಗ್ನಿತೇಜ, ವಪುಷ್ಮಂತ, ಘಣೀ, ಅರುಣೀ, ಹವಿಷ್ಟಂತ,ಅನಘರು ಸತ್ತರ್ ಸಪ್ತರ್ಷಿಗಳು. ಈತನ ಪುತ್ರರು ಸರ್ವತ್ರಗ,ಸುಧರ್ಮ, ದೇವಾನೀಕ ಮೊದಲಾದವರು. ರುದ್ರ ಸಾವರ್ಣಿ ಮನುವು, ಕಾಲದಲ್ಲಿ ರುದ್ರಧಾಮನು ಇಂದ್ರ ಪದವಿಯನ್ನು ಪಡೆಯುತ್ತಾನೆ. ಹರಿತರು, ರೋಹಿತರು, ಸುಮನಸರು, ಶುಕ್ರಮನಸರು, ಸುಪಾರರು ಎಂಬ ಹೆಸರುಳ್ಳ ದೇವತೆಗಳು ಆ ಕಾಲದಲ್ಲಿ ಜನಿಸುತ್ತಾರೆ . ತಪಸ್ವೀ ಸುತಪಸು, ತಪೋಮೂರ್ತಿ, ತಪೋರತಿ, ತಪೋದೃತಿ, ತಪೋದ್ಯುತಿ,ತಪೋಧರರು ಸಪ್ತ ಋಷಿಗಳು. ಈತನ ಮಕ್ಕಳು ದೇವನವಂತ, ಉಪದೇವ, ದೇವಶ್ರೇಷ್ಠರು. ರೌಚ್ಯದೇವ ಸಾವರ್ಣಿ ಕಾಲದಲ್ಲಿ ಸೂತ್ರಾಮರು, ಸುಕರ್ಮರು, ಸುಧರ್ಮರು, ದೇವಗಣಗಳಗಿ ಜನಿಸುತ್ತಾರೆ. ದಿವ್ಯಸ್ವತಿ ಇಂದ್ರನಾಗಿ ಪ್ರಖ್ಯಾತಿ ಗಳಿಸುತ್ತಾನೆ. ನಿರ್ವೋಹು, ತತ್ವದರ್ಶಿ, ನಷ್ಪ್ರಕಂಪ್ಯು, ನಿರುತ್ಸಕ, ದೃತಿಮಂತ, ಅನ್ಯಯು, ಸುತಪಸುರವರು ಸಪ್ತರ್ಷಿಗಳು ಈತನ ಮಕ್ಕಳು ಚಿತ್ರಸೇನ, ವಿಚಿತ್ರರು ಇಂದ್ರ ಸಾವರ್ಣಿ ಮನುವು ಕಾಲದಲ್ಲಿ ಶುಚೀ ದೇವೇಂದ್ರನಾಗುತ್ತಾನೆ. ಚಾಕ್ಷುಷರು, ಪವಿತ್ರರು, ಕನಿಷ್ಠರು, ಭ್ರಾಜಕರು, ವಾಚಾ-ವೃದ್ದರೂ ದೇವಗಣಗಳು, ಅಗ್ನಿಬಾಹು ಶುಚಿ, ಶುಕ್ರ, ಮಾಗಧ, ಅಗ್ನೀದ್ರ, ಯುಕ್ರ, ಜಿತು ಇವರುಗಳು ಸಪ್ತ ಮಹರ್ಷಿಗಳು ಊರನು. ಗಂಭೀರ ಬುದ್ಧಿಯರು ಈತನ ಪುತ್ರರು.
ದಕ್ಷ ಪ್ರಜಾಪತಿಯ ಪುತ್ರಿಯರಲ್ಲಿ ಶ್ರದ್ಧ, ಮೈತ್ರಿ, ದಯ,ಶಾಂತಿ, ಪುಷ್ಪ್ರ, ತುಷ್ಠಿ,ಕ್ರಿಯ ಉನ್ನತಿ,ಬುದ್ಧಿ, ಮೇಧ, ತಿತಿಕ್ಷ, ಮೂರ್ತಿ,ಹ್ರೀಲರನ್ನು ಧರ್ಮನು ವಿವಾಹವಾದನೆಂದು ಭಗವಂತ ಪುರಾಣದಲ್ಲಿದೆ. ಕೀರ್ತಿ ಲಕ್ಷ್ಮಿ ದೃತಿ, ಮೇಧ, ಪುಷ್ಠಿ,ಶ್ರದ್ಧ ಕ್ರಿಯ, ಬುದ್ಧಿ, ಲಜ್ಜರನ್ನು ವಿವಾಹವಾದನೆಂದು ಮಹಾಭಾರತದಲ್ಲಿ ಹೇಳಲಾಗಿದೆ. ಇವರೆಲ್ಲದೆ. ಇವರಿಗೆ ಇವರೆಲ್ಲದೇ ಇತನಿಗೆ ಹಲವರು ಪತ್ನಿಯರು ಇದ್ದರು. ಅವರಲ್ಲಿ ಭಾನು, ಲಂಬ, ಕಕುಭ, ಜಾಮಿ, ವಿಶ್ವ, ಸಾಧ್ಯ, ಮರುಧ್ವತೀ, ವಸು, ಮುಹೂರ್ತ, ಸಂಕಲ್ಪ, ಸೂನೃತರು ಇದ್ದರು. ಇವರಿಗೆ ಒಬ್ಬೊಬ್ಬರಿಂದ ಒಂದೊಂದು ವಂಶವು ಉದ್ಭ ವಿಸಿತು.
