ಮನೆ ಶಿಕ್ಷಣ ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

ನವೋದಯ ವಿದ್ಯಾಲಯ: 6ನೇ ತರಗತಿ ಪ್ರವೇಶ ಪರೀಕ್ಷೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ

0

2025-2026 ನೇ ಸಾಲಿನ 6ನೇ ತರಗತಿ ಪರೀಕ್ಷೆಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

Join Our Whatsapp Group

ಸೆಪ್ಟಂಬರ್ 16 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

ನವೋದಯ ಸಾಮಾನ್ಯ ಲಕ್ಷಣಗಳು

* ಜಿಲ್ಲೆಗೊಂದರಂತೆ ಇರುವ ಸಹ ಶಿಕ್ಷಣ ವಸತಿ ಶಾಲೆ

* ಬಾಲಕ-ಬಾಲಕಿಯರಿಗೆ ಪ್ರತ್ಯೇಕ ವಸತಿ ನಿಲಯಗಳು.

* ಉಚಿತ ಊಟ ವಸತಿಯೊಂದಿಗೆ ಶಿಕ್ಷಣ.

* ಕ್ರೀಡೆ ಮತ್ತು ಎನ್.ಸಿ.ಸಿ/ಎನ್.ಎಸ್.ಎಸ್/ಸೈಟ್ ಮತ್ತು ಗೈಡ್ಸ್ ಗೆ ಉತ್ತೇಜನೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

1. ವಿದ್ಯಾರ್ಥಿಯ ಪೋಟೊ ಮತ್ತು ಸಹಿ

2. ಜಾತಿ ಮತ್ತು ಆದಾಯ ಪ್ರಮಾಣ ಪತ್ರ.

ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಲಾಗುವದು

3. ಆಧಾರ ಕಾರ್ಡ್

4. ಪಾಲಕರ ಸಹಿ.

5. 5 ನೇ ತರಗತಿಯಲ್ಲಿ ಓದುತ್ತಿರುವ ಶಾಲಾ ಮುಖ್ಯಸ್ಥರ ಸಹಿ (ಅರ್ಜಿ ಫಾರ್ಮ್ ನಮ್ಮಲ್ಲಿ ಸಿಗುವುದು)

ಸೂಚನೆ

ಯಾವ ಜಿಲ್ಲೆಯ ವಿದ್ಯಾರ್ಥಿಗಳು ಪ್ರವೇಶ ಬಯಸುತ್ತಾರೋ ಆ ಜಿಲ್ಲೆಯಲ್ಲಿ 2024-25 ಸಾಲಿನಲ್ಲಿ ಸರ್ಕಾರಿ ಅಥವಾ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿ 01-05-2013 ರಿಂದ 31-07-2015 ರ ಒಳಗೆ ಜನಿಸಿರಬೇಕು ಇದು ಎಲ್ಲ ಜಾತಿಯ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ.