ಮನೆ ರಾಷ್ಟ್ರೀಯ ರಾಜ್ಯದ 20 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ

ರಾಜ್ಯದ 20 ಪೊಲೀಸ್‌ ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಪದಕ ಘೋಷಣೆ

0

ಹೊಸದಿಲ್ಲಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರಾಜ್ಯದ ಹಲವು ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಘೋಷಣೆ ಮಾಡಲಾಗಿದೆ.

Join Our Whatsapp Group

ಕೇಂದ್ರ ಸರ್ಕಾರ ಈ ಘೋಷಣೆ ಹೊರಡಿಸಿದ್ದು, ನಾಳೆ ಸ್ವಾತಂತ್ರ್ಯ ದಿನದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಸಮರ್ಪಣೆ ಮಾಡಲಾಗುತ್ತದೆ.

ರಾಜ್ಯದ 20 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿಗಳ ಪದಕ ಒಲಿದಿದೆ. ಇಬ್ಬರು ಅಧಿಕಾರಿಗಳಿಗೆ ರಾಷ್ಟ್ರಪತಿಗಳ ಅತ್ಯುತ್ತಮ ಸೇವಾ ಪದಕ ಘೋಷಣೆಯಾಗಿದೆ. ಐಎಸ್‌ಡಿ, ಎಡಿಜಿಪಿ ಎಂ. ಚಂದ್ರಶೇಖರ್ ಹಾಗೂ ಅಗ್ನಿಶಾಮಕ ದಳದ ಸೀನಿಯರ್ ಕಮಾಂಡರ್ ಬಸವಲಿಂಗಪ್ಪ ಅವರಿಗೆ ಅತ್ಯುತ್ತಮ ಸೇವಾ ಪದಕ ಘೋಷಿಸಲಾಗಿದೆ.

ಇನ್ನುಳಿದ 18 ಮಂದಿ ಅಧಿಕಾರಿ ಸಿಬ್ಬಂದಿಗೆ ಅರ್ಹ ಸೇವಾ ಪದಕಗಳನ್ನು ಕೇಂದ್ರ ಗೃಹ ಇಲಾಖೆ ಘೋಷಣೆ ಮಾಡಿದೆ.

ಅವರ ಹೆಸರುಗಳು ಇಲ್ಲಿವೆ:

ಶ್ರೀನಾಥ್ ಎಂ ಜೋಷಿ, ಎಸ್‌ಪಿ ಲೋಕಾಯುಕ್ತ

ಸಿ.ಕೆ ಬಾಬಾ, ಎಸ್‌ಪಿ ಬೆಂಗಳೂರು ಗ್ರಾಮಾಂತರ ಜಿಲ್ಲೆ

ರಾಮಗೊಂಡ ಬೈರಪ್ಪ, ಎಎಸ್‌ಪಿ ಕರ್ನಾಟಕ

ಗಿರಿ ಕೃಷ್ಣಮೂರ್ತಿ, ಡಿಎಸ್‌ಪಿ

ಪಿ ಮುರಳೀಧರ್, ಡಿಎಸ್‌ಪಿ

ಬಸವೇಶ್ವರ, ಅಸಿಸ್ಟೆಂಟ್ ಡೈರೆಕ್ಟರ್

ಬಸವರಾಜು ಕಮ್ತಾನೆ, ಡಿಎಸ್‌ಪಿ

ರವೀಶ್ ನಾಯಕ್, ಎಸಿಪಿ

ಶರತ್ ದಾಸನಗೌಡ, ಎಸ್‌ಪಿ

ಪ್ರಭಾಕರ್ ಗೋವಿಂದಪ್ಪ, ಎಸಿಪಿ

ಗೋಪಾಲ್ ರೆಡ್ಡಿ, ಡಿಸಿಪಿ

ಬಿ. ವಿಜಯ್ ಕುಮಾರ್, ಹೆಡ್ ಕಾನ್ಸ್‌ಟೇಬಲ್

ಮಂಜುನಾಥ ಶೇಕಪ್ಪ ಕಲ್ಲೆದೇವರ್, ಸಬ್ ಇನ್ಸ್‌ಪೆಕ್ಟರ್

ಹರೀಶ್ ಎಚ್.ಆರ್, ಅಸಿಸ್ಟೆಂಟ್ ಕಮಾಂಡೆಂಟ್

ಎಸ್ ಮಂಜುನಾಥ, ಇನ್ಸ್‌ಪೆಕ್ಟರ್

ಗೌರಮ್ಮ ಜಿ., ಎಎಸ್ಐ