ಅಧರ್ಮನ ಪತ್ನಿ ಹಿಂಸ, ಇವರಿಗೆ ಅನೃತ, ನಿರುಕ್ತಿಯರು ಮಕ್ಕಳಾದರು. ಅಣ್ಣ ತಂಗಿಯರಾದ ಇವರು ವಿವಾಹ ಮಾಡಿಕೊಂಡು ಭಯ,ನರಕ, ಮಾಯೆ ವೇದನೆ ಎಂಬುವವರನ್ನು ಹೆತ್ತರು. ಮಾಯೆಗೆ ಮೃತ್ಯು,ವೇದನೆಗೆ ರವರನ್ನು ರೌರವರನ್ನು ಕೊಟ್ಟು ವಿವಾಹ ಮಾಡಿದರು. ಮೃತ್ಯುವಿಗೆ ವ್ಯಾಧಿ, ಜರ, ಕ್ರೋಧರು ಜನಿಸಿದರು. ರೌರವನಿಗೆ ದುಃಖನು ಜನಿಸಿದನು. ಪ್ರಹೇತಿಗೆ ರಾಕ್ಷಸರು ಹೇತಿ ಜನಿಸಿದರು. ಹೇತಿಗೆ ಭಯ ಗರ್ಭದಲ್ಲಿ ವಿದ್ಯುತ್ಕೇಶನು. ಅವನಿಗೆ ಲಂಕಾ ವಾಸಿಗಳು, ಪಾತಾಳವಾಸಿಗಳು ಆದ ರಾಕ್ಷಸನು ಜನಿಸಿದರು. ಇವರಲ್ಲಿ ಲಂಕಾ ವಾಸಿಗಳು ರಾಮ ರಾವಣರ ಯುದ್ಧದಲ್ಲಿ ವರಣಿಸಿದರು.
ವಸಿಷ್ಠನು ಮೊದಲನೇ ಜನ್ಮದಲ್ಲಿ ಅರುಂಧತಿಯನ್ನು ವಿವಾಹವಾಗಿ ಚಿತ್ರಸೇನ,ಪುರೋಚಿಸು, ವಿರಚು, ಮಿತ್ರು, ಉಲ್ಬಣ ವಸುಬೃದ್ಯಾನ, ದ್ಯುಮಂತರನ್ನು ಹೆತ್ತನು. ದ್ವಿತೀಯ ಜನ್ಮದಲ್ಲಿ ಅಕ್ಷಮಳನ್ನು ಸ್ವೀಕರಿಸಿ ನಿಮಿ ಚಕ್ರವರ್ತಿಯ ಶಾಪದಿಂದ ನಿಹನಾದನು. ಮೂರನೆಯ ಜನ್ಮದಲ್ಲಿ ವಶಿಷ್ಠನು ಮಿತ್ರ ವರುಣರ ಪುತ್ರನಾಗಿ ಜನಿಸಿದನು. ಈತನಿಗೆ ಊರ್ಜಳ ಗರ್ಭದಲ್ಲಿ ರಚಸ್ಸು ಗೋತ್ರನು, ಉರ್ಧ್ವ ಬಾಹು,ಸವನ, ಆನಘ, ಸುತಪಸು, ಶುಕ್ರರು ಜನಿಸಿದರು. ಭೃಗು ಮಹರ್ಷಿಗೆ ಖ್ಯಾತಿಯ ಗರ್ಭದಲ್ಲಿ ಧಾತ, ವಿಧಾತ, ಕವಿ,ಲಕ್ಷ್ಮೀಯರು ಜನಿಸಿದರು.ಧಾತನಿಗೆ ಪ್ರಾಣನು, ಅವನಿಗೆ ದ್ಯುತಿಮಂತನು, ದ್ಯುತಿಮಂತನಿಗೆ ರಾಜವಂತರು ಆದರು. ವಿಧಾತನಿಗೆ ನಿಯೂತಿ ಗರ್ಭದಲ್ಲಿ ಮಕಂಡು, ಅವನಿಗೆ ಮಾರ್ಕಂಡೇಯನನ್ನು ಜನಿಸಿದರು.. ಉತ್ತರ ಜನ್ಮದಲ್ಲಿ ವರುಣನಿಗೆ ಹುಟ್ಟಿದ ಭೃಗುವಿಗೆ ಭೂತನು, ಚ್ಯವ ನನು, ವಜ್ರಶಿರ್ಷನು, ಶುಚಿ, ಶುಕ್ರನು, ಸವನನು ಹುಟ್ಟಿದರು.