ಮನೆ ಸ್ಥಳೀಯ ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಮಟ್ಟದಲ್ಲಿ 19 ನೇ ರ‍್ಯಾಂಕ್

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಮಟ್ಟದಲ್ಲಿ 19 ನೇ ರ‍್ಯಾಂಕ್

0

ಮೈಸೂರು:  ಶಿಕ್ಷಣ ಸಚಿವಾಲಯವು, ಎನ್.ಐ.ಆರ್.ಎಫ್.ನ ಸಮೀಕ್ಷೆಯ ಮುಖಾಂತರ ನಡೆಸಿದ ಮೌಲ್ಯಮಾಪನದಲ್ಲಿ ‘ರಾಜ್ಯ ವಿಶ್ವವಿದ್ಯಾನಿಲಯ’ಗಳ ವರ್ಗದಡಿ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಮಟ್ಟದಲ್ಲಿ 19 ನೇ ರ‍್ಯಾಂಕ್ ದೊರೆತಿದೆ.

Join Our Whatsapp Group

 ಮೈಸೂರು ವಿಶ್ವವಿದ್ಯಾನಿಲಯವು ತನ್ನ ಉತ್ತಮ ಸಾಧನೆಯಿಂದಾಗಿ ಪ್ರತಿ ಬಾರಿಯಂತೆ, ಈ ಬಾರಿಯೂ ಕರ್ನಾಟಕದ ಸಾರ್ವಜನಿಕ ವಿಶ್ವವಿದ್ಯಾನಿಲಯಗಳ ಪೈಕಿ ಅಗ್ರಸ್ಥಾನವನ್ನು ಪಡೆದಿದೆ.

 ದೇಶದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಐ.ಐ.ಟಿ.ಗಳು, ಐ.ಐ.ಎಂ.ಗಳು, ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಖಾಸಗಿ ವಿಶ್ವವಿದ್ಯಾನಿಲಯಗಳು ಮುಂತಾದವುಗಳನ್ನೊಳಗೊoಡ ಒಟ್ಟಾರೆ ವಿಶ್ವವಿದ್ಯಾನಿಲಯಗಳ ವರ್ಗದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು 54 ನೇ ರ‍್ಯಾಂಕ್ ಪಡೆದಿದೆ. ಖಾಯಂ ಅಧ್ಯಾಪಕರುಗಳ ಕೊರತೆ ಹಾಗೂ ಇನ್ನಿತರ ಮಿತಿಗಳನ್ನು ಹೊಂದಿದ್ದರೂ ಸಹ ಈ ಸ್ಥಾನವನ್ನು ಪಡೆದಿರುವುದು ಶ್ಲಾಘನೀಯ ಸಂಗತಿಯಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಈ ಸಾಧನೆಗೆ ಕಾರಣಕರ್ತರಾದ ಸಿಂಡಿಕೇಟ್ ಹಾಗೂ ಶೈಕ್ಷಣಿಕ ಮಂಡಳಿಯ ಸದಸ್ಯರು, ಅಧಿಕಾರಿಗಳು, ಅಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಆಡಳಿತಾತ್ಮಕ ಸಿಬ್ಬಂದಿಗಳನ್ನು ಹಾಗೂ ಎನ್.ಐ.ಆರ್.ಎಫ್. ಮಾರ್ಗಸೂಚಿಯನ್ವಯ ಇಡೀ ವಿಶ್ವವಿದ್ಯಾನಿಲಯದ ದತ್ತಾಂಶ ಮತ್ತು ದಾಖಲೆಗಳನ್ನು ನಿಖರವಾಗಿ, ಸಮರ್ಪಕವಾಗಿ ಬಿಂಬಿಸಿದ ವಿಶ್ವವಿದ್ಯಾನಿಲಯದ ಐ.ಕ್ಯು.ಎ.ಸಿ.ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರ ಪರಿಶ್ರಮವನ್ನು ವಿಶೇಷವಾಗಿ ಶ್ಲಾಘಿಸುತ್ತೇನೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.