ಮನೆ ಜ್ಯೋತಿಷ್ಯ ತತ್ವಗಳು ಮತ್ತು ಆರೋಗ್ಯ

ತತ್ವಗಳು ಮತ್ತು ಆರೋಗ್ಯ

0

ಭೂತತ್ವ ರಾಶಿಗಳು ಪೀಡಿತರಾದರೆ — ಆ ವ್ಯಕ್ತಿಯ ಮೂಳೆ,ಚರ್ಮ, ಮಾಂಸ, ಕೂದಲುಗಳ ಮೇಲೆ ಪರಿಣಾಮ ಬೀರಿ, ಆ ಅಂಗಕ್ಕೆ ತೊಂದರೆ ಕೊಡುತ್ತದೆ.
ಅಗ್ನಿತತ್ವ ರಾಶಿಗಳು ಪೀಡಿತವಾದರೆ — ಹಸಿವು ದಾಹದ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೆ ರಾತ್ರಿ ನಿದ್ದೆ ಬರುವುದಿಲ್ಲ ತಿಂದ ಆಹಾರ ಪಚನವಾಗುವುದಿಲ್ಲ ಎಂದು ದಾತು ರಕ್ತ ಹಂಸಗಳ ಮೇಲೆ ವ್ಯಾಧಿ ಆರಂಭವಾಗುತ್ತದೆ.
ವಾಯುತತ್ವರಾಶಿಗಳುಪೀಡಿತರಾದರೆ — ದೇಹದಲ್ಲಿ ಅಂಗಾಂಗಗಳು ಅವಯವಗಳು ಕೆಲಸ ಮಾಡಬೇಕಾದರೆ ಈ ತತ್ವ ಚೆನ್ನಾಗಿರಬೇಕು. ಈ ತತ್ವಕ್ಕೆ ತೊಂದರೆಯಾದರೆ ಆ ಭಾಗದ ಅಂಗಗಳು ಕೆಲಸ ಮಾಡುವುದಿಲ್ಲ ಈ ಭಾಗದಲ್ಲಿ ಸ್ನೋಯುಸೆಳೆತ, ಪಾರ್ಶ್ವ ವಾಯು, ವಾತದೋಷ, ಮೂಳೆ ಸಂಬಂಧೀ ವ್ಯಾಧಿಗಳು ಬರುವ ಸಾಧ್ಯತೆ ಇದೆ.
ಜಲತತ್ವ ರಾಶಿಗಳು ಪೀಡಿತವಾದರೆ
ರಕ್ತ, ಲಾಲಾರಸ, ಬೆವರು, ಮೂತ್ರ ಇತರ ಎಲ್ಲಾ ರೀತಿಯ ಜಲಗಳ ಉತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ. ಆ ಭಾಗದ ಅಂಗದಲ್ಲಿ ಉತ್ಪತ್ತಿಯಾಗುವ ಜಲದ ಮೇಲೆ ಪರಿಣಾಮ ಬೀರಿ,ಅದರಂತೆ ವ್ಯಾಧಿಗಳು ಬರುತ್ತವೆ.
ಆಕಾಶ ತತ್ವ ರಾಶಿಗಳು ಪೀಡಿತವಾದರೆ
ಎರಡು ರಾಶಿಗಳ ಮಧ್ಯ ಭಾಗವನ್ನು ಆಕಾಶತತ್ವ ಎನ್ನುತ್ತೇವೆ. ( ಅಂದರೆ ಒಂದು ರಾಶಿಯ ಕೋನೆಯಿಂದ ಮತ್ತೊಂದು ರಾಶಿಯ ಆರಂಭ ಕೆಲವು ಡಿಗ್ರಿಗಳು) ಈ ಭಾಗದಲ್ಲಿ ಪಾಪಗ್ರಹಗಳು ಪೀಡಿತರಾಗಿ ಸ್ಥಿತರಾದರೆ ಅಥವಾ ಈ ಭಾಗಕ್ಕೆ ದೃಷ್ಟಿ ಬಿದ್ದರೆ ಅವರಲ್ಲಿ ದೈಹಿಕವಾಗಿ ಮಾನಸಿಕವಾಗಿ ಕೋಪ ತಾಪಗಳು ಬರುತ್ತವೆ. ರಕ್ತದೊತ್ತಡ, ಭಯ,ಭೀತಿ ಇರುತ್ತದೆ. ಆದರೆ ವ್ಯಾಧಿಗಳು ಮೇಲೆ ಕಾಣುವುದಿಲ್ಲ.
ಪಾಪ ಗ್ರಹಗಳು
ಸೂರ್ಯ, ಶನಿ,ಕುಜ,ರಾಹು, ಕೇತುಗಳು, ಬಲಹೀನ ಚಂದ್ರ, ಅಸ್ತ ಗ್ರಹಗಳು.22ನೇ ದ್ರೇಕ್ಕಾಣಾಧಿಪತಿ, 64 ನೇ ನವಾಂಶಾಧಿಪತಿ ಇನ್ನೂ ಅಧಿಕ ಪಾಪಿಗಳಾಗುತ್ತಾರೆ. ಪಾಪ ಗ್ರಹಗಳು ಯೋಗ ಕಾರಕರಾದರೆ ಒ(1,5,9,ನೇ ಭಾವಾಧಿಪತಿಗಳಾದರ) ಶುಭ ಫಲವನ್ನೇ ನೀಡುತ್ತಾರೆ.ಆದರೆ ವಕ್ರಿ ಅಥವಾ ಅಸ್ತವಾಗಿರಬಾರದು.
ಶುಭ ಗ್ರಹಗಳು ಗುರು ಶುಕ್ರ ಬುಧ ಮತ್ತು ಬಾಲಾಡ್ಯ ಚಂದ್ರ ಈ ಶುಭ ಗ್ರಹಗಳು ಕೆಂದ್ರಾಧಿಪತಿತ್ವ (1,4,7,10,ನೇಬಾವಾದಿಪತಿಯಾಗಿರಬಾರದು.) ಒಂದಿದ್ದರೆ ಬಾಧಾಕಾ ದಿಪತಿಯಾಗಿದ್ದರೆ, ಸೂರ್ಯ ನೋಡನೇ ಅರ್ಥವಾಗಿದ್ದರೆ ಅಶುಭ. 22ನೇದ್ರೇಕ್ಕಾಣಾಧಿಪತಿ 64ನವಾಂಶಾಧಿಪತಿಯಾದರೂ ಅಶುಭ .