ಮನೆ ಯೋಗಾಸನ ಏಕಪಾದ ಸೇತುಬಂಧನ ಸರ್ವಾಂಗಾಸನ ಅಥವಾ ಏಕಪಾದ ಉತ್ತಾನ ಮಯೂರಾಸನ

ಏಕಪಾದ ಸೇತುಬಂಧನ ಸರ್ವಾಂಗಾಸನ ಅಥವಾ ಏಕಪಾದ ಉತ್ತಾನ ಮಯೂರಾಸನ

0

‘ಏಕಪದ’ ಎಂದರೆ ಒಂದು ಅಡಿ ಅಥವಾ ಹೆಜ್ಜೆ, ಈ ಆಸನವು ಈ ಹಿಂದಿನ ಆಸನದ ವ್ಯತ್ಯಸ್ತಂಭಂಗಿ. ಆದರೆ ಇದರಲ್ಲಿ ಒಂದು ಕಾಲನ್ನು ಮೇಲೆತ್ತಿಡಬೇಕು.

Join Our Whatsapp Group

ಅಭ್ಯಾಸ ಕ್ರಮ

1. ಮತ್ತು ‘ಸೇತುಬಂಧನ ಸರ್ವಂಗಾಸನ’ದ ಭಂಗಿಯಲ್ಲಿ ನಿಂತ ಮೇಲೆ, ಉಸಿರನ್ನು ಹೊರಕ್ಕೆ ಬಿಟ್ಟು ಬಲಗಾಲನ್ನು ಮೇಲೆತ್ತಿ, ಲಂಬವಾಗಿ ನಿಲ್ಲಿಸಬೇಕು. ಈಗ ಎರಡು ಕಾಲುಗಳನ್ನೂ ಪೂರಾ ಹಿಗ್ಗಿಸಿ  ಆ ಭಂಗಿಯಲ್ಲಿ ಸುಮಾರು 10 ಸೆಕೆಂಡುಗಳ ಕಾಲ ಇರಬೇಕು.

2. ಉಸಿರನ್ನು ಒಳಕ್ಕೆಳೆದು ಬಲಗಾಲನ್ನು ನೆಲಕ್ಕಿಳಿಸಿ, ಉಸಿರನ್ನು ಹೊರದೂಡಿ, ಎಡಗಾಲನ್ನು ಮೇಲೆತ್ತಿ ಲಂಬ ಸ್ಥಿತಿಗೆ ತಂದು ಬಳಿಕ ಎರಡೂ ಕಾಲುಗಳನ್ನು ಪೂರಾ ಹಿಗ್ಗಿಸಿ  ನೇರವಾಗಿ ಚಾಚಿರಬೇಕು. ಈ ಭಂಗಿಯಲ್ಲಿಯೂ ಅಷ್ಟೇ ಕಾಲ ನೆಲೆಸಬೇಕು. ಆ ಬಳಿಕ, ಉಸಿರನ್ನು ಒಳಕ್ಕೆಳೆದು ಕಾಲನ್ನು ಎಲಕ್ಕಿಳಿಸಬೇಕು.

3. ಆಮೇಲೆ, ಉಸಿರನ್ನು ಮತ್ತೆ ಹೊರಕ್ಕೆಬಿಟ್ಟು ಕಾಲುಗಳನ್ನು ಹಿಂದಕ್ಕೆ ತೂಗಿಟ್ಟು “ಸರ್ವಾಂಗಾಸನಕ್ಕೆ ಬರಬೇಕು. ಆನಂತರ ಕೈಗಳನ್ನು ಬೆನ್ನಿನ ಮೇಲಿಂದ ತೆಗೆದು, ಕಾಲುಗಳನ್ನು ನೆಲಕ್ಕೆ ಜಾರಿಸಿಟ್ಟು ಮಿಶ್ರಮಿಸಿಕೊಳ್ಳಬೇಕು.

 ‘ಸೇತುಬಂಧನ ಸರ್ವಾಂಗಾಸನ’ ಮತ್ತು ‘ಏಕಪಾದ ಸೇತುಬಂಧನ ಸರ್ವಾಂಗಾಸನ’ಗಳ ಪರಿಣಾಮಗಳು

     ಈ ಆಸನಗಳೆರಡೂ ಬೆನ್ನಿಗೆ ಹಿಂಭಾಗದ ಚಲನೆಗಳನ್ನು ಕಲ್ಪಿಸಿ ಸರ್ವಾಂಗಾಸನದ ಇನ್ನಿತರ ವಿವಿಧ ಚಲನೆಗಳಿಂದ ಕತ್ತಿನ ಭಾಗಕ್ಕೆ ಒದಗಿಸಿ ಶ್ರಮ ಮತ್ತು ನೋವುಗಳನ್ನು ಹೋಗಲಾಡಿಸುತ್ತದೆ.

    ಸುಲಭವಾಗಿ  ಬಾಗಿಸಲಾಗುವ ಬೆನ್ನುಮೂಳೆಯು ನರಮಂಡಲದ ಆರೋಗ್ಯಸ್ಥಿತಿಯನ್ನು ಸೂಚಿಸುತ್ತದೆ. ನರಮಂಡಲಗಳು ಆರೋಗ್ಯಸ್ಥಿತಿಯಲ್ಲಿರುವುದೆಂದರೆ   ಮಾನವನ ತನುಮನಗಳೆರಡೂ ಉತ್ತಮವಾದ ಆರೋಗ್ಯ ಸ್ಥಿತಿಯಲ್ಲಿರುತ್ತವೆಂಬುದು ನಿಶ್ಚಯ.