ಮನೆ ಮನರಂಜನೆ ಶೀಘ್ರದಲ್ಲೇ ತೆರೆಗೆ ಬರಲಿದೆ ಕ್ರಿಕೆಟಿಗ ಯುವರಾಜ್ ಸಿಂಗ್‌ ಬಯೋಪಿಕ್‌

ಶೀಘ್ರದಲ್ಲೇ ತೆರೆಗೆ ಬರಲಿದೆ ಕ್ರಿಕೆಟಿಗ ಯುವರಾಜ್ ಸಿಂಗ್‌ ಬಯೋಪಿಕ್‌

0

ನವದೆಹಲಿ: ಯುವರಾಜ್ ಸಿಂಗ್ ಅವರ ಎಲ್ಲಾ ಅಭಿಮಾನಿಗಳಿಗೆ ಒಂದು ಖುಷಿಯ ಸುದ್ದಿ ಇದೆ. ಕ್ಯಾನ್ಸರ್‌ ವಿರುದ್ಧ ಹೋರಾಡಿ ಜಯಿಸಿದ ಭಾರತದ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಯುವರಾಜ್ ಸಿಂಗ್ ಅವರ ಬಯೋಪಿಕ್ ನಿರ್ಮಾಣವಾಗುತ್ತಿದೆ. ಅನಾರೋಗ್ಯದಿಂದ ಹಿಡಿದು ವಿಶ್ವಕಪ್ ಎತ್ತುವವರೆಗೆ, ಯುವರಾಜ್ ಅವರ ಪ್ರಯಾಣವು ಸ್ಫೂರ್ತಿದಾಯಕವಾಗಿದ್ದು ಅದು ಈ ಸಿನಿಮಾ ಕತೆಯಾಗಲಿದೆ. ವೆರೈಟಿ ವರದಿಯ ಪ್ರಕಾರ, ಟಿ-ಸೀರೀಸ್‌‌‌ನ ಭೂಷಣ್ ಕುಮಾರ್ ಮತ್ತು 200 ನಾಟ್ ಔಟ್ ಸಿನೆಮಾದ ರವಿ ಭಾಗ್‌ಚಂದ್ಕಾ ಈ ಬಯೋಪಿಕ್‌‌ಗೆ ಜೀವ ತುಂಬಲಿದ್ದಾರೆ. ಸಿನಿಮಾ ತಂಡ ಪಾತ್ರವರ್ಗವನ್ನು ಇನ್ನೂ ಅಂತಿಮಗೊಳಿಸಿಲ್ಲ.

Join Our Whatsapp Group

ಯುವರಾಜ್ ಸಿಂಗ್ ಅವರ ಜೀವನವು ಗೆಲುವು ಮತ್ತು ಉತ್ಸಾಹದ ಕತೆಯಾಗಿದೆ. ಭರವಸೆಯ ಕ್ರಿಕೆಟಿಗನಿಂದ ಹಿಡಿದು ಕ್ರಿಕೆಟ್ ನಾಯಕನಾಗಿ ನಂತರ ನಿಜ ಜೀವನದಲ್ಲಿ ನಾಯಕನಾಗಿ ಸಾಗಿದ ಅವರ ಪ್ರಯಾಣವು ನಿಜವಾಗಿಯೂ ಸ್ಪೂರ್ತಿದಾಯಕವಾಗಿದೆ. ಹೇಳಬೇಕಾದ ಮತ್ತು ಕೇಳಬೇಕಾದ ಕಥೆಯನ್ನು ದೊಡ್ಡ ಪರದೆಗೆ ತರಲು ಮತ್ತು ಅವರ ಅಸಾಧಾರಣ ಸಾಧನೆಗಳನ್ನು ತೋರಿಸಲು ನಮಗೆ ಖುಷಿಯಿದೆ ಎಂದು ಸಿನಿಮಾ ತಂಡ ಹೇಳಿದೆ.

