ಮನೆ ಸ್ಥಳೀಯ ಮೈಸೂರಿನ ಪ್ರಮುಖ ಬೀದಿಗಳಲ್ಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿ:  ಪ್ರಧಾನಿ ಯವರಿಗೆ ರವಾನಿಸಲು ಜಿಲ್ಲಾಧಿಕಾರಿ ಮೂಲಕ ಹಕ್ಕೂತ್ತಾಯ...

ಮೈಸೂರಿನ ಪ್ರಮುಖ ಬೀದಿಗಳಲ್ಲಿ ರೈತರ ಟ್ರ್ಯಾಕ್ಟರ್ ರ್‍ಯಾಲಿ:  ಪ್ರಧಾನಿ ಯವರಿಗೆ ರವಾನಿಸಲು ಜಿಲ್ಲಾಧಿಕಾರಿ ಮೂಲಕ ಹಕ್ಕೂತ್ತಾಯ ಪತ್ರ ಸಲ್ಲಿಕೆ

0

ಮೈಸೂರು: ಸಂಯುಕ್ತ ಕಿಸಾನ್ ಮೂರ್ಛೆ ಕರೆ ನೀಡಿದ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಗನ್ನ ಹೌಸ್ ವೃತ್ತದಿಂದ ಹಲವಾರು ಟ್ಯಾಕ್ಟರ್ ಗಳ ಮೂಲಕ ಮೆರವಣಿಗೆ ಆರಂಭಿಸಲಾಯಿತು.

Join Our Whatsapp Group

 ಬೇಕೇ ಬೇಕು ನ್ಯಾಯ ಬೇಕು. ರೈತ ಹೋರಾಟಕ್ಕೆ ಜಯವಾಗಲಿ .ರೈತರ ಹಕ್ಕು ಈಡೇರಲಿ ಎಂಬ ಘೋಷಣೆ ಕೂಗುತ್ತಾ ಮೆರವಣಿಗೆ ಆರಂಭಿಸಲಾಯಿತು.

ನಗರದ ದೇವರಾಜ ಅರಸು ರಸ್ತೆ ದೇವರಾಜ್ ಅರಸು ರಸ್ತೆ ಹಾಗೂ ಡಬಲ್ ರೋಡ್ ಮೂಲಕ ಆರ್ ಗೆಟ್ ಸರ್ಕಲ್ ಬಳಸಿ ಕಚೇರಿಗೆ ರೈತರು ಟ್ರ್ಯಾಕ್ಟರ್ ರ್ಯಾಲಿ ನಡೆಸಿ ತೆರಳಿದರು.

ಡಿ ಸಿ ಕಚೇರಿ ಒಳ ಹೋಗಲು ಯತ್ನಿಸಿದಾಗ ಪೊಲೀಸರು ಒಪ್ಪಲಿಲ್ಲ ಅಪಾರ ಜಿಲ್ಲಾಧಿಕಾರಿಗಳು ಹೊರಗಿನ ಗೇಟ್ ಹತ್ತಿರ ಬಂದಾಗ ರೈತರು ಒಪ್ಪಲಿಲ್ಲ ಡಿಸಿ ಕಚೇರಿ ಒಳಗೆ ಮನವಿ ಪತ್ರ ಸಲ್ಲಿಸುತ್ತೇವೆ ಎಂದು ಹಠ ಹಿಡಿದಾಗ ನಂತರ ಪೊಲೀಸರು ಟ್ರ್ಯಾಕ್ಟರ್ ಗಳನ್ನು ಹೊರಗಿ ನಿಲ್ಲಿಸಿ ರೈತರನ್ನು ಪೂರ್ಟೀಕೂ ಬಳಿ ಕರೆದುಕೊಂಡು ಹೋದರು. ಅಲ್ಲಿ ಅಪರ ಜಿಲ್ಲಾಧಿಕಾರಿ ಡಾ ಶಿವರಾಜ್ ರವರಿಗೆ ಹಕ್ಕುತ್ತಾಯ ಪತ್ರ ಸಲ್ಲಿಸಿದರು. ಈ ಪತ್ರವನ್ನು ಪ್ರಧಾನಮಂತ್ರಿಗೆ ರವಾನಿಸುವಂತೆ ಕೊರಲಾಯಿತು.

