ಮನೆ ಶಿಕ್ಷಣ ಆ.21ರಂದು ನೃಪತುಂಗ ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವ

ಆ.21ರಂದು ನೃಪತುಂಗ ವಿಶ್ವವಿದ್ಯಾಲಯ ಪ್ರಥಮ ಘಟಿಕೋತ್ಸವ

792 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ : ಕುಲಪತಿ ಶ್ರೀನಿವಾಸ್ ಎಸ್. ಬಳ್ಳಿ

0

ಬೆಂಗಳೂರು: 2020ರಲ್ಲಿ ವಿಶ್ವವಿದ್ಯಾಲಯವಾಗಿ ಅಸ್ತಿತ್ವಕ್ಕೆ ಬಂದ ಬೆಂಗಳೂರು ನೃಪತುಂಗ ವಿಶ್ವವಿದ್ಯಾಲಯವು  ಇದೀಗ ತನ್ನ ಪ್ರಥಮ ಘಟಿಕೋತ್ಸವವನ್ನು ಆಗಸ್ಟ್ 21ರ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಅರಮನೆ ರಸ್ತೆಯ ಜ್ಞಾನಜ್ಯೋತಿ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿಗಳಾದ ಶ್ರೀನಿವಾಸ ಬಳ್ಳಿ ಅವರು ತಿಳಿಸಿದರು. 

Join Our Whatsapp Group

ಇಂದು ನೃಪತುಂಗ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕುಲಪತಿಗಳು, ಘಟಿಕೋತ್ಸವದ ದಿನದಂದು ಸುಮಾರು 792 ವಿದ್ಯಾರ್ಧಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. 16 ಟಾರ‍್ಸ್ ವಿದ್ಯಾರ್ಥಿಗಳಿಗೆ ಬಂಗಾರದ ಪದಕ ನೀಡಲಾಗುವುದು. ಹಾಗೂ ಬಾಹ್ಯಾಕಾಶ ವಿಜ್ಞಾನ ಮತ್ತು ಚಂದ್ರಯಾನದಲ್ಲಿ ಅನುಪಮ ಕೊಡುಗೆಗಳನ್ನು ನೀಡಿರುವ ಇಸ್ರೋ ವಿಜ್ಞಾನಿ ಶ್ರೀಮತಿ ನಂದಿನಿ ಹರಿನಾಥ, ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಡಾ. ರಾಮಸ್ವಾಮಿ ಬಾಲಸುಬ್ರಮಣಿಯನ್ ಮತ್ತು ಇನ್ಫೋಸಿಸ್ ಸಪ್ತ ಸಂಸ್ಥಾಪಕರಲ್ಲಿ ಒಬ್ಬರಾದ ದಿನೇಶ ಕೆ. ಅವರುಗಳಿಗೆ ತಮ್ಮದೇ ಆದ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಗಳನ್ನು ನೀಡಲಾಗುವುದು ಎಂದು ತಿಳಿಸಿದರು.

2023-24ನೇ ಸಾಲಿನ ಬಿ.ಎಸ್ಸಿ ಸ್ನಾತಕ ಪದವಿ ಪಡೆದ ನೃಪತುಂಗ ವಿಶ್ವವಿದ್ಯಾಲಯದ ಹರ್ಷಿತ ಬಿ.ಕೆ, ಲೋಕೇಶ್ವರಿ ಆರ್, 2020-22ನೇ ಸಾಲಿನ ಎಂಎಸ್ಸಿ ಸೂಕ್ಷ್ಮ ಜೀವಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದ ಸೌಮ್ಯ ಮೂರ್ತಿ, ಸಸ್ಯಶಾಸ್ತ್ರದಲ್ಲಿ ಕೃತಿಕ ಓಂಪ್ರಕಾಶ್, ಭೌತಶಾಸ್ತçದಲ್ಲಿ ಕಾವ್ಯ ಎಸ್, ಜೈವಿಕ ತಂತ್ರಜ್ಞಾನದಲ್ಲಿ ದರ್ಶನ್ ಎಲ್, ಗಣಿತ ಶಾಸ್ತçದಲ್ಲಿ ಮೇಘನ ಸಿ, ಪ್ರಾಣಿಶಾಸ್ತçದಲ್ಲಿ ಶ್ರೀನಿಧಿ ಎಂ. ಭಟ್ ಅಲೇಕ್, ರಸಾಯನ ಶಾಸ್ತ್ರದಲ್ಲಿ ಚಂದನ ಎನ್, 2021-23ನೇ ಸಾಲಿನ ಎಂಎಸ್ಸಿ ಸೂಕ್ಷö್ಮ ಜೀವಶಾಸ್ತ್ರದ ಸ್ನಾತಕೋತ್ತರ ಪದವಿ ಪಡೆದ ಆಸಿಯಾ ರೆಹಮಾನ್, ಸಸ್ಯಶಾಸ್ತ್ರದಲ್ಲಿ ಬೆರ್ದಿನಾಪೈರೇಸ್, ಭೌತಶಾಸ್ತ್ರದಲ್ಲಿ ರಾಬರ್ಟ್ಸನ್. ಬಿ, ಜೈವಿಕ ತಂತ್ರಜ್ಞಾನದಲ್ಲಿ ವನಿತಾ ಟಿ, ಗಣಿತಶಾಸ್ತ್ರದಲ್ಲಿ ಹೇಮ ಎಂ, ಪ್ರಾಣಿಶಾಸ್ತ್ರದಲ್ಲಿ ಇಂಚರ ನಾರಾಯಣ ಹಾಗೂ ರಸಾಯನಶಾಸ್ತ್ರದಲ್ಲಿ ಸೃಷ್ಟಿ ಎಂ.ಎಸ್ ಇವರುಗಳಿಗೆ ಬಂಗಾರದ ಪದಕ ಪ್ರದಾನ ಮಾಡಲಾಗುವುದು.

