ಮನೆ ದೇವಸ್ಥಾನ ಭ್ರಮರಾಂಬಿಕಾ ಸಮೇತ ಶ್ರೀ ಪ್ರಸನ್ನ ಸೋಮೇಶ್ವರಸ್ವಾಮಿ ದೇವಾಲಯ

ಭ್ರಮರಾಂಬಿಕಾ ಸಮೇತ ಶ್ರೀ ಪ್ರಸನ್ನ ಸೋಮೇಶ್ವರಸ್ವಾಮಿ ದೇವಾಲಯ

0

ಮಾಗಡಿ ಊರಿನಿಂದ ಎರಡು ಕಿಲೋಮೀಟರ್ ಇರುವ ಈ ಪುಣ್ಯಕ್ಷೇತ್ರದ 1512ರಲ್ಲಿ ಮುಮ್ಮಡಿ ಕೆಂಪೇಗೌಡರು ಕಟ್ಟಿಸಿದ್ದಾರೆ. ಈ ದೇವಾಲಯ ನಿರ್ಮಾಣ ಮಾಡಿ ಇಲ್ಲಿಗೆ 512 ವರ್ಷ ಕಳೆದಿದೆ ಮುಮ್ಮಡಿ  ಕೆಂಪೇಗೌಡರ ತಾಯಿಗೆ ಕಾಶಿ ಹೋಗಬೇಕೆನ್ನುವ ಮನಸಾಗುತ್ತದೆ ವಯಸ್ಸಾದ ಕಾರಣ ಅವರಿಗೆ ಕಾಶಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ ಆ ಸಮಯದಲ್ಲಿ ಅವರ ತಾಯಿಯವರಿಗೋಸ್ಕರ ಕಾಶಿಯಿಂದ ಸಾಲಿಗ್ರಾಮಲಿಂಗ ತಂದು ಇಲ್ಲಿ ಪ್ರತಿಷ್ಠಾಪನೆ ಮಾಡಿಸಿದ್ದಾರೆ.

Join Our Whatsapp Group

ಇಲ್ಲಿ ಶಿವಲಿಂಗ ಸಾಲಿಗ್ರಾಮ ರೂಪದಲ್ಲಿದೆ. ಇಲ್ಲಿಯ ಪೀಠದಲ್ಲಿ ಮೃತುಂಜಯ ಚಕ್ರ ಅಂದರೆ ಮೃತ್ಯುಂಜಯ ಬೀಜಾಕ್ಷರಗಳು ಶ್ರೀಚಕ್ರದಲ್ಲಿ ಇರುವುದೇ ಇಲ್ಲಿಯ ವಿಶೇಷ. ಇಲ್ಲಿ  ರುದ್ರಾಭಿಷೇಕದ ತೀರ್ಥ ಪೋಕ್ಷಣೆ ಮತ್ತು ಪ್ರಸಾದ ತೆಗೆದುಕೊಂಡರೆ ಅಕಾಲ  ಮೃತ್ಯು ಅಪಮೃತ್ಯು  ಕಾಳಸರ್ಪ ದೋಷಗಳು ನಿವಾರಣೆ ಆಗುತ್ತದೆ ಎನ್ನುವುದು ಹಿಂದಿನಿಂದಲೂ ನಡೆದು ಬಂದಿರುವಂತ ಪ್ರತೀತಿ.

