ಮನೆ ಕಾನೂನು ಮಂಡ್ಯದಲ್ಲಿ ಲೋಕಾದಾಳಿ: ಲಕ್ಷ ಲಕ್ಷ ರೂ.ಮೌಲ್ಯದ ಎಕ್ಸ್‌ಪೈರ್ಡ್ ಮೆಡಿಸಿನ್ ಪತ್ತೆ

ಮಂಡ್ಯದಲ್ಲಿ ಲೋಕಾದಾಳಿ: ಲಕ್ಷ ಲಕ್ಷ ರೂ.ಮೌಲ್ಯದ ಎಕ್ಸ್‌ಪೈರ್ಡ್ ಮೆಡಿಸಿನ್ ಪತ್ತೆ

0

ಮಂಡ್ಯ:ಮಂಡ್ಯದಲ್ಲಿ ಲೋಕಾಯುಕ್ತ ದಾಳಿ ನಡೆಸಿದ್ದು,ಲಕ್ಷ ಲಕ್ಷ ರೂ. ಮೌಲ್ಯದ ಎಕ್ಸ್‌ಪೈರ್ಡ್‌ ಮೆಡಿಸಿನ್‌ ಮಂಡ್ಯದ ಮಿಮ್ಸ್‌ನ ಔಷಧಿ ಉಗ್ರಾಣದಲ್ಲಿ ಪತ್ತೆಯಾಗಿದೆ.

Join Our Whatsapp Group


ಕೊರೋನಾ ಭುಗಿಲೆದ್ದಿದ್ದ ಸಮಯದಲ್ಲಿ ಬಹುಬೇಡಿಕೆಯಲ್ಲಿದ್ದ 40 ಲಕ್ಷ ಮೌಲ್ಯದ ಅವಧಿ ಮುಗಿದಿರುವ ರೆಮ್ಡಿಸಿವರ್ ಎನ್ನುವ ಇಂಜೆಕ್ಷನ್‌ನ್ನು ವಶಪಡಿಸಿ ಕೊಳ್ಳಲಾಗಿದೆ.
ಈ ಔಷಧಕ್ಕೆ ಒಂದರಿಂದ ಎರಡು ಲಕ್ಷ ರೂ.ಚಾರ್ಜ್‌ ಮಾಡಲಾಗುತ್ತಿತ್ತು.
ರೆಮ್ಡಿಸಿವರ್ ಮೆಡಿಸನ್ ಮಂಡ್ಯದ ಮಿಮ್ಸ್‌ನ ಔಷಧಿ ಉಗ್ರಾಣದಲ್ಲಿ ಇರುವುದು ಕಂಡುಬಂದಿದೆ.ಮಂಡ್ಯ ಮಿಮ್ಸ್ ಆಸ್ಪತ್ರೆಯಲ್ಲಿ ಅವಧಿಗೆ ಮೀರಿನ ಲಕ್ಷಾಂತರ ರೂಪಾಯಿಯ ಮೆಡಿಸಿನ್ ಇದ್ದು, ಅಧಿಕಾರಿಗಳು ಏಜೆನ್ಸಿಯವರೊಂದಿಗೆ ಮೆಡಿಕಲ್‌ ಮಾಫಿಯಾದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ಲಕ್ಷಾಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎಂದು ಕೇಶವಮೂರ್ತಿ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದರು. ದೂರಿನ ಅನ್ವಯ ಮಿಮ್ಸ್‌ನ ಔಷಧಿ ಉಗ್ರಾಣದ ಮೇಲೆ ಲೋಕಾಯುಕ್ತ ಎಸ್‌ಪಿ ಸುರೇಶ್ ಬಾಬು ನೇತೃತ್ವದಲ್ಲಿ ರೇಡ್ ಮಾಡಲಾಗಿದೆ.
ಈ ರೇಡ್‌ನಲ್ಲಿ ಪ್ರಮುಖವಾಗಿ ಕೊರೊನಾ ಕಾಲದಲ್ಲಿ ಬಹು ಬೇಡಿಕೆ ಇದ್ದ ರೆಮ್ಡಿಸಿವರ್ ಇಂಜೆಕ್ಷನ್ ಎಕ್ಸ್ಪೆರಿಯಾಗಿ ಇರೋದು ಕಂಡು ಬಂದಿದೆ. ಒಂದಲ್ಲಾ ಎರಡಲ್ಲಾ ಬರೋಬ್ಬರಿ 40 ಲಕ್ಷ ಮೌಲ್ಯದ ರೆಮ್ಡಿಸಿವರ್ ಇಂಜೆಕ್ಷನ್ ಅವಧಿ 2022ರಲ್ಲಿಯೇ ಮುಕ್ತಾಯವಾಗಿದೆ. ಕೊರೊನಾ ಸಂದರ್ಭದಲ್ಲಿ ಈ ಇಂಜೆಕ್ಷನ್ ಕೇಳಿದ್ರೆ ಮಿಮ್ಸ್‌ನ ಅಧಿಕಾರಿ ವರ್ಗ ನಮ್ಮ ಬಳಿ ಸ್ಟಾಕ್ ಇಲ್ಲ ಎಂಬ ಮಾತನ್ನು ಹೇಳುತ್ತಿತ್ತು. ಆದರೆ ಇದೀಗ ಅದೇ ರೆಮ್ಡಿಸಿವರ್ ಇಂಜೆಕ್ಷನ್ ಅಪಾರ ಮಟ್ಟದಲ್ಲಿ ಅವಧಿ ಮುಕ್ತಾಯಗೊಂಡಿದೆ.
ಇದೇ ಮೊದಲಲ್ಲ ಈ ಹಿಂದೆ 2016-17 ರಲ್ಲೂ ಕೂಡ ಮಿಮ್ಸ್​​​ನಲ್ಲಿ 5ಲಕ್ಷ ರೂ.ಮೌಲ್ಯದ ಡ್ರಗ್ಸ್ ಶೇಖರಣೆ ಮಾಡಿದ್ದು ಬೆಳಕಿಗೆ ಬಂದಿತ್ತು.ಈ ಸಂಬಂಧ ಕೂಡ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಾಗಿತ್ತು.ಇದೀಗ ಮತ್ತೊಮ್ಮ ಲಕ್ಷಾಂತರ ರೂ.ಮೌಲ್ಯದ ಅವಧಿ ಮುಗಿದ ಔಷಧಗಳು ಪತ್ತೆಯಾಗಿವೆ. ಈ ಬಗ್ಗೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಇಂಚಿಂಚೂ ಮಾಹಿತಿ ಕಲೆ ಹಾಕುತ್ತಿದ್ದಾರೆ.