ರವಿ ಭಾಗ್ಚಂದ್ಕಾ ಯುವರಾಜ್ ಸಿಂಗ್ ಅವರನ್ನು “ಎಲ್ಲಾ ಅರ್ಥದಲ್ಲೂ ನಿಜವಾದ ದಂತಕಥೆ” ಎಂದು ಕರೆದಿದ್ದಾರೆ. ಯುವರಾಜ್ ಹಲವು ವರ್ಷಗಳಿಂದ ನನ್ನ ಆತ್ಮೀಯ ಸ್ನೇಹಿತ. ಅವರ ನಂಬಲಾಗದ ಕ್ರಿಕೆಟ್ ಪ್ರಯಾಣವನ್ನು ಸಿನಿಮೀಯ ಅನುಭವವಾಗಿ ಪರಿವರ್ತಿಸಲು ಮುಂದಾಗಿದ್ದು, ನಮ್ಮ ಬಗ್ಗೆ ನಂಬಿಕೆ ಹೊಂದಿರುವುದಕ್ಕೆ ಖುಷಿಯಿದೆ ಎಂದು ಹೇಳಿದ್ದಾರೆ. . ಯುವಿ ಕೇವಲ ವಿಶ್ವ ಚಾಂಪಿಯನ್ ಮಾತ್ರವಲ್ಲ, ಪ್ರತಿಯೊಂದು ಅರ್ಥದಲ್ಲೂ ನಿಜವಾದ ದಂತಕಥೆ ಎಂದು ಅವರು ಹೇಳಿದ್ದಾರೆ.

ಯುವರಾಜ್ ಸಿಂಗ್ ಅವರು ಈ ಚಿತ್ರವು ತಮ್ಮದೇ ಆದ ಸವಾಲುಗಳನ್ನು ಹೊಂದಿದೆ. ಅದಾಗ್ಯೂ ಇತರರಿಗೆ ಸ್ಫೂರ್ತಿ ನೀಡಲು ಬಯಸುತ್ತೇವೆ ಎಂದು ಅವರು ಒತ್ತಿ ಹೇಳಿದರು. “ನನ್ನ ಕಥೆಯನ್ನು ಭೂಷಣ್ ಜಿ ಮತ್ತು ರವಿ ಅವರು ವಿಶ್ವದಾದ್ಯಂತ ನನ್ನ ಲಕ್ಷಾಂತರ ಅಭಿಮಾನಿಗಳಿಗೆ ತಲುಪಿಸಲಿದ್ದಾರೆ. ಎಲ್ಲಾ ಏರಿಳಿತಗಳ ನಡುವೆಯೂ ಕ್ರಿಕೆಟ್ ನನ್ನ ದೊಡ್ಡ ಪ್ರೀತಿ ಮತ್ತು ಶಕ್ತಿಯ ಮೂಲವಾಗಿದೆ. ಈ ಚಿತ್ರವು ಇತರರಿಗೆ ತಮ್ಮದೇ ಆದ ಸವಾಲುಗಳನ್ನು ಜಯಿಸಲು ಮತ್ತು ಅವರ ಕನಸುಗಳನ್ನು ಅಚಲ ಉತ್ಸಾಹದಿಂದ ಮುಂದುವರಿಸಲು ಸ್ಫೂರ್ತಿಯಾಗಲಿ ಎಂದು ನಾನು ಭಾವಿಸುತ್ತೇನೆ, “ಎಂದು ಯುವರಾಜ್‌ ಸಿಂಗ್‌ ಹೇಳಿದರು.

ಯುವರಾಜ್ ಸಿಂಗ್ ತಮ್ಮ 13ನೇ ವಯಸ್ಸಿನಲ್ಲಿ ಪಂಜಾಬ್‌‌ನ ಅಂಡರ್-16 ಕ್ರಿಕೆಟ್ ತಂಡದ ಪರ ಆಡುವ ಮೂಲಕ ಪಾದಾರ್ಪಣೆ ಮಾಡಿದ್ದರು. 2007 ರ ಟಿ 20 ವಿಶ್ವಕಪ್ ನಲ್ಲಿ, ಯುವರಾಜ್ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಗಳನ್ನು ಹೊಡೆಯುವ ಮೂಲಕ ಇತಿಹಾಸ ಬರೆದಿದ್ದರು. ಯುವರಾಜ್ 2019 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.