ಇಲ್ಲಿ ಪ್ರತಿನಿತ್ಯ ರುದ್ರಾಭಿಷೇಕ ಹೋಮಗಳು ಮೃತ್ಯುಂಜಯ ಹೋಮ ಆಯುಷ್ಯಹೋಮ ಗಣಪತಿಹೋಮಗಳು ನಡೆಯುತ್ತಿರುತ್ತದೆ. ಪ್ರತಿ ಅಮಾವಾಸ್ಯೆ ಮಹಾ ಮೃತ್ಯುಂಜಯ ಹೋಮ ನಡೆಯುತ್ತದೆ. ಹುಣ್ಣಿಮೆಯ ದಿನ ಸತ್ಯನಾರಾಯಣ ಪೂಜೆ ನಡೆಯುತ್ತದೆ.ಏಕವಾರ ರುದ್ರಾಭಿಷೇಕ ಏಕ ದಶವಾರ ರುದ್ರಾಭಿಷೇಕ ಶತರುರುದ್ರಾಭಿಷೇಕ ಇವೆಲ್ಲವೂ ನಡೆಯುತ್ತಿರುತ್ತದೆ.

ಇಲ್ಲಿ ಮಘಮಾಸದ ರಥಸಪ್ತಮಿಯ ದಿನ ಬ್ರಹ್ಮೋತ್ಸವ  ನಡೆಯುತ್ತದೆ. 10 ದಿನ ಉತ್ಸವಗಳು ಬಹಳ ವಿಶೇಷವಾಗಿ ವಿಜೃಂಭಣೆಯಿಂದ ನಡೆಸುತ್ತಾರೆ. ಶಿವರಾತ್ರಿಯ ದಿನ ನಾಲ್ಕು ಶತಾರುದ್ರಾಭಿಷೇಕ ಮಹಾ ಮೃತ್ಯುಂಜಯ ಹೋಮ 4  ಯಾಮನಾ ಪೂಜೆ ನಡೆಯುತ್ತದೆ.

ಕಾರ್ತಿಕ ಮಾಸದ ಒಂದು ತಿಂಗಳು ಸತತವಾಗಿ ದೀಪಾರಾಧನೆ ನಡೆಯುತ್ತದೆ. ಕಡೆಯ ದಿನ ಅಮವಾಸ್ಯೆಯಂದು ಲಕ್ಷ ದೀಪೋತ್ಸವ ನಡೆಯುತ್ತದೆ. ಪಕ್ಕದಲ್ಲಿ ಬ್ರಮರಾಂಬಿಕಾ ದೇವಾಲಯವಿದೆ ಈ ದೇವಿಯ ಬಳಿ ಭಕ್ತಾದಿಗಳು ಸಂತಾನ ಭಾಗ್ಯಕ್ಕಾಗಿ ಕಂಕಣಭಾಗ್ಯ ಮತ್ತು ಉದ್ಯೋಗಾವಕಾಶಕ್ಕಾಗಿ ತಾಯಿಯನ್ನು ಪ್ರಾರ್ಥಿಸಿ, ಅಮ್ಮನವರಿಗೆ ಮಡಲಕ್ಕಿ ಕಟ್ಟಿ ಹೋದರೆ ಕೆಲಸ ಕಾರ್ಯಗಳು  ಪಕ್ಕದಲ್ಲಿ ಕೆಲಸ ಕಾರ್ಯಗಳು ನೆರವೇರುತ್ತದೆ.

ನವರಾತ್ರಿಯಲ್ಲಿ ಅಮ್ಮನವರಿಗೆ ಒಂದೊಂದು ದಿನ ಒಂದೊಂದು ವಿಶೇಷ ಅಲಂಕಾರ ನೆರವೇರಿಸಿ ದುರ್ಗಾ ಸಪ್ತಶತಿ,ಲಲಿತ ಸಹಸ್ರನಾಮ ದುರ್ಗಾ ಹೋಮ, ಇನ್ನಿತರ ಪಾರಾಯಣಗಳು ನಡೆಯುತ್ತದೆ.ಅಮ್ಮನವರ ಸನ್ನಿಧಾನದ ಮುಂಭಾಗದಲ್ಲಿ ಸತ್ಯನಾರಾಯಣ ದೇವರು ದೇವಾಲಯವಿದೆ. ಕರ್ನಾಟಕದಲ್ಲಿ ಮೊಟ್ಟ ಮೊದಲ ಬಾರಿಗೆ ಮುಮ್ಮಡಿ ಕೆಂಪೇಗೌಡರು ಸ್ಥಾಪನೆ ಮಾಡಿದ ಸತ್ಯನಾರಾಯಣ ವಿಗ್ರಹವಿದು.

