ಮನೆ ರಾಜಕೀಯ ಎಚ್ಎಂಟಿ ಕಂಪನಿಯ ಜಮೀನನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯುವ ದುಸ್ಸಾಹಸ ಮಾಡಬಾರದು: ಎಚ್.ಡಿ. ಕುಮಾರಸ್ವಾಮಿ

ಎಚ್ಎಂಟಿ ಕಂಪನಿಯ ಜಮೀನನ್ನು ರಾಜ್ಯ ಸರ್ಕಾರ ವಶಕ್ಕೆ ಪಡೆಯುವ ದುಸ್ಸಾಹಸ ಮಾಡಬಾರದು: ಎಚ್.ಡಿ. ಕುಮಾರಸ್ವಾಮಿ

0

ಬೆಂಗಳೂರು: ಎಚ್ಎಂಟಿ ಕಂಪನಿಯ ಜಮೀನನ್ನು ಅರಣ್ಯ ಒತ್ತುವರಿ ನೆಪದಲ್ಲಿ ರಾಜ್ಯ ಸರ್ಕಾರ ವಶಕ್ಕೆ ಪಡೆಯುವ ದುಸ್ಸಾಹಸ ಮಾಡಬಾರದು ಎಂದು ಕೇಂದ್ರ ಭಾರಿ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

Join Our Whatsapp Group

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಬೆಂಗಳೂರಿನ ವಿವಿಧೆಡೆ ಎಚ್ಎಂಟಿ ಕಂಪನಿ ವಶದಲ್ಲಿರುವ 699 ಎಕರೆ ಜಮೀನು ದಶಕಗಳ ಹಿಂದೆಯೇ ಹಣ ಪಾವತಿಸಿ ಪಡೆದಿದೆ. ಅರಣ್ಯ ಒತ್ತುವರಿ ಮಾಡಿಕೊಂಡಿಲ್ಲ. ಅರಣ್ಯ ಇಲಾಖೆಯೇ ಕಂಪನಿಯ ಜಮೀನು ಒತ್ತುವರಿ ಮಾಡಿದೆ ಎಂದು ಆರೋಪಿಸಿದರು.

ಅರಣ್ಯ ಭೂಮಿ ಹಾಗೂ ಎಚ್ಎಂಟಿ ಕಂಪನಿ ಜಮೀನುಗಳ ಕುರಿತು ಮಾಹಿತಿ ಇಲ್ಲದೆ ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಮೇಲಿನ ಹಗೆತನಕ್ಕೆ ರಾಜ್ಯ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.

ಭದ್ರಾವತಿಯ ವಿಐಎಸ್ಎಲ್ ಪುನಶ್ಚತನಕ್ಕೆ ಪ್ರಧಾನಿ ಜೊತೆ ಚರ್ಚಿಸಲಾಗುವುದು. ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಅಭಿವೃದ್ಧಿ ಪಡಿಸಲು ₹10 ಸಾವಿರ ಕೋಟಿಯ ಅಗತ್ಯವಿದೆ ಎಂದರು. ತುಂಗಭದ್ರಾ ಜಲಾಶಯದಲ್ಲಿ ಗೇಟ್ ಸಮಸ್ಯೆ ಕುರಿತು ತನಿಖೆ ನಡೆಸಲು ತಜ್ಞರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ನೀರು ಪೋಲಾಗಿ ರೈತರಿಗೆ ಆಗುತ್ತಿರುವ ಅನ್ಯಾಯಕ್ಕೆ ಯಾರು ಹೊಣೆ ಎಂಬುದು ನಿರ್ಧಾರವಾಗಬೇಕು ಎಂದರು.