ಮನೆ ಮಾನಸಿಕ ಆರೋಗ್ಯ ಆತಂಕ ಚಿತ್ತ ಚಂಚಲತೆಯ ಲಕ್ಷಣಗಳು

ಆತಂಕ ಚಿತ್ತ ಚಂಚಲತೆಯ ಲಕ್ಷಣಗಳು

0

ಆತಂಕ ಮನೋಬೆನ್ನೆಯಿಂದ ನರಳುವ ವ್ಯಕ್ತಿ ಹಲವು ಬಗೆಯ ತೊಂದರೆಗಳಿಂದ ವೈದ್ಯರನ್ನು ಕಾಣುತ್ತಾನೆ. ಸುಸ್ತು, ನಿಶಕ್ತಿ,ಯಾವ ಕೆಲಸ ಮಾಡಲೂ ಆಗುವುದಿಲ್ಲ. ಅಸ್ಪಷ್ಟವಾದ ಹೆದರಿಕೆ,ಹಸಿವಿಲ್ಲ, ಅಜೀರ್ಣ, ವಾಕರಿಕೆ, ವಾಂತಿ, ತಲೆ ಸುತ್ತು, ಹೊಟ್ಟೆಯಲ್ಲಿ ಏನೋ ತಳಮಳ,ಎದೆಯಲ್ಲಿ ಒತ್ತಿದಂತಾಗುವುದು.ಎದೆ, ನೋವು, ಮೈಕೈ ನೋವು, ಚಳುಕು, ತಲೆಬಾರ,ಏಕಾಗ್ರತೆ ಇಲ್ಲದ ಚಂಚಲ ಮನಸ್ಸು, ಮರವು,ಒಂದು ನಿರ್ಧಾರಕ್ಕೆ ಬರದಿರಲು ಆಗದಿರುವುದು,ಸಂಭೋಗದಲ್ಲಿ ಅತೃಪ್ತಿ ಅಥವಾ ವಿಫಲತೆ ಮುಂತಾದ ಲೈಂಗಿಕ ದುರ್ಬಲತೆ,ನಿದ್ರೆ ಬಾರದಿರುವುದು ಇತ್ಯಾದಿ. ಪರೀಕ್ಷೆ ಮಾಡಿದರೆ ವೈದ್ಯರಿಗೆ ಆತನ ಶರೀರದಲ್ಲಿ ಯಾವ ನ್ಯೂಯತೆಯೂ ಕಾಣದು. ಮಲ, ಮೂತ್ರ ಪರೀಕ್ಷೆ ಎಕ್ಸೀರೆ ಚಿತ್ರ

Join Our Whatsapp Group

ಕೂಡ ಯಾವ ನ್ಯೂನ್ಯತೆಯನ್ನು ತೋರಿಸುವ. ವೈದ್ಯರಿಗೆ ಆತನ ಚಿತ್ತ ಚಂಚಲತೆಯ ಬಗ್ಗೆ ವಿವರಗಳು ಗೊತ್ತಿಲ್ಲದಿದ್ದರೆ,ಅವರು,“ಏನಪ್ಪ ಎಲ್ಲಾ ಸರಿಯಾಗಿದೆಯಲ್ಲಾ. ನಿನಗೆ ಯಾವ ಖಾಯಿಲೆಯೂ. ಇದ್ದಂತೆ  ಕಾಣುವುದಿಲ್ಲವಲ್ಲ” ಎಂದು ಉದ್ಘಿಸುತ್ತಾರೆ ಗೊಂದಲಕ್ಕೀಡಾದ ರೋಗಿ, ”ಏನು ಡಾಕ್ಟ್ರುರೇ ನಾನು ಈ ತೊಂದರೆಗಳಿಂದ ಬಾಧೆ ಪಡುತ್ತಿರುವುದು ಸುಳ್ಳೇ? ” ಎಂದು ಪ್ರಶ್ನಿಸುತ್ತಾನೆ.