ಹುಣ್ಣಿಮೆಯ ದಿನದಂದು ಇಲ್ಲಿ ವಿಶೇಷವಾಗಿ ಸತ್ಯನಾರಾಯಣ ಪೂಜೆಯನ್ನು ನೆರವೇರಿಸುತ್ತಾರೆ ಯಾರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಲು ಅನುಕೂಲವಿಲ್ಲದವರು ಇಲ್ಲಿ ಬಂದು ಸತ್ಯನಾರಾಯಣ ಪೂಜೆಯನ್ನು ಮಾಡಿಸುತ್ತಾರೆ. ಸತ್ಯನಾರಾಯಣಸ್ವಾಮಿಯ ದೇವರ ಬಲ ಭಾಗಕ್ಕೆ ಕೆಂಪೇಗೌಡರ ಹಜಾರವಿದೆ. ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದ ಜಾಗ.

ಭರತನಾಟ್ಯ, ಸಂಗೀತ, ನಾಟಕಗಳು, ಹರಿ ಕಥೆಗಳು ಗಿರಿಜಾ ಕಲ್ಯಾಣೋತ್ಸವ ಪ್ರಕಾರೋತ್ಸವಗಳು, ಭಜನೆಗಳು,ನಡೆಯುತ್ತಿದ್ದವು. ರೈತರಿಗಾಗಿ ಕೆಂಪೇಗೌಡರು ಈ ಜಾಗದಲ್ಲಿ ನಡೆಯುತ್ತಿದ್ದರು. ಆದ್ದರಿಂದ ಈ ಜಾಗಕ್ಕೆ ಕೆಂಪೇಗೌಡರ ಎಂದು ಹೆಸರಾಯಿತು. ದೇವಸ್ಥಾನದ ಎಡ ಭಾಗದಲ್ಲಿ ಕೆಂಪೇಗೌಡರು ನ್ಯಾಯ ತೀರ್ಮಾನ ಮಾಡುತ್ತಿದ್ದ ಜಾಗ ಇದೆ. ಇಲ್ಲಿರುವ ಒಂದು ಕಂಬದಲ್ಲಿ ವಿಶೇಷವಾಗಿ ಕಂಚಿನ ಶಬ್ದ ಕೇಳಿ ಬರುತ್ತದೆ.

ದೇವಾಲಯದ ಹಿಂಭಾಗದಲ್ಲಿ ಪಂಚ ಬಿಲ್ವವೃಕ್ಷ ಎಂದು ಐದು ಬಲ್ವ ಗಿಡಗಳನ್ನು ಹಾಕಿದರು. 500 ವರ್ಷಗಳ ಇತಿಹಾಸ ಇದೆ. ದೇವಾಲಯ ನಿರ್ಮಾಣದ ಕಾಲದಲ್ಲಿ ಸ್ವತಃ ಕೆಂಪೇಗೌಡರು ಹಾಕಿದ ಗಿಡಗಳು ಈಗ ಮರಗಳಾಗಿವೆ. ಅದಕ್ಕೆಲ್ಲ ತಾಮ್ರದ ಶಾಸನ ಮಾಡಿದ್ದಾರೆ ಅವರು ಏನೇನು ಕೆಲಸ ಮಾಡಿದ್ದಾರೋ ಎಲ್ಲದಕ್ಕೂ ತಾಮ್ರ ಶಾಸನ ಮಾಡಿದ್ದಾರೆ ಯೋಗ ಶಾಲೆ ಕಲ್ಯಾಣ ಮಂಟಪ ಇಲ್ಲಿ ವಿಶೇಷವಾಗಿದೆ.