ಮನೆ ಆರೋಗ್ಯ ಕ್ಷಯರೋಗ : ಭಾಗ ಮೂರು

ಕ್ಷಯರೋಗ : ಭಾಗ ಮೂರು

0

ಲಿಪ್ ಗ್ರಂಥಿಗಳ ಟೀಬಿ:- ನಮ್ಮ ಶರೀರದಲ್ಲಿ ಅನೇಕ ದುಗಗ್ರಂದಿಗಳು (Lymph glands)ಇರುತ್ತವೆ, ಶರೀರದ ಯಾವುದೇ ಭಾಗ ಇನ್ಫೆಕ್ಷನ್ ಗೆ ಗುರಿಯಾದಾಗ ಸೂಕ್ಷ್ಮಜೀವಿಗಳ  ಮೇಲೆ ದಾಳಿ ಮಾಡಲು, ಈ ಗ್ರಂಥಿಗಳು ರಕ್ಷಕಣಗಳನ್ನು(Defence Cells)ಉತ್ಪಾದಿಸಿ ಯಾವ ಭಾಗಕ್ಕೆ ಕಳಿಸುತ್ತವೆ.

Join Our Whatsapp Group

★ರೋಗ ನಿರೋಧಕ ವ್ಯವಸ್ಥೆಯ ದುರ್ಬಲವಾದಾಗ.ಆ ಭಾಗದಲ್ಲಿ ಟಿವಿ ನೆಲೆಯೂರುತ್ತದೆ. ಆಗ ಲಿಂಫ್ ಗ್ರಂಥಿಗಳು ಊದುತ್ತವೆ.

★ಸಾಧಾರಣವಾಗಿ ಟೀಬಿ ಮೊದಲು ಕತ್ತಿನ ಬಳಿಯ ಗ್ರಂಥಿಗೆ ತಗಲುತ್ತದೆ. ಅನಂತರ ಕಂಕುಳು, ತೊಡೆಸಂದಿಯ ಗ್ರಂಥಿಗಳಿಗೆ ಸೋಂಕಾಗುತ್ತದೆ.

 ಬೆನ್ನು ಮೂಳೆ ಟಿವಿ : ಬೆನ್ನು ಮೂಳೆಗೆ ಟೀಬಿ  ಸೊಂಕಾಗುವುದು ಬಹಳ ಅಪರೂಪ.ಈ ಸ್ಥಿತಿ ಬಂದಾಗ ಬೆನ್ನುಮೂಳೆ ಬಿರುಸು ಕೊಳ್ಳುವುದು ನೋವಾಗುತ್ತಿರುವುದು ಮಾತ್ರವಲ್ಲದೆ ಗೂನುಬೆನ್ನೂ ಆಗುತ್ತದೆ.

★ ಟೀವಿ ಬಂದ ಬೆನ್ನೆಲುಬಿನ ಭಾಗದ ಹತ್ತಿರದಲ್ಲಿ ಕೀವು ಗೆಡ್ಡೆ ಯಂತಹುದು ಉಂಟಾಗುತ್ತದೆ. ಇದನ್ನು ಗೋಲ್ಡ್ ಆಡಿಸೀಸ್ ಎನ್ನುತ್ತಾರೆ.ಮಿಕ್ಕ ಕೀವುಗೆಡ್ಡೆದ್ದೆಗಳಂತೆ ಈ ಕೀವುಗೆಡ್ಡೆಯಿಂದ ನೋವೇನೂ ಇರದು.ಗುಣಪಡಿಸಿಕೊಳ್ಳದೆ ಹಾಗೇ ಬಿಟ್ಟರೆ ಪಾರ್ಶ್ವ ವಾಯು ಬರುತ್ತದೆ.

 ಬೋನ್ ಟೀವಿ: ಮೂಳೆಗಳಿಗೆ, ಕೀಲುಗಳಿಗೆ ಸೋಂಕಾಗುವ ಟೀವಿಯಲ್ಲಿ ಸೊಂಟದ ಬಳಿಯ ಕೀಲು,ಮೊಣಕಾಲು ಕೀಲು,ಹರಡಿನ ಕೀಲು,ಪಾದದ ಮೂಳೆ, ಭುಜದ ಕೀಲು, ಮೊಣಕೈ ಕೀಲು,ಮಣಿಕಟ್ಟು ಕೈಗಳ ಮೂಳೆಗಳಿಗೆ ಸೋಂಕಾಗುವುದು ಮುಖ್ಯವಾದವು. ಕೀಲಿಗೆ ಸುಂಕದಂತೆ ಅಲ್ಲಿಂದ ಮೂಳೆಗೆ ಸೋಂಕಾದೇಯೇ ಸಂಭವೂ ಇದೆ.