ಚಳುವಳಿ ಉದ್ದೇಶಿಸಿ ಮಾತನಾಡಿದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ್, ಸ್ವಾತಂತ್ರ್ಯ ಬಂದು 78 ವರ್ಷವಾದರೂ ರೈತರಿಗೆ ಸ್ವಾತಂತ್ರ್ಯದ ನೆರವು ಸಿಕ್ಕಿಲ್ಲ. ರೈತರ ಶ್ರಮಕ್ಕೆ ತಕ್ಕ ಬೆಲೆ ಸಿಗುತ್ತಿಲ್ಲ. ಅಧಿಕಾರಕ್ಕೆ ಬಂದ ಎಲ್ಲಾ ಪಕ್ಷಗಳ ಅಧಿಕಾರಸ್ಥರು ರೈತರ ಓಟಿಗಾಗಿ ಸುಳ್ಳು ಭರವಸೆಗಳನ್ನು ನೀಡಿ ಮೋಸಗೊಳಿಸಿದ್ದಾರೆ ಎಂದು ಹರಿಹಾಯ್ದರು.

ಸ್ವಾತಂತ್ರ್ಯ ದಿನ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ ಅಧಿಕಾರದಲ್ಲಿ ನಮ್ಮನ್ನು ಮರೆತಿರುವ ಸರ್ಕಾರದ ಗಮನ ಸೆಳೆಯಲು ಇಂದು ಟ್ಯಾಕ್ಟರ್ ರಾಲಿ ನಡೆಸುತ್ತಿದ್ದೇವೆ. ಸ್ವತಂತ್ರ ಬಂದಾಗ 60 ಲಕ್ಷ ಮಿಲಿಯನ್ ಟನ್ ಆಹಾರ ಉತ್ಪಾದನೆಯಾಗುತ್ತಿತ್ತು ಆದರೆ ಇಂದು ರೈತರ ಶ್ರಮದಿಂದ ೩೬೫ ಲಕ್ಷ ಮಿಲಿಯನ್ ಟೆನ್ ಆಹಾರ ಉತ್ಪಾದನೆ ಮಾಡುತ್ತಿದ್ದೇವೆ. ಆದರೆ ರೈತರಿಗೆ ನ್ಯಾಯ ಸಿಗುತ್ತಿಲ್ಲ ರೈತರು ಆತ್ಮಹತ್ಯೆ ಇಳಿದಿದ್ದಾರೆ ಈ ದೇಶದ ದುರ್ದೈವ. ರೈತರು ಜಾಗೃತರಾಗಿ ಪಕ್ಷತೀತವಾಗಿ ಹೋರಾಟ ಮಾಡಲು ಮುಂದೆ ಬರಬೇಕು ಆಗ ಸರ್ಕಾರಗಳು ರೈತರ ಪರ ನಿರ್ಧಾರ ಕೈಗೊಳ್ಳುತ್ತವೆ ಎಂದರು.

