ಮನೆ ಆರೋಗ್ಯ ಕ್ಷಯ ರೋಗ : ಭಾಗ ಎರಡು

ಕ್ಷಯ ರೋಗ : ಭಾಗ ಎರಡು

0

 ಟಿಬಿ ಲಕ್ಷಣಗಳು

Join Our Whatsapp Group

★& ಟೀಬಿ  ಲಕ್ಷಣಗಳು ಅದು ಯಾವ ಅವಯವಕ್ಕೆ ವ್ಯಾಪಿಸಿದೆ ಎಂಬುದರ ಮೇಲೆ ಅವಲಂಬಿಸಿರುತ್ತದೆ. ಟೀಬಿ ನಮ್ಮ ಶರೀರದಲ್ಲಿ ಕೇವಲ ಶ್ವಾಸಕೋಶಗಳಿಗೆ  ಮಾತ್ರವಲ್ಲದೆ, ಯಾವ ಅವಯವಕ್ಕಾದರೂ ಅಂಟಬಹುದು. ಲಿಂಫ್ ಗ್ರಂಥಿಗಳು,  ಎಲುಬುಗಳು, ಕೀಲುಗಳು ಚರ್ಮ, ಕರುಳು, ಮಿದುಳು, ಕಿಡ್ನಿ ಹೀಗೆ ಯಾವ ಅವಯಕ್ಕಾದರೂ ಬರಬಹುದು.

★ಸಾಮಾನ್ಯವಾಗಿ ನಮ್ಮಶರೀರದಲ್ಲಿನ ರೋಗನಿರೋಧಕಾಯ ವ್ಯವಸ್ಥೆ ಟೀಬಿ ಬ್ಯಾಕ್ಟೀರಿಯ ನಮಗೆ ಅಂತದಂತೆ,ಅಂದರೆ ಸೋಂಕು ತಗಲದಂತೆ ಕಾಪಾಡುತ್ತದೆ ಆದರೆ ಕೆಲವರಲ್ಲಿ ಈ ವ್ಯವಸ್ಥೆ ದುರ್ಬಲವಾಗಿರುವುದರಿಂದ ಅವರು ಬೇಗ ಟೀಬಿಗೆ ಗುರಿಯಾಗುತ್ತಾರೆ.

★ಶ್ವಾಸಕೋಶಗಳ ಟೀವಿ ಮನುಷ್ಯರಲ್ಲಿ ಸಾಮಾನ್ಯವಾಗಿ ಟೀವಿ ಶ್ವಾಸಕೋಶಗಳಿಗೇ ತಗಲುತ್ತದೆ ಈ ಟೀವಿಯು ಮುಖ್ಯ ಲಕ್ಷಣ ಕೆಮ್ಮು!

★ ಟೀಬಿ ಕಾರಣದಿಂದ ಬರುವ ಕೆಮ್ಮು ಸಾಧಾರಣ ಔಷಧಗಳಿಗೂ ಸೀರಿಗಳಿಗೂ ಬಗುವುದಿಲ್ಲ. ಯಾವ ವ್ಯಕ್ತಿಯೇ ಆದರೂ ಎರಡು ವಾರಗಳಿಗೂ ಹೆಚ್ಚುಗಿ ಕೆಮ್ಮುತ್ತಿದ್ದು ಈ ಎರಡು ವಾರಗಳಲ್ಲಿ ಯಾವ ಔಷಧಿದಿಂದಲೂ ಉಪಯೋಗವಾಗದಿದ್ದರೆ ಅವನು ತನಗೆ ಟೀಬಿ ಸೋಂಕಾಗಿದೆಯಂದು ಸಂದೇಹಿಸಬವುದು.

★ಈ ರೋಗದಲ್ಲಿ ಕೆಮ್ಮಿನೊಂದಿಗೆ ಜ್ವರವೂ ಇರುತ್ತದೆ.ಸಾದರಣವಾಗಿ ಜ್ವರ ಸಾಯಂಕಾಲ ಬಂದು ಬೆಳಗ್ಗೆ ಹೊತ್ತಿಗೆ ಇಳಿಯುತ್ತದೆ.  ವಾರದೊಳಗೆ ರೋಗಿ ಬಹಳ ನಿಶ್ಯಕ್ರನಾಗುತ್ತಾನೆ.

★ಸೋಂಕು ನಿಯಂತ್ರಿಸಲು,ಶರೀರ ತನ್ನ ಶಕ್ತಿಯನೆಲ್ಲಾ ಒಗ್ಗೂಡಿಸಿ ಪ್ರಯತ್ನಿಸುವುದರಿಂದ,ಬಹುಬೇಗ ಅವರ ತೂಕ ಕಡಿಮೆಯಾಗುತ್ತದೆ ಹಸಿವಿಲ್ಲದಿರುವುದರಿಂದ ಆಹಾರ ತೆಗೆದುಕೊಳ್ಳಲಾರದವನಾಗುತ್ತಾನೆ.