★ ಮೂಳೆಗಳಿಗೆ, ಕೀಲುಗಳಿಗೆ ಟಿವಿ ಆದ ವ್ಯಕ್ತಿಗೆ ಕೀಲುಗಳಲ್ಲಿ ನೋವಿನ ಅನುಭವವಾಗುತ್ತದೆ, ಕೀಲುಗಳು ಉಬ್ಬುತ್ತವೆ.ಆಯಾ ಅವಯವಗಳ ಕದಲಿಕೆಗೆ ತೊಂದರೆಯಾಗುತ್ತದೆ. ಅವನ ಕುಂಟಬಹುದು. ಅಂಗವಿಕಲನ್ನೂ ಆಗಬಹುದು

★ಟೀಬಿ ತಗುಲಿದ ಮೂಳೆಗೆ ಹತ್ತಿರವಿರುವ ಸ್ನಾಯುಗಳು ದುರ್ಬಲವಾಗುತ್ತವೆ, ಇಲ್ಲವೇ ಸವೆಯುತ್ತವೆ. ರಾತ್ರಿಯ ವೇಳೆ ಆಯಾ ಭಾಗಗಳಲ್ಲಿ ಬರುವ ನೋವಿಗೆ ಚಿಕ್ಕ ಮಕ್ಕಳಾದರೆ ನಿದ್ರೆಯಿಂದ ಎದ್ದು ಅಳುತ್ತಾರೆ.

 ಕಿಡ್ನಿಗೆ ಟೀವಿ : ಕಿಡ್ಡಿಗೆ ಟೀಬಿ ಬಂದರೆ ಬಹುಬೇಗನೆ ಕಿಡ್ನಿ ಹಾಳಾಗುತ್ತದೆ. ಈ ಟೀಬಿಯಲ್ಲಿ ಪದೇ ಪದೇ ಮೂತ್ರಕ್ಕೆ ಹೋಗಬೇಕಾಗುವುದಲ್ಲದೆ, ಮೂತ್ರ ವಿಸರ್ಜನೆ ಕಷ್ಟಕರವಾಗುತ್ತದೆ. ಮೂತ್ರ ದೊಡನೆ ರಕ್ತವೂ ಹೋಗಬಹುದು. ಅನಂತರ ಬೆನ್ನು ನೋವು ಪ್ರಾರಂಭವಾಗುತ್ತದೆ. ನಂತರ ಇದು ಜನಂದ್ರಿಯಗಳಿಗೆ ಕೂಡಾ ಹರಡುವ ಸಂಭವವಿದೆ.

★ಸ್ತ್ರೀಯರ ಕಿಡ್ನಿಗಳಿಗೆ ಟೀಬಿ ಸೋಂಕಾದರೆ, ಅವರು ಬಂಜೆ ಯಾರಾಗುವರು ಸಾಧ್ಯತೆ ಇದೆ. ನಮ್ಮ ದೇಶದಲ್ಲಿ ಸ್ತ್ರಿಯರು ಬಂಜೆಯಾರಾಗಲು ಹೆಚ್ಚು ಸಂದರ್ಭಗಳಲ್ಲಿ ಕಿಡ್ನಿ ಟೀವಿಯೇ ಕಾರಣವಿನ್ನುತ್ತಾರೆ.

ಕಿಬ್ಬೊಟ್ಟೆಯ ಟುವಿ : ಕಿಬ್ಬೊಟ್ಟೆಯ  ಟೀವಿ ತಗುಲಿದರೆ ನೀರಾಗಿ ಭೇದಿ,ನೋವು, ವಾಂತಿ, ಹಸಿವೆ ಇಂಗಿಹೋಗುವುದು ತೀವ್ರ ಜ್ವರ, ಕಿಬ್ಬೊಟ್ಟೆ  ಉಬ್ಬಿಕೊಳ್ಳುವುದು ಮೊದಲಾದ ಲಕ್ಷಣಗಳಿರುತ್ತವೆ.

ಹೃದಯದ ಟಿವಿ : ವಾಸ್ತವವಾಗಿ ಹೃದಯದ ಸೂತ್ತ ಇರುವ ಚೀಲದಂತಹ ಭಾಗಕ್ಕೆ ಇದನ್ನು (Pericardium)ಎನ್ನುತ್ತಾರೆ ಟೀವಿಯಾಗುವುದನ್ನು ಹೃದಯದಟೀಬಿ ಹೇಳುತ್ತಾರೆ.