ಹಕ್ಕೊತ್ತಾಯಗಳು

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ  ಖಾತ್ರಿ ಕಾನೂನು ಜಾರಿಯಾಗಬೇಕು, ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಮಾಡಬೇಕು, ಬೆಳೆವಿಮೆ ನೀತಿ ಬದಲಾಯಿಸಿ ಪ್ರತಿ ರೈತನ ಹೊಲದ ಬೆಳೆ ವಿಮೆ ಜಾರಿ ತರುವಂತಾಗಬೇಕು. ಬರಗಾಲ ಅತಿವೃಷ್ಟಿ  ಮಳೆ ಹಾನಿ ಪ್ರವಾಹ ಹಾನಿ ಪ್ರಕೃತಿ ವಿಕೋಪದ ಹಾನಿ ಬೆಳೆ ನಷ್ಟ ಪರಿಹಾರದ ಎನ್ ಡಿ ಆರ್ ಎಫ್ ಮಾನದಂಡ ಬದಲಾಯಿಸಬೇಕು. 60 ವರ್ಷ ಕೃಷಿ ಸೇವೆ ಸಲ್ಲಿಸಿದ  ರೈತರಿಗೆ ಪಿಂಚಣಿ ಯೋಜನೆ ಜಾರಿಗೆ ತರಲೇಬೇಕು.   ನಕಲಿ ಬಿತ್ತನೆ ಬೀಜ,ನಕಲಿ ಗೊಬ್ಬರ, ನಕಲಿ ಕೀಟ ಕೀಟನಾಶಕ, ಮಾರಾಟಕ್ಕೆ ತಡೆಹಾಕಲು ಕಠಿಣ  ಕಾನೂನು ಜಾರಿಗೆ ತರಬೇಕು. ರಸಗೊಬ್ಬರ, ಕೀಟನಾಶಕ, ಟ್ರ್ಯಾಕ್ಟರ್, ಕೃಷಿ ಉಪಕರಣಗಳ ಮೇಲಿನ ಜಿಎಸ್​ಟಿ ತೆರಿಗೆಯನ್ನು ರದ್ದುಮಾಡಬೇಕು. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಬೇಕು.  ಕೃಷಿ ಸಮ್ಮಾನ್ ಯೋಜನೆ  ಮರು ಜಾರಿಗೆ ತರಬೇಕು. ಬಗರು ಹುಕುಂ ಸಾಗುವಳಿ ಮಾಡಿದ ಫಲಾನುಭವಿ ರೈತರಿಗೆ ಭೂಸ್ವಾಧೀನ ಮಂಜೂರು ಪತ್ರ ಯಾವುದೇ ಷರತ್ತು ಇಲ್ಲದೆ ಕೊಡಿಸಬೇಕು. ಎಲ್ಲಾ ಕೃಷಿ ಕಾರ್ಮಿಕರಿಗೆ ಎಲ್ಲಾ ಸರ್ಕಾರಿ, ಖಾಸಗಿ, ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ವಿಮೆ ಸೌಲಭ್ಯ ನೀಡುವಂತ ಯೋಜನೆ ಜಾರಿಗೆ ತರಬೇಕು.  ಕಬ್ಬಿನ ಎಫ್‌ಆರ್‌ಪಿ ದರವನ್ನು ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡಬೇಕು. ಹಾಗೂ ಕಬ್ಬನ್ನು ಬೆಳೆ ವಿಮೆ ವ್ಯಾಪ್ತಿಗೆ ತರಬೇಕು. ಟ್ರಾಕ್ಟರ್  ಕೃಷಿ ಬಳಕೆಗೆ ಡೀಸೆಲ್ ಸಹಾಯಧನ ನೀಡಬೇಕು.

ಇಂದಿನ ಪ್ರತಿಭಟನೆಯಲ್ಲಿ ಹತ್ತಳ್ಳಿ ದೇವರಾಜ್. ಬರಡನಪುರ ನಾಗರಾಜ್. ಪಿ ಸೋಮಶೇಖರ್. ಕಿರಗಸೂರ್ ಶಂಕರ. ಕಮಲಮ್ಮ. ದೇವನೂರು ವಿಜಯೇಂದ್ರ, ಅಂಬಳೆ ಮಂಜುನಾಥ್. ಕುರುಬೂರು ಸಿದ್ದೇಶ್. ಪ್ರದೀಪ್.  ಬಸವಣ್ಣ ವರಕೋಡು ನಾಗೇಶ್, ಚುಂಚುರಾಯನ ಹುಂಡಿ ನಂಜುಂಡಸ್ವಾಮಿ, ಸೋಮಶೇಖರ್, ಕಿರಗಸೂರು ಪ್ರಸಾದ್ ನಾಯಕ್, ಸಿದ್ದರಾಮ, ಮಾರ್ಬಳ್ಳಿ ಬಸವರಾಜು, ಕೆಲ್ಲಹಳ್ಳಿ ಸೀನಪ್ಪ, ಸಾಕಮ್ಮ, ದೊಡ್ಡ ಕಾಟೂರು ಮಹದೇವಸ್ವಾಮಿ, ನಾಗೇಶ್, ಶ್ರೀಕಂಠ, ಪರಶಿವಮೂರ್ತಿ, ನಿಂಗರಾಜು, ಸಾತಗಳ್ಳಿ ಬಸವರಾಜು, ಬನ್ನೂರು ಸೂರಿ, ಕೊಪ್ಪಲು ಕುಮಾರ್, ವಾಜಮಂಗಲ ಮಹದೇವು. ಮಾಲಿಂಗ ನಾಯಕ, ಆದಿಬೆಟ್ಟಳ್ಳಿ ನಂಜುಂಡಸ್ವಾಮಿ, ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.