ಘಟಿಕೋತ್ಸವದಲ್ಲಿ 2020-22ರ ಬ್ಯಾಚಿನ 169 ಮತ್ತು 2021-23 ಬ್ಯಾಚಿನ 169 ಹೀಗೆ ಒಟ್ಟು 338 ಸ್ನಾತಕೋತರ ಪದವೀಧರರಿಗೆ ಮತ್ತು 2020-23ರ 454 ಸ್ನಾತಕ ಪದವೀಧರರಿಗೆ ಮೊದಲ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಲಾಗುವುದು. ಇದು ಬಿಎಸ್ಸಿ, ಬಿಸಿಎ ಮತ್ತು ಎಂಎಸ್ಸಿ ವಿಷಯಗಳ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿ ಶಾಸ್ತ್ರ, ಸೂಕ್ಷ್ಮ ಜೀವಶಾಸ್ತ್ರ,  ಮತ್ತು ಜೈವಿಕ ತಂತ್ರಜ್ಞಾನಗಳ ಪದವೀಧರರನ್ನು ಒಳಗೊಂಡಿದೆ

ಪದವೀಧರರನ್ನು ಈಗಾಗಲೇ ನೋಂದಾಯಿಸಿಕೊಳ್ಳಲಾಗಿದ್ದು ನೋಂದಾಯಿತ ಪದವೀಧರರು, ಆಹ್ವಾನಿತರಿಗೆ  ಮಾತ್ರ ಪ್ರವೇಶದ ಅವಕಾಶವಿದ್ದು, ಕಾರ್ಯಕ್ರಮದ ಮೊದಲ ಘಟಿಕೋತ್ಸವ ಮೆರವಣಿಗೆ ಜ್ಞಾನಜ್ಯೋತಿ ಸಭಾಂಗಣದ ಆವರಣದಲ್ಲಿ ಜರುಗುವುದು.

ಸಮಾರಂಭದ ಅಧ್ಯಕ್ಷತೆಯನ್ನು ನೃಪತುಂಗ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಕರ್ನಾಟಕ ರಾಜ್ಯ ಸರ್ಕಾರದ ಘನತವತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹೋಟ್ ಅವರು ವಹಿಸಲಿದ್ದು, ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷರಾದ ಪ್ರೊ. ಎಂ. ಜಗದೀಶ್ ಕುಮಾರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣವನ್ನು ಮಾಡಲಿದ್ದಾರೆ.

ಕರ್ನಾಟಕ ಸರ್ಕಾರದ ಮಾನ್ಯ ಉನ್ನತ ಶಿಕ್ಷಣ ಸಚಿವರು ಮತ್ತು ನೃಪತುಂಗ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳಾದ ಡಾ. ಎಂ. ಸಿ. ಸುಧಾಕರ್ ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನೃಪತುಂಗ ವಿಶ್ವವಿದ್ಯಾಲಯದ ಆಡಳಿತ ವಿಭಾಗದ ಕುಲಸಚಿವರಾದ ಶಿವನಂದ ಬ. ಕರಾಳೆ ಮತ್ತು ಮೌಲ್ಯಮಾಪನ ಕುಲಸಚಿವರಾದ ಪ್ರೋ.ಎ.ಸಿ. ಮಂಜುಳ ಅವರು ಉಪಸ್ಥಿತರಿದ್ದರು.