★ಹೃದಯದ ಬಳಿಯ ಎದೆಯ ಭಾಗದಲ್ಲಿ ನೋವಿರುತ್ತದೆ ಹೃದಯ ವೇಗವಾಗಿ ಬಡಿದುಕೊಳ್ಳುತ್ತದೆ ಉಚ್ಛ್ವಾಸ ನಿಶ್ವಾಸಗಳು ವೇಗವಾಗುತ್ತದೆ.

ಕಣ್ಣು ಕಿವಿ ಮೂಗು ಗಂಟಲುಗಳ  ಟೀವಿ : ಕಣ್ಣಿಗೆ ಟೀವಿಯಾದರೆ ದೃಷ್ಟಿಯನ್ನು ಕಳೆದುಕೊಳ್ಳುವುದೇ ಅಲ್ಲದೆ, ಇದನ್ನು ಸರಿಪಡಿಸಲು ಅಸಾಧ್ಯ ವಾಗುವಷ್ಟು ವಸ್ತು ಕಣ್ಣು ಪೂರ್ತಿ ಹಾಳಾಗುತ್ತದೆ.

★ಇದೇ ರೀತಿಯಾಗಿ ಶ್ವಾಸನಾಳಕ್ಕೆ ಅನ್ನನಾಳಕ್ಕೆ ಕೂಡ ಟೀವಿ ಸೋಂಕಾಗುವ ಸಾಧ್ಯತೆಯಿದೆ. ಅದೃಷ್ಟ ವಶಾತ್ ಆಯಾ ಶರೀರ ಭಾಗಗಳಲ್ಲಿನ ರಕ್ಷಣಾ ವ್ಯವಸ್ಥೆ ಪ್ರಬಲವಾಗಿರುವುದರಿಂದ ಇಂತಹ ಟೀಬಿ ಬರುವುದು ಬಹಳ ಅಪರೂಪ.

 ಮೆದುಳಿನ ಟೀಬಿ: ಮೆದುಳು ಕೋಶಗಳಿಗೆ ಟೀಬಿ ಸೋಂಕಿದಗ ಆ ಭಾಗದಲ್ಲಿ ಎಂಬ ಊತ ಏರ್ಪಡುತ್ತದೆ. ಮಿದುಳಿನ  ಪೊರೆಯ ಭಾಗಗಳಿಗೆ ಕೂಡ ಟಿವಿ ಸೋಂಕಾದರೆ ಅದು  ಮಿದುಳಿನ ಪೊರೆಯ ಉರಿಯುತ ಗೆ ದಾರಿ ಮಾಡುತ್ತದೆ.ಇದು ಹೆಚ್ಚಾಗಿ ಚಿಕ್ಕ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ.

★ಈ ರೀತಿಯಲ್ಲಿ ನೋಡಿದರೆ ಟಿವಿ ನಮ್ಮ ಶರೀರದ ಯಾವ ಭಾಗಕ್ಕಾದರೂ ಬರಬಹುದೆಂದು ಅರ್ಥವಾಗುತ್ತದೆ ಸಕಾಲದಲ್ಲಿ ರೋಗವನ್ನು ಗುಣಪಡಿಸಿಕೊಳ್ಳದಿದ್ದರೆ ಆನಂತರ ಪರಿಸ್ಥಿತಿ ವಿಷಮಿಸುವ ಅಪಾಯವಿ ಅಪಾಯವಿದೆ ಆಯಾ ಶರೀರ  ಭಾಗಗಳನ್ನು ಕ್ಷೀಣಿಸುವುದೇ ಅಲ್ಲದೆ, ಆ ವ್ಯಕ್ತಿಯ ಒಟ್ಟು ಆರೋಗ್ಯದ ಮೇಲೆ ಕೂಡ ಪ್ರಭಾವ ಬೀರಿ ಅವನನ್ನು ದುರ್ಬಲಗೊಳಿಸುತ್ತದೆ.

★ಈ ರೀತಿಯಾಗಿ ಒಮ್ಮೆ ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಬಲಹೀನಗೊಂಡರೆ ಒಂದರ ಹಿಂದೆ ಒಂದರಂತೆ ಉಳಿದ ರೋಗಗಳು ಅವನ ಶರೀರದ ಮೇಲೆ ದಾಳಿಯನ್ನು ಪ್ರಾರಂಭಿಸುತ್ತವೆ.