★ಶ್ವಾಸಕೋಶಗಳಿಗೆ ಸೋಂಕು ತಗಲಲು ಪ್ರಾರಂಭವಾಗುತ್ತಲೇ, ಕೆಮ್ಮಿಕೆಮ್ಮಿ ಉಗುಳಿದಾಗ ಕಫದ ಜೊತೆಗೆ ರಕ್ತ ಬೀಳುತ್ತಪದೆ.

★ ಎದೆಯಲಿ ನೋವು ತೊಂದರೆಯಾಗಬಹುದು.

★ಈ ಲಕ್ಷಣಗಳೆಲ್ಲವೂ ಸೇರಿ, ಒಟ್ಟಿನಲ್ಲಿ ಅವನು ತಾನು ಯಾವುದೋ ಅನಾರೋಗ್ಯದಿಂದ ಬಳಲುತ್ತಿರುವೆನೆಂಬ ಭವನೆಗೀಡಾಗುತ್ತನೆ ಯಾವ ಕೆಲಸವನ್ನು ಮಾಡಲಾಗದೆ ಅವನು ಮನುಷ್ಯರಿನಿಂದ ದೂರವಾಗಿರುತ್ತಾಸಿಗೆ ಬಿಡುತ್ತಾನೆ.

ಪ್ರೈಮರಿ ಫೋಕಸ್ 

★ ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಪ್ರತಿಯೊಬ್ಬರು ಟೀವಿ ಬ್ಯಾಕ್ಟೀರಿಯಗಳಿಗೆ ಗುರಿಯಾದವರೇ ಆಗಿರುತ್ತಾರೆ ನಾವೆಲ್ಲರೂ ಟೀವಿ ಬ್ಯಾಕ್ಟೀರಿಯಗಳ     Primary Focusಈಡಾಗುತ್ತಲೇ ಇರುತ್ತೇವೆ. 

★ಟಿವಿ ಸೋಂಕಿನ ಪ್ರೈಮರಿ ಫೋಕಸ್ ಪೂರ್ಣವಾಗಿ  ನಿತ್ರಾಣವಾಗಿದೆಯೇ ಅಥವಾ ಬಲಗೊಂಡು ಶ್ವಸಕೋಶಗಳಿಗೆ, ಅಲ್ಲಿಂದ ಉಳಿದ ಶರೀರಕ್ಕೆ  ವ್ಯಾಪಿಸುತ್ತದೆಯೇ, ಎನ್ನುವುದು ನಮ್ಮ ರೋಗನಿರೋಧಕ ವ್ಯವಸ್ಥೆಯ ಶಕ್ತಿಯ ವಲಂಬಿಸಿರುತ್ತದೆ.

★ ಆರೋಗ್ಯವಂತರಾದ ವ್ಯಕ್ತಿಗಳಲ್ಲಿ ಪ್ರೈಮರಿ ಇನ್ಫೆಕ್ಷನ್ ಪೂರ್ತಿ ನಿತ್ರಾಣವಾಗಿದ್ದು ಮತ್ತಾವ  ಸಮಸ್ಯೆಯೂ ಇಲ್ಲದೆ, ಅವನು ಜೀವನಪರ್ಯಂತ ಆರೋಗ್ಯವಾಗಿಯೇ ಕಳೆಯಬಹುದು.

★ಹಾಗಲ್ಲದೆ ಅವನಲ್ಲಿ ರೋಗನಿರೋಧಕ ವ್ಯವಸ್ಥೆ ದುರ್ಬಲವಾಗಿದ್ದು, ದೀರ್ಘಕಾಲದಿಂದ ಮಂಚದ ಮೇಲೆ ಮಲಗಿರುವದು,ಸರಿಯಾದ ಪೌಷ್ಟಕ ಆಹಾರ ಇಲ್ಲದಿರುವುದು, ವೃದಾಪ್ಯ, ಡಯಾಬಿಟೀಸ್, ಕೆಲವು ಬಗೆಯ ಕ್ಯಾನ್ಸರ್ ನಿರೋಧಕ  ಔಷಧಗಳನ್ನು ಬಳಸುತ್ತಿರುವುದು, ಇಂತಹವೇನಾ ದರೂ ಇದ್ದರೆ ಪ್ರೈಮರಿ Focus ನಿಂದ ಟೀವಿ ಬ್ಯಾಕ್ಟೀರಿಯಾ ಜಯಶಾಲಿಯಾಗಿ ಉಳಿತ ಶರೀರ ಭಾಗಗಳಿಗೆ ವ್ಯಾಪಿಸಿ, ಆ ವ್ಯಕ್ತಿಯನ್ನು ಟೀವಿ ಕ್ಷಯರೋಗಿಯನ್ನಾಗಿ  ಮಾಡಬಹುದು.