ಆಗ ವೈದ್ಯರು “ಖಾಯಿಲೆ ಏನು ಇಲ್ಲ.ನರಗಳ ‘ವೀಕ್ನೆಸ್’ ಇರಬೇಕು, ಒಂದು ಟಾನಿಕ್, ಇಂಜೆಕ್ಷನ್ (ಅಥವಾ ಕ್ಯಾಪ್ಸೂಲ್, ಔಷಧಿ)ಬರೆದು ಕೊಡುತ್ತೇನೆ ತೆಗೆದುಕೋ ಎಲ್ಲ ಸರಿ ಹೋಗುತ್ತದೆ” ಎಂದು  ಅವನನ್ನು ಸಾಗಾಾಕುತ್ತಾರೆ.ರೋಗಿ ಅದನ್ನು ಒಪ್ಪಿ ಸೇವಿಸುತ್ತಾನೆ. ಕೆಲವು ಸಾರಿ ಇದು ಕೆಲಸ ಮಾಡುತ್ತದೆ.ಆ ವೈದ್ಯರಲ್ಲಿ ಆತನಿಗೆ ಸಾಕಷ್ಟು ನಂಬಿಕೆ ಇದ್ದರೆ,ಅವರ ಈ ಭರವಸೆಯಿಂದ ಆತಂಕ ಸ್ವಲ್ಪ ಕಡಿಮೆ ಆಗಿ ಸ್ವಲ್ಪ ಉತ್ತಮ ಎನು ವಂತಾಗುತ್ತದೆ. ಸ್ವಲ್ಪ ದಿವಸಗಳಲ್ಲೆ ಆತಂಕ ಮೊದಲ ಸ್ಥಿತಿಗೇ ಬರುತ್ತದೆ.ಅನೇಕ ಸಾರಿ ಈ ಭರವಸೆ ಕೆಲಸ ಮಾಡುವುದಿಲ್ಲ.ವಿಶೇಷ ತಜ್ಞರಿಗೆ ತೋರಿಸಿಕೊಂಡು ಬಾ ಎಂದು ವೈದ್ಯರೇ ಅವನನ್ನು ಕಳುಹಿಸುತ್ತಾರೆ.ಅಥವಾ ಆತನೇ ಬೇರೆ ವೈದ್ಯರ ಬಳಿಗೆ ಹೋಗುತ್ತಾನೆ.ನಮ್ಮ ದೇಶದಲ್ಲಿರುವ ವೈದ್ಯ ಪದ್ದತಿಗಳಿಗೆ ಲೆಕ್ಕವಿಲ್ಲ. ಆಯುರ್ವೇದ, ಅಲೋಪತಿ, ಯುನಾನಿ, ಸಿದ್ದ, ಹೋಮಿಯೋಪತಿ, ನಾಟಿ ಇತ್ಯಾದಿ.

ಈ ವ್ಯಕ್ತಿಗಳು ವೈದ್ಯರಿಂದ ವೈದ್ಯರಿಗೆ,ಒಂದು ಪದ್ಧತಿಯನ್ನು ಇನ್ನೊಂದು ಪದ್ದತಿಗೆ ಬದಲಾಯಿಸುತ್ತಾ ಸಾಕಷ್ಟು ಹಣ ಖರ್ಚು ಮಾಡಿಕೊಂಡು.ಗುಣ ಕಾಣದೆ ಅಲೆಯುತ್ತಾರೆ.ತಮಗೆ ಬಂದಿರುವ ಖಾಯಿಲೆಯ ಜಾಡು ಯಾರಿಗೂ ತಿಳಿಯಲಿಲ್ಲವಲ್ಲ ಎಂದು ನಿರಾಸೆಯಾಗುತ್ತಾರೆ.

ಕೆಲವರು ಆತಂಕ ಕಳೆಯಲು ಒಂದಾದ ಮೇಲೋಂದರಂತೆ ಬಿಡಿ,ಸಿಗರೇಟು, ಸೇದುವುದು ಮದ್ಯಪಾನ ಅಥವಾ ಗಾಂಜಾ ಮುಂತಾದ ಮಾದಕ ಪದಾರ್ಥಗಳನ್ನು ಸೇವಿಸಲು ಪ್ರಾರಂಭಿಸುತ್ತಾರೆ.ಇವುಗಳಿಂದ ಪ್ರಾರಂಭದಲ್ಲಿ ಆತಂಕ ಸ್ವಲ್ಪ ಕಡಿಮೆ ಯಾದಂತಾಗಿ,ನಂತರ ಅವರು ಅವುಗಳ ದಾಸರಾಗುತ್ತಾರೆ. ದೈಹಿಕ ಹಾಗೂ ಮಾನಸಿಕ ಕಾಯಿಲೆಗೆ ತುತ್ತಾಗುತ್ತಾರೆ.