ಮನೆ ಕಾನೂನು ಮತದಾರರಿಗೆ ಆಮಿಷ ಆರೋಪ ಮಾಡಿದ್ದ ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮಾನನಷ್ಟ ಮೊಕದ್ದಮೆ

ಮತದಾರರಿಗೆ ಆಮಿಷ ಆರೋಪ ಮಾಡಿದ್ದ ಶಶಿ ತರೂರ್ ವಿರುದ್ಧ ರಾಜೀವ್ ಚಂದ್ರಶೇಖರ್ ಮಾನನಷ್ಟ ಮೊಕದ್ದಮೆ

0

ಇತ್ತೀಚೆಗಷ್ಟೇ ನಡೆದ ಲೋಕಸಭೆ ಚುನಾವಣೆ ವೇಳೆ ನೀಡಿದ ಹೇಳಿಕೆಯೊಂದಕ್ಕಾಗಿ ತಿರುವನಂತಪುರ  ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಕ್ಷೇತ್ರದ ಪರಾಜಿತ ಅಭ್ಯರ್ಥಿ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

Join Our Whatsapp Group

ಕಳೆದ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ರಾಜೀವ್ ಚಂದ್ರಶೇಖರ್ ಮತದಾರರಿಗೆ ಹಣದ ಆಮಿಷವೊಡ್ಡಿದ್ದರು ಎಂದು ಶಶಿ ತರೂರ್ ಅವರು ಮಲಯಾಳಂ ಸುದ್ದಿವಾಹಿನಿಯೊಂದರಲ್ಲಿ ಆರೋಪಿಸಿದ ಹಿನ್ನೆಲೆಯಲ್ಲಿ ಈ ದಾವೆ ಹೂಡಲಾಗಿದೆ.

ಜುಲೈ 25 ರಂದು ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನಾಮಿಕಾ ಅವರ ಮುಂದೆ ಪ್ರಕರಣವು ವಿಚಾರಣೆಗೆ ಬಂದಿತಾದರೂ ರೌಸ್‌ ಅವೆನ್ಯೂ ನ್ಯಾಯಾಲಯ ಸಂಸದರು ಮತ್ತು ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸುವ ನ್ಯಾಯಾಲಯವಾಗಿರುವುದರಿಂದ, ಈ ಪ್ರಕರಣವನ್ನು ಅಲ್ಲಿ ವಿಚಾರಣೆಗೆ ಒಳಪಡಿಸಲಿಲ್ಲ.

ಬಳಿಕ ಮಂಗಳವಾರ ಬೆಳಿಗ್ಗೆ ದೆಹಲಿ ಹೈಕೋರ್ಟ್‌ಗೆ  ಬಂದ ಈ ಕುರಿತಾದ ವರ್ಗಾವಣೆ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಾಗಲಿಲ್ಲ. ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಅವರು ಆಗಸ್ಟ್ 21ರಂದು ಅರ್ಜಿಯ ವಿಚಾರಣೆ ನಡೆಸಲಿದ್ದಾರೆ.

ಕಳೆದ ಲೋಕಸಭಾ ಚುನಾವಣೆ ವೇಳೆ ತರೂರ್‌ ಮತ್ತು ಚಂದ್ರಶೇಖರ್‌ (ಇಬ್ಬರೂ ಈ ಹಿಂದೆ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದವರು) ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ತರೂರ್‌ ಅವರು ಚಂದ್ರಶೇಖರ್‌ ಅವರನ್ನು 16,000 ಮತಗಳಿಂದ ಸೋಲಿಸಿದ್ದರು.

ಮಲಯಾಳಂ ಸುದ್ದಿವಾಹಿನಿ ‘24 ನ್ಯೂಸ್‌ʼನಲ್ಲಿ ತರೂರ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಚಂದ್ರಶೇಖರ್‌ ಮೊಕದ್ದಮೆ ಹೂಡಿದ್ದಾರೆ.

ಚಂದ್ರಶೇಖರ್ ಅವರು ಮತದಾರರಿಗೆ ಹಣ ನೀಡುವ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದು ಜೊತೆಗೆ ಚುನಾವಣೆಯಲ್ಲಿ ಅಕ್ರಮ ಲಾಭ ಪಡೆಯಲು ಕ್ರೈಸ್ತ ಮತೀಯರಲ್ಲಿ ಸುಳ್ಳು ಹರಡಿದ್ದಾರೆ ಎಂದು ತರೂರ್ ಆರೋಪಿಸಿದ್ದಾರೆ. ಆದರೆ ಈ ಅಂಶಗಳು ಸುಳ್ಳು ಮಾತ್ರವಲ್ಲ, ತಮ್ಮ ಪ್ರತಿಷ್ಠೆಗೆ ಕಳಂಕ ತರುವಂತಹ ಸಂಗತಿಗಳಾಗಿವೆ ಎಂದು ಚಂದ್ರಶೇಖರ್‌ ಅವರು ಈ ಹಿಂದೆ ಕಳುಹಿಸಿದ್ದ ಲೀಗಲ್‌ ನೋಟಿಸ್‌ನಲ್ಲಿ ತಿಳಿಸಲಾಗಿತ್ತು.