ಮನೆ ಮನೆ ಮದ್ದು ಅರಿಶಿಣ ಕಾಮಾಲೆ (ಜಾಂಡೀಸ್)

ಅರಿಶಿಣ ಕಾಮಾಲೆ (ಜಾಂಡೀಸ್)

0

1. ಹಣ್ಣು ಹೇರಳೆಯನ್ನು ಹೋಳು ಮಾಡಿ,ಜೀರಿಗೆ ಪುಡಿ ತುಂಬಿ ಒಂದು ರಾತ್ರಿ ಪೂರ್ತಿ ಮಂಜು ಬಿಳುತ್ತಿರುವ ಜಾಗದಲ್ಲಿಡಿ ಮರು ಬೆಳಿಗ್ಗೆ ಬರಿಯ ಹೊಟ್ಟೆಯಲ್ಲಿ ಎರಡು ವಾರಗಳವರೆಗಾದರೂ ರಸ ಕುಡಿಯುತ್ತಿದ್ದರೆ ಅರಸಿನ ಕಾಮಾಲೆ ಗುಣ ಆಗುವುದು .

Join Our Whatsapp Group

2. ಒಂದು ಟಿ ಸ್ಪೂನಿನಷ್ಟು ಹುಣಸೆಗೊಜ್ಜಿನಲ್ಲಿ ಅರ್ಧ ಟೀ ಸ್ಪೂನ್ನಷ್ಟು ಜೀರಿಗೆಯ ಪುಡಿಯನ್ನು ಕಲಸಿ, ಜೇನುತುಪ್ಪದೊಂದಿಗೆ ಒಂದು ವಾರ ಕಾಲವಾದರೂ ಸಾಕು, ಸೇವಿಸುತ್ತಿದ್ದರೆ ಅರಸಿನ ಕಾಮಾಲೆ ದೂರ ಆಗುವುದು.

3. ಕರಿಮೆಣಸು, ಜೇನುತುಪ್ಪವನ್ನು ಮಾವಿನ ಕಾಯಿಗೆ ಸೇರಿಕೊಂಡು ತಿನ್ನುತ್ತಿದ್ದರೆ ಪಿತ್ತಕೋಶ ಶುದ್ದಿ ಯಾಗುವುದರ ಜೊತೆಗೆ ಪಿತ್ತ ರಸವೂ ವೃದ್ಧಿಸುವುದರ ಮೂಲಕ ಅರಿಶಿನ ಕಾಮಾಲೆ ಕಾಣದಂತಾಗುವುದು.

4. ಒಂದು ಬಟ್ಟಲಿನಷ್ಟು ಹಸುವಿನ ನೊರೆ ಹಾಲಿಗೆ ಒಂದು ಟೀ ಸ್ಪೂನಿನಷ್ಟು ಒಣಶುಂಠಿಯ ಪುಡಿಯನ್ನು ಬೆರೆಸಿ,ದಿನವು ಬಿಡದೆ ಒಂದೆರಡು ಬಾರಿ ಸೇವಿಸುತ್ತಾ ಬಂದರೂ ಸಹ ಅರಿಶಿನ ಕಾಮಾಲೆ ಅಥವಾ ಜಾಂಡಿಸ್ ರೋಗದಿಂದ ಸುಲಭವಾಗಿ   ಪಾರಾಗಬಹುದು.

5. ಜೇನುತುಪ್ಪದೊಂದಿಗೆ ಕರಿಮೆಣಸು ಹಾಗೂ ಮಾವಿನ ಕಾಯಿಯನ್ನು ಒಂದೆರಡು ವಾರಗಳ ಕಾಲ ಸೇವಿಸುವುದರಿಂದ ಜಾಂಡಿಸ್ ಗುಣ ಆಗುವುದು.

6. ಎರಡು ಮೂರು ವಾರದವರೆಗೆ ದೊಡ್ಡಪತ್ರೆ ಎಲೆಗಳನ್ನು ಹಲ್ಲುಗಳಿಂದ ಚೆನ್ನಾಗಿ ಅಗಿದು, ರಸವನ್ನು ನಗುತ್ತಿದ್ದರೆ, ಅರಿಶಿನ ಕಾಮಲೆ ಮಾಯವಾಗುವುದು.

7. ಅನಾನಸ್ ಹಣ್ಣಿನ  ಹೋಳುಗಳನ್ನು ಜೇನುತುಪ್ಪದಲ್ಲಿ ಒಂದು ವಾರ ಪೂರ್ತಿ ನೆನೆಹಾಕಿ ಆನಂತರ ದಿನವೂ ಎರಡೆರಡು ಬಾರಿ ಹೋಳುಗಳನ್ನು ತಿನ್ನುತ್ತಿದ್ದರೆ ನಾಲಿಗೆಗೆ ರುಚಿ ಎನಿಸುವುದಿಲ್ಲದೆ ಅರಿಶಿನ ಕಾಮಾಲೆ ರೋಗದಿಂದಲೂ ದೂರ ಆಗಬಹುದು.

8. ಅರಿಶಿನದ ಕೊಂಬನ್ನು ಜೇನುತುಪ್ಪದಲ್ಲಿ ಅರೆದು, ಮಜ್ಜಿಗೆಯಲ್ಲಿ ಬೆರೆಸಿ ದಿನವೂ ಒಂದೆರಡು ಬಾರಿ ಒಂದೆರಡು ವಾರಗಳವರೆಗೆ ಸೇವಿಸುತ್ತಿದ್ದರೆ ಜಾಂಡೀಸ್ ಜಾಡ್ಯದಲ್ಲಿ ಜಾರಿಕೊಳ್ಳಬಹುದು.

9. ಹಸಿ ಈರುಳ್ಳಿಯನ್ನು ದಿನವೂ ಸೇವಿಸುತ್ತಿರುವುದರಿಂದ ಅರಿಶಿನ ಕಾಮಲೆ ಖಾಯಿಲೆ ಹೇಳದೆ ಕೇಳದೆ ಓಡಿ ಹೋಗುವುದು.

10. ಹಲ್ಲುಗಳಿಂದ ಕಬ್ಬನ್ನು ಸಿಗಿದು, ತಿನ್ನುತ್ತಿದ್ದರೆ ಅರಶಿನ ಕಾಮಾಲೆ ಕೆಲವೇ ದಿನಗಳಲ್ಲಿ ಹೇಳ ಹೆಸರಿಲ್ಲದಂತಾಗುವುದು.