ಮನೆ ರಾಜಕೀಯ ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಶೆಟ್ಟರ್‌ ರಾಜಕಾರಣ ಮಾಡುತ್ತಿದ್ದಾರೆ: ಶಿವರಾಜ ತಂಗಡಗಿ

ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಶೆಟ್ಟರ್‌ ರಾಜಕಾರಣ ಮಾಡುತ್ತಿದ್ದಾರೆ: ಶಿವರಾಜ ತಂಗಡಗಿ

0

ಕೊಪ್ಪಳ: ಡ್ಯಾಂ ವಿಚಾರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ರಾಜಕಾರಣ ಮಾಡಿದ್ದಾರೆ. ತುಂಗಭದ್ರಾ ಬೋರ್ಡ್ ಕೇಂದ್ರ ಸರ್ಕಾರದ ಅಧೀನದಡಿ ಬರುತ್ತದೆ. ತುಂಗಭದ್ರಾ ಬೋರ್ಡ್ ಏನು ಮಾಡುತ್ತಿದೆ? ವಿಜಯೇಂದ್ರ, ಬೊಮ್ಮಾಯಿ ಡ್ಯಾಂ ವೀಕ್ಷಣೆಗೆ ಬರುತ್ತಿದ್ದಾರೆ. ಹಿಂದೆ ಬೋರ್ಡ್ ವಿಚಾರದಲ್ಲಿ ಇವರು ಕೇಂದ್ರಕ್ಕೆ ಏಷ್ಟು ಬಾರಿ ಪತ್ರ ಬರೆದಿದ್ದಾರೆ. ನಾವು ಇದರಲ್ಲಿ ರಾಜಕಾರಣ ಮಾಡುತ್ತಿಲ್ಲ. ಕೇಂದ್ರದ ಬೋರ್ಡ್ ಏನೂ ಮಾಡುತ್ತಿಲ್ಲ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

Join Our Whatsapp Group

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಗೆ ನೀರಾವರಿ ಬಗ್ಗೆ ಏನೂ ಗೊತ್ತಿಲ್ಲ ಅವರಿಗೆ ಬರೀ ಗಣಿಗಾರಿಕೆ ಅಷ್ಟೇ ಗೊತ್ತು ಎಂದರು.

ರವಿವಾರ ಡಿಸಿಎಂ ಡಿಕೆ ಶಿವಕುಮಾರ್‌ ಅವರು ಡ್ಯಾಂಗೆ ಭೇಟಿ ಮಾಡಿದ ಬಳಿಕ ನಾವು ತಜ್ಞರ ಜೊತೆ ತಡರಾತ್ರಿ ಸಭೆ ಮಾಡಿದ್ದೇವೆ. ಸರ್ಕಾರದಿಂದ ಒಂದು ತಂಡ ರಚನೆ ಮಾಡಿದ್ದೇವೆ. ಮತ್ತೊಂದು ತಜ್ಞ ತಂಡವನ್ನು ಡ್ಯಾಂಗೆ ಆಹ್ವಾನ ಮಾಡಿದ್ದೇವೆ. ಪ್ರಸ್ತುತ ಡ್ಯಾಂನಲ್ಲಿ 2.50 ಅಡಿಯಷ್ಟು ನೀರು ಕಡಿಮೆಯಾಗಿದೆ. ಇಂದು 1.40 ಕ್ಯೂಸೆಕ್ ನೀರು ನದಿಪಾತ್ರಕ್ಕೆ ಹರಿ ಬಿಟ್ಟಿದೆ. ನಾವು ಡ್ಯಾಂ ರಕ್ಷಣೆ ಮಾಡಬೇಕು, ನೀರು ಉಳಿಸುವ ಕೆಲಸ ಮಾಡಬೇಕಿದೆ ಎಂದರು.

ಹೊಸ ಪ್ರಯತ್ನ ಮಾಡುತ್ತಿದ್ದೇವೆ. ಹೊಸ ಗೇಟ್ ನೀರಿನಲ್ಲಿ ಇಳಿ ಬಿಡುವ ಹೊಸ ಪ್ರಯತ್ನ ಆರಂಭ ಮಾಡಲಿದ್ದೇವೆ. ಜಿಂದಾಲ್ ತಜ್ಞ ತಂಡವು ನಮಗೆ ಸಲಹೆ ನೀಡಿದ್ದಾರೆ. ಸಿಎಂ ಪ್ರತಿ ಮೂರು ತಾಸಿಗೊಮ್ಮೆ ಮಾಹಿತಿ ಪಡೆಯುತ್ತಿದ್ದಾರೆ. ಡ್ಯಾಂ ರಕ್ಷಣೆಗೆ ಎ ಮತ್ತು ಬಿ ಪ್ಯಾನ್ ಮಾಡಿದೆ. ನೀರಾವರಿ ತಜ್ಞ ಕನ್ನಯ್ಯ ತಮಿಳುನಾಡಿನಿಂದ ಬರುತ್ತಿದ್ದಾರೆ ಎಂದರು.